ಯೆನೆಪೊಯ ಕಾಲೇಜಿನಲ್ಲಿ ಇಮ್ಯುನೊಹಿಸ್ಟೊಕೆಮಿಸ್ಟ್ರಿ(ಐಎಚ್‌ಸಿ)ಯ ಕಾರ್ಯಾಗಾರ

ಮಂಗಳೂರು, ಆ.11: ದೇರಳಕಟ್ಟೆ ಯೆನೆಪೊಯ ಯುನಿವರ್ಸಿಟಿಯ ಪ್ಯಾಥಾಲಜಿ ಇಲಾಖೆ ಹಾಗೂ ಪೆಥಲಾಜಿಸ್ಟ್ ಮತ್ತು ಮೈಕ್ರೋಬಯಾಲಜಿಸ್ಟ್ ಗಳ ಸಂಘವಾದ ಎಸ್.ಕೆ.ಯುನಿಟ್- ಕೆಸಿಐಎಪಿಎಂ ವತಿಯಿಂದ ಪ್ರಯೋಗ ಶಾಲೆ ಆಧಾರಿತ ಇಮ್ಯುನೊಹಿಸ್ಟೊಕೆಮಿಸ್ಟ್ರಿ(ಐಎಚ್‌ಸಿ)ಯ ಕಾರ್ಯಾಗಾರ ಇತ್ತೀಚೆಗೆ ಯೆನೆಪೊಯ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದಲ್ಲಿ ನಡೆಯಿತು.
ಕಾರ್ಯಾಗಾರದಲ್ಲಿ ಐಎಚ್‌ಸಿಗೆ ಸಂಬಂಧಿಸಿದಂತೆ ಕೌಶಲ್ಯ ವಿಧಾನಗಳನ್ನು ತಿಳಿದುಕೊಂಡು ಸ್ವತಃ ಪರೀಕ್ಷೆ ಮಾಡುವ ತರಬೇತಿ ನೀಡಲಾಯಿತು.
ಕಾರ್ಯಾಗಾರವನ್ನು ಪೆಥಾಲಜಿ ವಿಭಾಗ ಮುಖ್ಯಸ್ಥ ಡಾ. ರಾಮದಾಸ್ ನಾಯಕ್, ಎಸ್.ಕೆ. - ಕೆಸಿಐಎಪಿಎಂ ಅಧ್ಯಕ್ಷ ಹಾಗೂ ಪ್ರೊಫೆಸರ್ ಡಾ. ಪ್ರೇಮಾ ಸಲ್ದಾನ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಎಸ್.ಕೆ. - ಕೆಸಿಐಎಪಿಎಂ ಘಟಕದ ಪದಾಧಿಕಾರಿಗಳಾದ ಡಾ. ಶಾಂತಲಾ ಪಿ.ಆರ್., ಡಾ. ಕೃಷ್ಣಪ್ರಸಾದ್ ಎಚ್.ಎ. ಮತ್ತು ಡಾ. ಸೌಮ್ಯಾ ಬಿ. ಇವರ ಸಹಕಾರದೊಂದಿಗೆ ಕಾರ್ಯಗಾರ ನಡೆಯಿತು.
Next Story





