ರಿಯೋ ಒಲಿಂಪಿಕ್ಸ್: ಬಿಲ್ಲುಗಾರ್ತಿ ದೀಪಿಕಾ ಕುಮಾರಿ, ಬಾಂಬೆಲಾದೇವಿಗೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋಲು

ರಿಯೋ ಡಿ ಜನೈರೊ, ಆ.11: ಭಾರತದ ಭರವಸೆಯ ಬಿಲ್ಲುಗಾರ್ತಿಯರಾದ ದೀಪಿಕಾ ಕುಮಾರಿ ಹಾಗೂ ಬಾಂಬೆಲಾದೇವಿ ರಿಯೋ ಒಲಿಂಪಿಕ್ಸ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಸೋಲುಣ್ಣುವ ಮೂಲಕ ಆರ್ಚರಿಯ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಗುರುವಾರ ಇಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ಹಾಗೂ ಬಾಂಬೆಲಾದೇವಿ ಕೇವಲ 20 ನಿಮಿಷಗಳಲ್ಲಿ ತಮ್ಮ ಹೋರಾಟ ಕೊನೆಗೊಳಿಸಿದರು. ದೀಪಿಕಾ ಅವರು ಚೈನೀಸ್ ತೈಪೆಯ ಆರ್ಚರಿ ಟಾನ್ ಯಾ-ಟಿಂಗ್ ವಿರುದ್ಧ 27-28, 26-29, 27-30 ಅಂತರದಿಂದ ಸೋಲುವ ಮೂಲಕ ಸ್ಪರ್ಧೆಯಿಂದ ಹೊರ ನಡೆದರು.
ಮತೊಂದು ಪಂದ್ಯದಲ್ಲಿ ಬಾಂಬೆಲಾದೇವಿ ಮೆಕ್ಸಿಕೊದ ಅಲೆಜಾಂಡ್ರೊ ವೆಲೆನ್ಸಿಯಾ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವನ್ನು 26-28, 26-23, 27-28, 23-25 ಅಂತರದಿಂದ ಸೋತು ನಿರಾಸೆ ಮೂಡಿಸಿದ್ದಾರೆ.
ದೀಪಿಕಾ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತು ಕೂಟದಿಂದ ಹೊರ ನಡೆದಿದ್ದರು. ಇದೀಗ ಪುರುಷರ ವಿಭಾಗದಲ್ಲಿ ಅತಾನುದಾಸ್ ಆರ್ಚರಿಯಲ್ಲಿ ಭಾರತದ ಏಕೈಕ ಭರವಸೆಯ ಆಟಗಾರನಾಗಿದ್ದು, ಅವರು ಶುಕ್ರವಾರ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಆಡಲಿದ್ದಾರೆ
. ದೀಪಿಕಾ ಅವರು ಬುಧವಾರ ಅಂತಿಮ-32ರ ಸುತ್ತಿನಲ್ಲಿ ಜಾರ್ಜಿಯದ ಕ್ರಿಸ್ಟಿನ್ ಎಸೆಬುಯಾರನ್ನು 6-4 ಹಾಗೂ ಇಟಲಿಯ ಗ್ವಾಂಡಾಲಿನಾ ಸರ್ಟೊರಿ ಅವರನ್ನು 6-2 ಅಂತರದಿಂದ ಸೋಲಿಸಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು.
ಬಾಂಬೆಲಾದೇವಿ ಕೂಡ ಬುಧವಾರ ನಡೆದ ಅಂತಿಮ32ರ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ದೇವಿ ಆಸ್ಟ್ರೀಯದ ಲಾರೆನ್ಸ್ ಬಲ್ಡೊಫ್ ಹಾಗೂ ವಿಶ್ವದ ನಂ.10ನೆ ಆಟಗಾರ್ತಿ ಶಿನಿ-ಚಿಯಾರನ್ನು ತಲಾ 6-2 ಅಂತರದಿಂದ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದ್ದರು
ದೀಪಿಕಾ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತು ಕೂಟದಿಂದ ಹೊರ ನಡೆದಿದ್ದರು. ಇದೀಗ ಪುರುಷರ ವಿಭಾಗದಲ್ಲಿ ಅತಾನುದಾಸ್ ಆರ್ಚರಿಯಲ್ಲಿ ಭಾರತದ ಏಕೈಕ ಭರವಸೆಯ ಆಟಗಾರನಾಗಿದ್ದು, ಅವರು ಶುಕ್ರವಾರ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಆಡಲಿದ್ದಾರೆ. ಗುರುವಾರ ಆರಂಭವಾದ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಮಹಿಳೆಯರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.
ಜ್ವಾಲಾ-ಅಶ್ವಿನಿ ‘ಎ’ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಮಿಸಾಕಿ ಮಟ್ಸುಟೊಮೊ ಹಾಗೂ ಅಯಾಕಾ ಟಕಹಶಿ ವಿರುದ್ಧ 15-21, 10-21 ಸೆಟ್‌ಗಳ ಅಂತರದಿಂದ ಸೋತು ಒಲಿಂಪಿಕ್ಸ್‌ನಿಂದ ಹೊರಗುಳಿದರು.







