ದಾರುನ್ನೂರು: ಪ್ರೊ.ಆಲಿ ಕುಟ್ಟಿ ಉಸ್ತಾದ್‌ಗೆ ಸನ್ಮಾನ

ಮೂಡುಬಿದಿರೆ, ಆ.11: ಧಾರ್ಮಿಕ ವಿದ್ಯೆಯೊಂದಿಗೆ ಲೌಕಿಕ ಜ್ಞಾನ ಕೂಡ ಪ್ರಸಕ್ತ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದ್ದು ಇದರ ಸಾರ್ಥಕತೆಗೆ ಪರಿಸ್ಥಿತಿಗನುಗುಣವಾಗಿ ಸಮನ್ವಯ ಶಿಕ್ಷಣ ನೀಡುವ ದಾರುನ್ನೂರು ವಿದ್ಯಾ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಸಮಸ್ತ ಕೇರಳ ಜಂಇಯತುಲ್ ಉಲಮಾದ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಶೈಖುನಾ ಪ್ರೊ.ಆಲಿಕುಟ್ಟಿ ಉಸ್ತಾದ್ ಹೇಳಿದರು.
ಕಾಶಿಪಟ್ಣದ ದಾರುನ್ನೂರು ಎಜುಕೇಶನ್ ಸೆಂಟರ್ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ, ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮಾತನಾಡಿ, ದಾರುನ್ನೂರು ಸಮಸ್ತದ ಆಶಯಾದರ್ಶದಂತೆ ನಡೆಯುತ್ತಿದ್ದು, ಯಾವುದೇ ಕಾರಣದಿಂದ ಇದನ್ನು ಮುನ್ನಡೆಸಲು ಅಸಾಧ್ಯವಾದಲ್ಲಿ ಇದು ಸಂಪೂರ್ಣವಾಗಿ ಸಮಸ್ತದ ಅಧೀನಕ್ಕೆ ಸೇರುವಂತಹ ಬೈಲಾವನ್ನು ನೋಂದಾಯಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕೋಶಾಧಿಕಾರಿ ಹಾಜಿ ಕೆ.ಎಸ್.ಇಸ್ಮಾಯೀಲ್ ಕಲ್ಲಡ್ಕ, ಸದಸ್ಯರಾದ ಹಾಜಿ ಜಿ.ಅಬೂಬಕರ್ ಗೋಳ್ತಮಜಲು, ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ಹಾಜಿ ಅಬ್ದುಲ್ಲತೀಫ್ ಮದರ್ ಇಂಡಿಯಾ, ಅದ್ದು ಹಾಜಿ ಮಂಗಳೂರು, ಹಾಜಿ ಅಬ್ದುಸ್ಸಮದ್ ಕುದ್ರೋಳಿ, ಹಾಜಿ ರಿಯಾಝುದ್ದೀನ್ ಬಂದರು, ಹಾಜಿ ನೌಷಾದ್ ಸೂರಲ್ಪಾಡಿ, ಹಾಜಿ ಇಬ್ರಾಹೀಂ ಮದೀನಾ, ಶಬೀರ್ ಬಜ್ಪೆ, ಹಾಜಿ ಹಸೈನಾರ್ ಬಂಡಾಡಿ, ಹಾಜಿ ಅಬ್ದುರ್ರಹಾನ್ ಯುನಿಕ್, ಇಸ್ಮಾಯೀಲ್ ತಂಙಳ್ ಉಪ್ಪಿನಂಗಡಿ, ದರ್ವೇಶ್ ಹುದವಿ, ಹಾಜಿ ಅಖ್ತರ್ ಹಾಸ್ಕೋ, ಅಝೀಝ್ ಮಾಲಿಕ್ ಮೂಡುಬಿದಿರೆ ಮುಂತಾದವರು ಉಪಸ್ಥಿತರಿದ್ದರು.
ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಸ್ವಾಗತಿಸಿದರು. ಹಾಜಿ ಮುಹಮ್ಮದ್ ಹನೀಫ್ ವಂದಿಸಿದರು.







