ಪಾಕ್‌ನಲ್ಲಿ ಮತ್ತೆ ಬಾಂಬ್ ಸ್ಫೋಟ: 13 ಮಂದಿಗೆ ಗಾಯ
ಕ್ವೆಟ್ಟ, ಆ. 11: ವಾಯುವ್ಯ ಪಾಕಿಸ್ತಾನದ ನಗರ ಕ್ವೆಟ್ಟದಲ್ಲಿ ಗುರುವಾರ ರಸ್ತೆಬದಿಯಲ್ಲಿಟ್ಟಿದ ಬಾಂಬೊಂದು ಪಾಕಿಸ್ತಾನಿ ಭದ್ರತಾ ಪಡೆಗಳ ವಾಹನಕ್ಕೆ ಬಡಿದಾಗ 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ನಗರದ ಆಸ್ಪತ್ರೆಯೊಂದರಲ್ಲಿ ಭೀಕರ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿದ ಕೆಲವೇ ದಿನಗಳಲ್ಲಿ ಹೊಸದಾಗಿ ಸ್ಫೋಟ ಸಂಭವಿಸಿದೆ. ಹಿಂದಿನ ಸ್ಫೋಟದಲ್ಲಿ ಕನಿಷ್ಠ 74 ಮಂದಿ ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ವಕೀಲರು.
ನ್ಯಾಯಾಧೀಶರೊಬ್ಬರಿಗೆ ಬೆಂಗಾವಲಾಗಿ ಹೋಗುತ್ತಿದ್ದ ಭದ್ರತಾ ಪಡೆಗಳ ವಾಹನವನ್ನು ಗುರಿಯಾಗಿಸಿ ಗುರುವಾರದ ದಾಳಿ ನಡೆಸಲಾಗಿದೆ ಎಂದು ಗೃಹ ಸಚಿವ ಸರ್ಫರಾಝ್‌ಬುಗ್ತಿ ಹೇಳಿದರು. ದಾಳಿಯಲ್ಲಿ ನ್ಯಾಯಾಧೀಶರು ಗಾಯಗೊಂಡಿಲ್ಲ.
Next Story





