ದ.ಚೀನಾ ಸಮುದ್ರ ರಕ್ಷಿಸಲು ಚೀನಾಕ್ಕೆ ಉಪಗ್ರಹದ ನೆರವು
ಶಾಂೈ, ಆ. 11: ತನ್ನ ಸಾಗರ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಚೀನಾಕ್ಕೆ ಹೊಸದಾಗಿ ಉಡಾಯಿಸಲಾದ ಉಪಗ್ರಹವೊಂದು ನೆರವು ನೀಡಲಿದೆ ಎಂದು ಚೀನಾದ ಅಧಿಕೃತ ಪತ್ರಿಕೆ ‘ಚೀನಾ ಡೇಲಿ’ ಗುರುವಾರ ವರದಿ ಮಾಡಿದೆ.
ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿ ಕಳೆದ ತಿಂಗಳು ಅಂತಾರಾಷ್ಟ್ರೀಯ ನ್ಯಾಯಮಂಡಳಿಯೊಂದು ಚೀನಾಕ್ಕೆ ಪ್ರತಿಕೂಲ ತೀರ್ಪನ್ನು ನೀಡಿದ ಬಳಿಕ ಈ ಪ್ರದೇಶದಲ್ಲಿ ಉಂಟಾದ ಉದ್ವಿಗ್ನತೆಯ ಬೆನ್ನಿಗೇ ಚೀನಾ ಈ ಕ್ರಮಕ್ಕೆ ಮುಂದಾಗಿದೆ.
Next Story





