ವಿದ್ಯುತ್ ಸ್ಥಾವರದಲ್ಲಿ ಸ್ಫೋಟ
ಕನಿಷ್ಠ 21 ಸಾವು
ಬೀಜಿಂಗ್, ಆ. 11: ಮಧ್ಯ ಚೀನಾದ ಡಾನ್ಯಂಗ್ ನಗರದ ವಿದ್ಯುತ್ ಸ್ಥಾವರವೊಂದರಲ್ಲಿ ಅತಿ ಒತ್ತಡದ ಸ್ಟೀಮ್ ಪೈಪೊಂದು ಗುರುವಾರ ಸ್ಫೋಟಗೊಂಡಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಹಾಗೂ ಸ್ಫೋಟದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅದು ಹೇಳಿದೆ.
ಚೀನಾದಲ್ಲಿ ಪದೇ ಪದೇ ಕೈಗಾರಿಕಾ ಅಪಘಾತಗಳು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕಾರ್ಖಾನೆಗಳು, ವಿದ್ಯುತ್ ಸ್ಥಾವರಗಳು ಮತ್ತು ಗಣಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಕೇಂದ್ರ ಸರಕಾರ ಇತ್ತೀಚೆಗೆ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಒಂದು ವರ್ಷದ ಹಿಂದೆ ಪೂರ್ವದ ಬಂದರು ನಗರ ಟಿಯಾನ್‌ಜಿನ್‌ನಲ್ಲಿನ ರಾಸಾಯನಿಕ ಸಂಗ್ರಹಾಗಾರ ಸ್ಫೋಟಗೊಂಡು 173 ಮಂದಿ ಮೃತಪಟ್ಟಿದ್ದರು.
Next Story





