ಕೋಡಿಂಬಾಳ: ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆ
ಕಡಬ, ಆ.11: ಇಲ್ಲಿನ ಕೋಡಿಂಬಾಳ ರೈಲ್ವೆ ನಿಲ್ದಾಣದ ಬಳಿ ರೈಲಿನಡಿಗೆ ತಲೆ ಇಟ್ಟು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸುಳ್ಯ ತಾಲೂಕು ಏನೆಕಲ್‌ನ ಬಾಲಾಡಿ ನಿವಾಸಿ ಕುಮಾರ ಗೌಡ ಎಂಬವರ ಪುತ್ರ ಪೋಷಕಿರಣ್ ಯಾನೆ ಪ್ರೇಮ್(40) ಎಂದು ಗುರುತಿಸಲಾಗಿದೆ. ಇವರು ಕೋಡಿಂಬಾಳ ರೈಲ್ವೆ ನಿಲ್ದಾಣದ ಸಮೀಪ ಬೈಕನ್ನು ನಿಲ್ಲಿಸಿ ರೈಲು ಬರುವ ವೇಳೆ ರೈಲಿನಡಿಗೆ ತಲೆ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ತಕ್ಷಣ ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮೃತರ ಗುರುತು ಪತ್ತೆಹಚ್ಚಿ ಮನೆಯವರಿಗೆ ಮಾಹಿತಿ ನೀಡಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಪತ್ನಿ ಹಾಗೂ ಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story





