ಶಾರ್ಜಾ: ಭಾರತೀಯ ಉದ್ಯಮಿಯ ಚಿಂತಾಜನಕ ಕತೆ

ಕಳೆದ ಐದು ತಿಂಗಳಿಂದ ಶಾರ್ಜಾದ ಕುವೈತ್ ಆಸ್ಪತ್ರೆಯಲ್ಲಿ 43 ವರ್ಷದ ಕೇರಳದ ಉದ್ಯಮಿ ಮೂಸಕುಟ್ಟಿ ಚಲನೆಯಿಲ್ಲದೆ ಬಿದ್ದಿದ್ದರು. ಚೆಕ್ ಬೌನ್ಸ್ ಆಗಿದ್ದ ಕಾರಣ ರಾಸ್ ಅಲ್ ಖಾಯ್ಮ್ ನ್ಯಾಯಾಲಯವು ಅವರ ಸ್ವದೇಶ ಪ್ರಯಾಣವನ್ನು ನಿಷೇಧಿಸಿದೆ. ಹೀಗಾಗಿ ಕೇರಳದ ಪಟ್ಟಂಬಿಯಲ್ಲಿರುವ ತಮ್ಮ ಮನೆಗೆ ವಾಪಾಸಾಗುವುದು ಅವರಿಗೆ ಅಸಾಧ್ಯವಾಗಿದೆ. ಕೊನೆಯ ಬಾರಿ ಅವರು 2005ರಲ್ಲಿ ಹನ್ನೊಂದು ವರ್ಷಗಳ ಹಿಂದೆ ತಮ್ಮ ಮನೆಗೆ ಬಂದಿದ್ದರು. ಆ ನಂತರ ತಮ್ಮ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗೇ ಇಲ್ಲ. ಕಳೆದ ಮೂರು ತಿಂಗಳಿಂದ ಮೂಸಕುಟ್ಟಿ ಬಳಿ ಅವರ ಸಹೋದರ ಹೈದರ್ ಆಸ್ಪತ್ರೆಯಲ್ಲಿದ್ದರು. ಭಾರತದಿಂದ ಮೂಸಕುಟ್ಟಿಯನ್ನು ನೋಡಿಕೊಳ್ಳಲೆಂದೇ ವೀಸಾ ಮೇಲೆ ಹೈದರ್ ಹೋಗಿದ್ದರು. ಆದರೆ ಭಾನುವಾರ ಮೂಸಕುಟ್ಟಿಯನ್ನು ಅಲ್ಲೇ ಬಿಟ್ಟು ಹೈದರ್ ವಾಪಾಸಾಗುತ್ತಿದ್ದಾರೆ.
ಸಮಸ್ಯೆ ಆರಂಭ
ಮೂಸಕುಟ್ಟಿ 2004ರಲ್ಲಿ ರಾಸ್ ಅಲ್ ಖೈಮಾಹಲ್ಲಿ ಕಟ್ಟಡ ನಿರ್ಮಾಣ ವಸ್ತುಗಳ ಮಳಿಗೆ ನಡೆಸುತ್ತಿದ್ದರು. ಮೊದಲ ಎರಡು ವರ್ಷಗಳಿಗೆ ಎಲ್ಲವೂ ಚೆನ್ನಾಗಿತ್ತು. 2006ರಿಂದ ಅವರ ಉದ್ಯಮದಲ್ಲಿ ನಷ್ಟವಾಗಿ ವ್ಯಾಪಕ ಸಾಲಗಳಾದವು. ಅದರಿಂದ ಅವರು ಮೇಲೇಳಲೇ ಸಾಧ್ಯವಾಗಲಿಲ್ಲ. ತಪ್ಪು ಉದ್ಯಮ ನಿರ್ಧಾರಗಳು ಈ ಸಮಸ್ಯೆಗಳಿಗೆ ಕಾರಣವಾದವು ಎನ್ನುತ್ತಾರೆ ಹೈದರ್. ರಾಸ್ ಅಲ್ ಖೈಮಾಹದಲ್ಲಿ ಪ್ರಾಯೋಜಕತ್ವದಲ್ಲಿ ಕೆಲವು ಸಮಸ್ಯೆಗಳಾಗಿ ಅವರಿಂದ ದೂರವಾಗಿದ್ದರು. ಪ್ರಾಯೋಜಕರೂ ಅವರ ವಿರುದ್ಧ ಮೊಕದ್ದಮೆ ಹೂಡಿದ್ದರು. ಅಲ್ಲದೆ ಗ್ರಾಹಕರು ಹಲವಾರು ಚೆಕ್ ಕುರಿತ ಮೊಕದ್ದಮೆಗಳನ್ನು ಹಾಕಿದ್ದಾರೆ. ಫಲಿತಾಂಶವಾಗಿ 2007ರಲ್ಲಿ ಮೊದಲ ಬಾರಿಗೆ ಜೈಲಿಗೆ ಹೋಗಬೇಕಾಗಿ ಬಂದಿತ್ತು ಎನ್ನುತ್ತಾರೆ ಹೈದರ್. ಮೂಸಕುಟ್ಟಿಯ ಮೊದಲ ಜೈಲು ಶಿಕ್ಷೆ ಬಹಳದಿನ ಸಾಗಲಿಲ್ಲ. ಆದರೆ ನಂತರವೂ ಅವರಿಗೆ ಸಮಾಧಾನ ಸಿಗಲಿಲ್ಲ. 2008ರಲ್ಲಿ ಬಿಡುಗಡೆಯಾದ ಮೇಲೆ ಪ್ರಾಯೋಜಕರು ಅವರ ಮೇಲೆ ಸಿವಿಲ್ ಕೇಸ್ ಹಾಕಿದ್ದರು. ಹೀಗಾಗಿ ಮೂಸಕುಟ್ಟಿ ಪ್ರಾಯೋಜಕರಿಗೆ 5 ಲಕ್ಷ ಧಿರ್ ಹಮ್ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಆಗ ಮೂಸಕುಟ್ಟಿ ಪೂರ್ಣವಾಗಿ ನಷ್ಟದಲ್ಲಿದ್ದು ತಮ್ಮ ತವರಿನಲ್ಲಿ ಕಟ್ಟಿದ ಮನೆಯನ್ನೂ ಮಾರಬೇಕಾಗಿ ಬಂದಿತ್ತು ಎನ್ನುತ್ತಾರೆ ಹೈದರ್. ಸಿವಿಲ್ ಕೇಸ್ ತೀರ್ಪು ಬಂದ ಮೇಲೆ ಮೂಸಕುಟ್ಟಿಗೆ ಮೂರು ವರ್ಷಗಳ ಜೈಲಾಯಿತು. 2015ರಲ್ಲಿ ಜೈಲಿನಿಂದ ಹೊರ ಬಂದ ಮೂಸಕುಟ್ಟಿ ಈಗಲೂ ಪ್ರಾಯೋಜಕರಿಗೆ ಹಣ ನೀಡಿಲ್ಲವೆಂದು ತವರಿನ ಪ್ರಯಾಣಕ್ಕೆ ನಿಷೇಧ ಹೇರಲಾಗಿದೆ.
ಶಾರ್ಜಾದಲ್ಲಿ ಸ್ನೇಹಿತನ ಜೊತೆಗೆ ನೆಲೆಸಿರುವ ಮೂಸಕುಟ್ಟಿಗೆ ಹೃದಯಾಘಾತವಾಗಿ ಕುವೈತ್ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರ ಪ್ರಕಾರ ಅವರಿಗೆ ಹೃದಯಾಘಾತವಾಗಿ ಬಲಬದಿ ಚಲನೆರಹಿತವಾಗಿದೆ. ಈಗ ಅವರು ಮಾತನಾಡಲೂ ಸಾಧ್ಯವಾಗುತ್ತಿಲ್ಲ ಮತ್ತು ಆಹಾರವನ್ನೂ ಸೇವಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಸ್ನೇಹಿತರು ಮತ್ತು ಬಂಧುಗಳು ಆಗಾಗ್ಗೆ ಬರುವುದು ಹೊರತಾಗಿ ಆಸ್ಪತ್ರೆ ಸಿಬ್ಬಂದಿಯೇ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಹಣವಿಲ್ಲದೆಯೇ ಆಸ್ಪತ್ರೆ ಅವರ ಆರೈಕೆ ಮಾಡುತ್ತಿದೆ ಎನ್ನುತ್ತಾರೆ ಹೈದರ್.
ಹೈದರ್ ಈಗಾಗಲೇ ಸಾಧ್ಯವಾದ ಎಲ್ಲಾ ಕಡೆ ಸಹಾಯಕ್ಕಾಗಿ ಕೇಳಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ಪ್ರಾಯೋಜಕರ ಜೊತೆ ಮಾತನಾಡಿದ ಮೇಲೆ 1 ಮಿಲಿಯ ಧಿರ್ ಹಮ್ ಪಾವತಿಸಿದರೆ ಪ್ರಯಾಣ ನಿಷೇಧ ತೆಗೆಯುವ ಭರವಸೆ ಸಿಕ್ಕಿದೆ. ಆದರೆ ಕುಟುಂಬದ ಬಳಿ ಅಷ್ಟು ಹಣವಿಲ್ಲ. ಹೈದರ್ ಯುಎಇಯಲ್ಲಿ ಭಾರತೀಯ ಸಂಸ್ಥೆಗಳ ಬಳಿ ಮೂಸಕುಟ್ಟಿಗೆ ಸಾಲ ಕಟ್ಟಲು ನೆರವಾಗುವಂತೆ ಕೇಳಿಕೊಂಡಿದ್ದಾರೆ. ಇದೇ ಭರವಸೆಯಲ್ಲಿ ಅವರು ಭಾರತಕ್ಕೆ ಹಿಂತಿರುಗಿದ್ದಾರೆ.
ಕೃಪೆ: khaleejtimes.com







