ಭಾರತದಿಂದ ಬಾಂಗ್ಲಾಕ್ಕೆ ತಲುಪಿದ ಗಜರಾಜ
ಈ ಆನೆಗೆ ನಡೆದದ್ದೇ ದಾರಿ

ಪ್ರವಾಹದಿಂದ ತಮ್ಮ ಹಿಂಡಿನಿಂದ ದೂರವಾದ ಆನೆಯೊಂದು 1000 ಕಿ.ಮೀ. ಪ್ರಯಾಣ ಬೆಳೆಸಿ ಭಾರತದಿಂದ ಬಾಂಗ್ಲಾದೇಶಕ್ಕೆ ಹೋಗುವ ರಸ್ತೆಯಲ್ಲಿ ನಾಟಕೀಯ ರಕ್ಷಣೆಯಾಗಿದೆ. ಹತಾಶ ಹೆಣ್ಣಾನೆಯನ್ನು ಟ್ರಾಂಕ್ವಿಲೈಸರ್ ಮೂಲಕ ತಡೆಯಲಾಗಿದೆ. ಆದರೆ ಇಂಜಕ್ಷನ್ ತಗುಲುತ್ತಲೇ ಹೊಂಡಕ್ಕೆ ಬಿದ್ದ ಆನೆಯನ್ನು ಸ್ಥಳೀಯ ಗ್ರಾಮಸ್ಥರು ತುಂಬಿ ಹರಿಯುತ್ತಿದ್ದ ನೀರಿನಿಂದ ರಕ್ಷಿಸಿ ಸ್ಥಳೀಯ ಪಶುವೈದ್ಯರ ಬಳಿ ಕೊಂಡೊಯ್ದಿದ್ದಾರೆ. ಪ್ರಜ್ಞೆ ಕಳೆದುಕೊಂಡ ಆನೆಯನ್ನು ಕಂಡ ಕೂಡಲೇ ನೂರಾರು ಗ್ರಾಮಸ್ಥರು ಅದರ ರಕ್ಷಣೆಗೆ ಧಾವಿಸಿದರು. ಜನರು ಹಿಂದೆ ಹಿಂದೆ ಹೊಂಡಕ್ಕೆ ಹಾರಿ ಪ್ರಾಣಿಯ ಸುತ್ತ ಹಗ್ಗ ಮತ್ತು ಚೈನ್ ಕಟ್ಟಿ ಅದನ್ನು ರಕ್ಷಿಸಿದರು. ಅಂತಿಮವಾಗಿ ನೂರಾರು ಗ್ರಾಮಸ್ಥರ ನೆರವಿನಿಂದ ಆನೆಯನ್ನು ಹೊಂಡದಿಂದ ಮೇಲೆತ್ತಲಾಯಿತು ಎಂದು ಸ್ಥಳದಲ್ಲಿದ್ದ ಸೈಯದ್ ಹುಸೈನ್ ಹೇಳಿದ್ದಾರೆ.
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಗಂಭೀರ ಪ್ರವಾಹಕ್ಕೆ ಈ ಆನೆ ತನ್ನ ಹಿಂಡಿನಿಂದ ದೂರವಾಗಿ ಗಡಿಯಾಚೆಗೆ ಹೋಗಿದೆ. ಪರಿಸರ ಸಂರಕ್ಷಕ ಅಶಿತ್ ರಂಜನ್ ಪೌಲ್ ಪ್ರಕಾರ ಈ ಆನೆ ಕಳೆದ ಆರು ವಾರಗಳಲ್ಲಿ ಸುಮಾರು 621 ಮೈಲುಗಳಷ್ಟು ದೂರ ಸಾಗಿ ಬಾಂಗ್ಲಾದೇಶ ತಲುಪಿದೆ. ಬಾಂಗ್ಲಾದೇಶ ಅರಣ್ಯ ಅಧಿಕಾರಿಗಳು ಆನೆಯನ್ನು ಸಫಾರಿ ಉದ್ಯಾವನಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಸಮೀಪದಲ್ಲಿ ಸೂಕ್ತ ದಾರಿಗಳಿಲ್ಲದ ಕಾರಣ ಸದ್ಯಕ್ಕೆ ಆನೆ ಈಗಿರುವ ಸ್ಥಳದಲ್ಲೇ ಇರಲಿದೆ. ಔಷಧಿ ಮತ್ತು ಆಹಾರ ಕೊಡಲಾಗುವುದು. ಒಮ್ಮೆ ಆನೆಗೆ ಬಲ ಬಂದ ಮೇಲೆ ಮಾವುತರನ್ನು ಮತ್ತು ಪಳಗಿದ ಆನೆಗಳನ್ನು ಬಳಸಿ ಸಫಾರಿ ಉದ್ಯಾನವನಕ್ಕೆ ಕಳುಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳ ತಂಡದ ತಪನ್ ಕುಮಾರ್ ಡೇ ಹೇಳಿದ್ದಾರೆ.
ಮೂವರು ಭಾರತೀಯ ವನ್ಯಜೀವಿ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶಕ್ಕೆ ತೆರಳಿ ಆನೆಯ ಚಿಕಿತ್ಸೆಗೆ ನೆರವಾಗಿದ್ದಾರೆ. ಆನೆ ಬಹಳ ದುರ್ಬಲವಾಗಿದ್ದು ತನ್ನ ಸೊಂಡಿಲನ್ನೂ ಎತ್ತುತ್ತಿಲ್ಲ. ದೂರದಿಂದಲೇ ಮೂಳೆಗಳು ಕಾಣಿಸುತ್ತಿವೆ ಎಂದು ರಿತೇಶ್ ಭಟ್ಟಾಚಾರ್ಜೀ ಹೇಳಿದ್ದಾರೆ.
ಕೃಪೆ: khaleejtimes.com







