ಉಪ್ಪಿನಂಗಡಿ: ಟಿಪ್ಪರ್ ಪಲ್ಟಿ; ನಾಲ್ವರು ಗಂಭೀರ
ಉಪ್ಪಿನಂಗಡಿ, ಆ.12: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಟಿಪ್ಪರೊಂದು ಪಲ್ಟಿಯಾಗಿ ಟಿಪ್ಪರ್‌ನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಗಾಯಾಳುಗಳನ್ನು ಟಿಪ್ಪರ್ ಚಾಲಕ ಶಿವಾನಂದ ಹಾಗೂ ಕಾರ್ಮಿಕರಾದ ಹರೀಶ್, ಶೇಖರ್, ರಾಜೇಶ್ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Next Story





