ಅರ್ಹತಾ ಸುತ್ತಿನಲ್ಲೇ ವಿಕಾಸ್ ಗೌಡ ಔಟ್

ರಿಯೋ ಡಿ ಜನೈರೊ, ಆ.12: ಪದಕದ ಭರವಸೆ ಮೂಡಿಸಿದ್ದ ಕರ್ನಾಟಕದ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಅವರು ಅರ್ಹತಾ ಸುತ್ತಿನಲ್ಲಿ 28ನೆ ಸ್ಥಾನದೊಂದಿಗೆ ನಿರ್ಗಮಿಸಿದ್ದಾರೆ.
ಮೂರನೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ವಿಕಾಸ್ ಗೌಡ ಅವರು ಮೊದಲ ಯತ್ನದಲ್ಲಿ 57.59 ಮೀ.(10ನೆ ಸ್ಥಾನ), ಎರಡನೆ ಯತ್ನದಲ್ಲಿ 58.99 ಮೀ.(14ನೆ ಸ್ಥಾನ) ಮತ್ತು ಮೂರನೆ ಯತ್ನದಲ್ಲಿ 58 .70 ಮೀ.(16ನೆ ಸ್ಥಾನ) ದೂರಕ್ಕೆ ಡಿಸ್ಕಸ್‌ನ್ನು ಎಸೆದರೂ ಅಂತಿಮ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಎಡವಿದರು.
Next Story





