ಆರೋಪಿ ನಿರಂಜನ್ ಭಟ್‌ಗೆ 4 ದಿನ ಪೊಲೀಸ್ ಕಸ್ಟಡಿ

ಉಡುಪಿ, ಆ.12: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆದಾಖಲಾಗಿದ್ದ ಆರೋಪಿ ನಿರಂಜನ್ ಭಟ್‌ನನ್ನು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ತಡರಾತ್ರಿ ಉಡುಪಿ ನ್ಯಾಯಾಧೀಶರ ಮುಂದೆ ಬಿಗಿಪೊಲೀಸ್ ಭದ್ರತೆಯೊಂದಿಗೆ ಹಾಜರು ಪಡಿಸಲಾಯಿತು.
ತನಿಖಾಧಿಕಾರಿ ಸುಮನಾ ನೇತೃತ್ವದಲ್ಲಿ ನಿರಂಜನ್ ಭಟ್‌ನನ್ನು ನ್ಯಾಯಾಧೀಶ ರಾಜೇಶ್‌ಕರ್ಣನ್‌ರ ನಿವಾಸದಲ್ಲಿ ಹಾಜರುಪಡಿಸಿ 1 ವಾರಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿವಂತೆ ಮನವಿ ಮಾಡಲಾಯಿತು. ಆದರೆ ನ್ಯಾಯಾಧೀಶರು ಆ.16ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.
ನಿರಂಜನ್ ಭಟ್‌ನನ್ನು ರಾಜೇಶ್ವರಿ ಹಾಗೂ ನವನೀತ್ ಜೊತೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಿದ್ಧತೆಯನ್ನು ಪೊಲೀಸರು ನಡೆಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರಾತ್ರಿ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
Next Story





