ಸಾನಿಯಾ-ಬೋಪಣ್ಣ ಕ್ವಾರ್ಟರ್‌ಫೈನಲ್‌ಗೆ

ರಿಯೋ ಡಿ ಜನೈರೊ, ಆ.12: ಭಾರತಕ್ಕೆ ಪದಕ ಭರವಸೆ ಮೂಡಿಸಿರುವ ಟೆನಿಸ್ ಜೋಡಿ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಬೋಪಣ್ಣ ಅವರು ಆಸ್ಟೇಲಿಯದ ಜೋಡಿ ಸಮಂತಾ ಸ್ಟೋಸರ್ ಹಾಗೂ ಜಾನ್ ಪೀರ್ಸ್‌ರನ್ನು 73 ನಿಮಿಷಗಳ ಹೋರಾಟದಲ್ಲಿ 7-5, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ನಾಲ್ಕನೆ ಶ್ರೇಯಾಂಕದ ಸಾನಿಯಾ-ಬೋಪಣ್ಣ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್‌ನ ಶ್ರೇಯಾಂಕರಹಿತ ಜೋಡಿ ಆ್ಯಂಡಿ ಮರ್ರೆ ಹಾಗೂ ಹೀಥರ್ ವ್ಯಾಟ್ಸನ್‌ರನ್ನು ಎದುರಿಸಲಿದ್ದಾರೆ. ಮರ್ರೆ-ವ್ಯಾಟ್ಸನ್ ಜೋಡಿ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಡೇವಿಡ್ ಫೆರರ್ ಹಾಗೂ ಕಾರ್ಲ ಸುಯರೆಝ್‌ರನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿತ್ತು.
ಸಾನಿಯಾ ನಾಲ್ಕು ವರ್ಷಗಳ ಹಿಂದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್ ಪೇಸ್‌ರೊಂದಿಗೆ ಮಿಶ್ರ ಡಬಲ್ಸ್ ಪಂದ್ಯ ಆಡಿದ್ದರು.
Next Story





