ಒಲಿಂಪಿಕ್ಸ್‌ನಲ್ಲಿ ಫಿಜಿಗೆ ಐತಿಹಾಸಿಕ ಚಿನ್ನ

ರಿಯೋ ಡಿಜನೈರೊ, ಆ.12: ಪುಟ್ಟ ರಾಷ್ಟ್ರ ಫಿಜಿ ಮೊತ್ತ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿದೆ. ಒಲಿಂಪಿಕ್ಸ್ ಪದಕ ಗೆದ್ದ ಸಂಭ್ರಮದಲ್ಲಿ ದೇಶದಲ್ಲಿ ಶುಕ್ರವಾರ ಸಾರ್ವಜನಿಕ ರಜೆ ಘೋಷಿಸಲಾಗಿದ್ದು, ಜನರು ರಸ್ತೆ ಬದಿಗಳಲ್ಲಿ ಡ್ಯಾನ್ಸ್ ಮಾಡುತ್ತಾ ಸಂಭ್ರಮಾಚರಣೆ ಯಲ್ಲಿ ತೊಡಗಿದರು.
ದಕ್ಷಿಣ ಪೆಸಿಫಿಕ್‌ನ ದ್ವೀಪರಾಷ್ಟ್ರ ಫಿಜಿ ಗುರುವಾರ ರಿಯೋ ಒಲಿಂಪಿಕ್ಸ್‌ನಲ್ಲಿ ಏಪಕ್ಷೀಯವಾಗಿ ಸಾಗಿದ ರಗ್ಬಿ ಸೆವೆನ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 47-7 ಅಂತರದಿಂದ ಮಣಿಸಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿತು.
ಫಿಜಿ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನ. ದೇಶದ ಪ್ರತಿ ನಾಗರಿಕನೂ ಗೆಲುವಿನ ಸಂಭ್ರಮ ಆಚರಿಸುತ್ತಿದ್ದಾನೆ ಎಂದು ಸುವಾದ ಪ್ರಮುಖ ಸ್ಟೇಡಿಯಂನಲ್ಲಿ ದೈತ್ಯ ಪರದೆಯಲ್ಲಿ ಫೈನಲ್ ಪಂದ್ಯ ವೀಕ್ಷಿಸಿದ ಫೋಟೊಗ್ರಾಫರ್ ಫಿರೋಝ್ ಖಲೀಲ್ ಹೇಳಿದ್ದಾರೆ.
Next Story





