ಶ್ರೀಕಾಂತ್ ಗೆಲುವಿನಾರಂಭ
ರಿಯೋ ಡಿ ಜನೈರೊ, ಆ.12: ಭಾರತದ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಪುರುಷರ ಸಿಂಗಲ್ಸ್‌ನ ‘ಎಚ್’ ಗುಂಪಿನ ಮೊದಲ ಪಂದ್ಯದಲ್ಲಿ ಮೆಕ್ಸಿಕೊದ ಎದುರಾಳಿ ಲಿನೊ ಮುನೊಝ್ ವಿರುದ್ಧ 21-11, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿ ಗೆಲುವಿನಾರಂಭ ಮಾಡಿದರು.
ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಪುರುಷ ಶಟ್ಲರ್ ಆಗಿರುವ ಶ್ರೀಕಾಂತ್ ಆರನೆ ದಿನವಾದ ಗುರುವಾರ ಭಾರತಕ್ಕೆ ಉತ್ತಮ ಅಂತ್ಯ ನೀಡಿದರು.
ಇದಕ್ಕೆ ಮೊದಲು ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಮಹಿಳೆಯರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದರು.
Next Story





