ಎಸ್‌ಕೆಎಫ್‌ನಿಂದ ಆಳ್ವಾಸ್‌ಗೆ ‘ಸುಜಲ’ ಕೊಡುಗೆ
.jpg)
ಮೂಡುಬಿದಿರೆ, ಆ.12: ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿನ ‘ಸುಜಲ’ ಪರಿಶುದ್ಧ ಮಿನರಲ್ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಆಳ್ವಾಸ್ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಮತ್ತು ಆಳ್ವಾಸ್ ಪಿಯುಸಿ ಕಾಲೇಜಿಗೆ ಕೊಡುಗೆಯಾಗಿ ನೀಡಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ಮಾತನಾಡಿ, ಆರೋಗ್ಯವಂತರಾಗಿರಲು ಶುದ್ಧ ನೀರು ಸೇವನೆ ಅಗತ್ಯ. ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ ಶುದ್ಧ ನೀರನ್ನು ಪೂರೈಸುತ್ತಿರುವುದು ಶ್ಲಾನಾರ್ಹ. ಎಸ್‌ಕೆಎಫ್‌ನ ಸುಜಲ ಮೂಲಕ ನಮ್ಮ ಆವರಣದಲ್ಲಿ ದಿನದ 24 ಗಂಯೂ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.
ಎಸ್‌ಕೆಎಫ್ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮಕೃಷ್ಣ ಆಚಾರ್ ಮಾತನಾಡಿ, ಮನುಷ್ಯನಿಗೆ ಬರುವ ಅನೇಕ ಕಾಯಿಲೆಗಳಿಗೆ ಕಲುಷಿತ ನೀರು ಸೇವನೆಯೇ ಕಾರಣ.ಪರಿಶುದ್ಧ ನೀರು ಕುಡಿಯುವ ಮೂಲಕ ರೋಗಗಳನ್ನು ನಿಯಂತ್ರಿಸಬಹುದು. ಶುದ್ಧ ನೀರು ಪೂರೈಸುವುದು ಸರಕಾರದ ಜತೆಗೆ ಎಲ್ಲ ಸಂಘ, ಸಂಸ್ಥೆಗಳ ಆದ್ಯ ಕರ್ತವ್ಯ ಎಂದರು.
ಎಲಿಕ್ಸರ್ ಮಾರುಕಟ್ಟೆ ಮುಖ್ಯಸ್ಥ ಶ್ರೀನಿಧಿ ಅಯ್ಯಂಗಾರ್, ಎಸ್‌ಕೆಎಫ್‌ನ ಮ್ಯಾನೇಜರ್ ರಾಮದಾಸ್ ಪ್ರಭು, ಡಾ.ಹರೀಶ್ ನಾಯಕ್, ಡಾ.ಸದಾನಂದ ನಾಯಕ್, ಆಳ್ವಾಸ್‌ನ ವಿಶ್ವಸ್ಥ ಮಂಡಳಿ ಸದಸ್ಯ ದೇವಿಪ್ರಸಾದ್ ಶೆಟ್ಟಿ, ಆಳ್ವಾಸ್ ಹಾಸ್ಟೆಲ್ ವಾರ್ಡನ್ ರಾಜೇಶ್ ಉಪಸ್ಥಿತರಿದ್ದರು.







