Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇದು ಗುಜರಾತ್ ನ ಮತ್ತೊಂದು ಉನಾ

ಇದು ಗುಜರಾತ್ ನ ಮತ್ತೊಂದು ಉನಾ

99 ಶೇ. ಸಾಕ್ಷರತೆ, 100 ಶೇ. ದಲಿತರ ಶೋಷಣೆ

ವಾರ್ತಾಭಾರತಿವಾರ್ತಾಭಾರತಿ13 Aug 2016 12:00 PM IST
share
ಇದು ಗುಜರಾತ್ ನ ಮತ್ತೊಂದು ಉನಾ

ಮೆಹಸಾನಾ,ಆ.13: ಗುಜರಾತ್ ರಾಜ್ಯದ ವಿಜಯಪುರ ತಾಲೂಕಿನ ದಗವಡಿಯ ಗ್ರಾಮದಲ್ಲಿ ಸಾಕ್ಷರತೆ ಪ್ರಮಾಣ ಶೇ. 99 ರಷ್ಟಿದೆ. ಇದು ಇಡೀ ರಾಜ್ಯದ ಸಾಕ್ಷರತೆ ಪ್ರಮಾಣ ಶೇ. 79.31 ಗಿಂತ ಬಹಳಷ್ಟು ಹೆಚ್ಚು. ಆದರೆ ವಿಪರ್ಯಾಸವೆಂದರೆ ಈ ಗ್ರಾಮದ ಹೆಚ್ಚಿನವರಿಗೆ ತಾವು ಪಡೆದ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ದೊರೆತಿಲ್ಲ. ಅಶ್ವಿನ್ ಚಾಮರ್ ಎಂಬ ಯುವಕ ಹಿಂದಿಯಲ್ಲಿ ಬಿಎ ಪದವಿ ಪಡೆದು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಉದ್ಯೋಗ ದೊರೆಯದೆ ಗಾರೆ ಕೆಲಸವನ್ನು ಮಾಡುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಯುವಕರ ಗುಂಪೊಂದರ ನಡುವೆ ನಡೆದ ಜಗಳದ ಪರಿಣಾಮ ಇಲ್ಲಿನ ಚಾಮರ ದಲಿತ ಸಮುದಾಯ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಸೇರಿದ ಚೌಧರಿ ಸಮುದಾಯದ ನಡುವಿನ ಸಂಬಂಧಗಳು ಕೆಟ್ಟು ಹೋಗಿದ್ದವು. ಸತ್ತ ದನಗಳ ಚರ್ಮ ಸುಲಿಯುವ ವೃತ್ತಿ ಮಾಡುವ ಚಾಮರ ಸಮುದಾಯ ಹಳ್ಳಿಯನ್ನು ತೊರೆಯುವ ನಿರ್ಧಾರ ಕೈಗೊಂಡಿತ್ತಾದರೂ ಚೌಧರಿಗಳೊಂದಿಗೆ ಹೊಂದಾಣಿಕೆಗೆ ಬಂದಿತ್ತು. ಕಾರಣ ಮೆಹಸಾನದಲ್ಲಿರುವ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ಪ್ರತಿ ಬಾರಿ ವಾಹನ ಏರ್ಪಾಟು ಮಾಡಿ ಹೋಗುವಷ್ಟು ಅವರು ಸ್ಥಿತಿವಂತರಾಗಿರಲಿಲ್ಲ.

ಇತ್ತೀಚಿಗಿನ ಉನಾ ಘಟನೆಯ ನಂತರ ಈ ಗ್ರಾಮದ ದಲಿತರು ಮತ್ತೆ ಕಳವಳಗೊಂಡಿದ್ದಾರೆ. 99 ಶೇ. ಸಾಕ್ಷರತೆ ಹೊಂದಿದ ಹೊರತಾಗಿಯೂ ಈ ಗ್ರಾಮದಲ್ಲಿ ನವರಾತ್ರಿ ಹಬ್ಬದ ಸಂದರ್ಭ ಮೂರು ಗರ್ಭಾಗಳನ್ನು ಆಯೋಜಿಸಲಾಗುತ್ತದೆ. ಒಂದು ಗರ್ಭಾದಲ್ಲಿ ಮೇಲ್ಜಾತಿಯವರು ಹಾಗೂ ಇತರ ಹಿಂದುಳಿದ ಜಾತಿಗಳವರು ಭಾಗವಹಿಸಿದರೆ, ಮತ್ತೆರಡರಲ್ಲಿ ದಲಿತರು ಮಾತ್ರ ಭಾಗವಹಿಸುತ್ತಾರೆ.

ಈ ಪ್ರದೇಶದ ದಲಿತರಲ್ಲಿ ಶೇ. 99.7 ಪುರುಷರು ಸಾಕ್ಷರರಾಗಿದ್ದರೆ, ಮಹಿಳೆಯರಲ್ಲಿ ಸಾಕ್ಷರತೆಯ ಪ್ರಮಾಣ 99.53% ಆಗಿದೆ. ಶಿಕ್ಷಣ ಪಡೆದ ದಲಿತರು ಉದ್ಯೋಗ ಪಡೆಯದಿದ್ದರೂ ಶಿಕ್ಷಣ ಈ ಭಾಗದ ದಲಿತರ ಸಬಲೀಕರಣದತ್ತ ಸಹಾಯ ಮಾಡುತ್ತಿದೆ. ಹುಡುಗಿಯರು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಮನಸ್ಸು ಮಾಡಿದರೆ ಅವರನ್ನು ತಡೆಯಲಾಗುವುದಿಲ್ಲ. ದಲಿತರಲ್ಲಿ ಬುಟ್ಟಿ ಹೆಣೆಯುವ ವೃತ್ತಿ ಮಾಡುವ ಸೆನ್ಮಾ ಸಮುದಾಯ ಈ ಗ್ರಾಮದ ಇನ್ನೊಂದು ಪಕ್ಕದಲ್ಲಿ ವಾಸಿಸುತ್ತಿದೆ.

ಗ್ರಾಮದಲ್ಲಿ ಸುಮಾರು 300 ಚೌಧರಿ ಕುಟುಂಬಗಳಿದ್ದರೆ, 25 ಸೆನ್ಮಾ ಸಮುದಾಯದ ಕುಟುಂಬಗಳಿದ್ದು ಅವರಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರಾಗಿದ್ದಾರೆ. ಇಲ್ಲಿ ಸ್ವಚ್ಛ ಭಾರತ ಯೋಜನೆಯಂಗವಾಗಿ ಶೌಚಾಲಯಗಳು ನಿರ್ಮಾಣಗೊಂಡಿದ್ದರೂ ಅಲ್ಲಿ ನೀರಿನ ಸಂಪರ್ಕ ಒದಗಿಸಲಾಗಿಲ್ಲ. ಶಾಲೆಗಳಲ್ಲಿ ಅಸ್ಪಶ್ಯತೆಯ ಸಮಸ್ಯೆಯಿಲ್ಲ ಹಾಗೂ ಎಲ್ಲಾ ಮಕ್ಕಳು ಜತೆಯಾಗಿ ಓದುತ್ತಾರೆ, ಎನ್ನುತ್ತಾರೆ ಇಲ್ಲಿನ ದಲಿತ ಸಮುದಾಯದ ಮಂದಿ.

ಚಾಮರ ಸಮುದಾಯದ ಎಲ್ಲರ ಹೆಸರುಗಳೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೋಂದಣಿಗೊಂಡಿದ್ದರೂ ಅವರಿಗೆ ಈ ವರ್ಷ ನೌಕರಿ ದೊರೆತಿಲ್ಲ. ಕೆಲಸ ದೊರೆತರೂ ವೇತನ ಸಿಗಲು ಆರು ತಿಂಗಳು ಕಾಯಬೇಕು, ಎನ್ನುತ್ತಾರೆ ಹಲವರು.

ಚಾಮರ ಸಮುದಾಯದ ಮಂದಿ ಈಗಲೂ ಸತ್ತ ದನಗಳ ಚರ್ಮಗಳು ಸುಲಿಯುತ್ತಾರಾದರೂ ಸರಕಾರ ಚರ್ಮ ಸಂಸ್ಕರಣಾ ಘಟಕಗಳನ್ನು ಮುಚ್ಚಿದೆ ಎಂದು ಅವರು ದೂರಿದ್ದಾರೆ. ಹಿಂದೆ ಪ್ರತಿಯೊಂದು ದನದ ಚರ್ಮಕ್ಕೆ ನಮಗೆ  200 ರೂ. ಸಿಗುತ್ತಿತ್ತು. ಆದರೆ ಈಗ ಈ ಕೆಲಸ ಫ್ಯಾಕ್ಟರಿಗಳಿಗೆ ಹೋಗುತ್ತದೆ. ಸುಲಿದ ಚರ್ಮವನ್ನು ಇನ್ನೊಂದು ಗ್ರಾಮದ ಅವರದೇ ಸಮುದಾಯದ ವ್ಯಾಪಾರಿಗಳಿಗೆ ಮಾರಲಾಗುತ್ತದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X