ತೆಲಂಗಾಣದ ಕಾಂಗ್ರೆಸ್ ನಾಯಕ ಯಾದಗಿರಿ ಮೇಲೆ ಗುಂಡಿನ ದಾಳಿ

ಹೈದರಾಬಾದ್,ಆ.13: ಶನಿವಾರ ಸಿಕಂದರಾಬಾದ್‌ನಲ್ಲಿ ಕಾಂಗ್ರೆಸ್ ನಾಯಕ ಯಾದಗಿರಿಯವರ ಮೇಲೆ ಭಾರೀ ಗುಂಡಿನ ದಾಳಿ ನಡೆದಿದೆ. ಅವರ ದೇಹದಲ್ಲಿ ಆರು ಗುಂಡುಗಳು ಹೊಕ್ಕಿವೆ. ಆಸ್ಪತ್ರಗೆ ದಾಖಲಿಸಲಾಗಿರುವ ಅವರ ಸ್ಥಿತಿ ಗಂಭೀರವಾಗಿದೆ.
ಹಳೆಯ ಬೋವೆನಪಲ್ಲಿಯಲ್ಲಿ ಈ ಘಟನೆ ಸಂಭವಿಸಿದೆ. ಯಾದಗಿರಿ ತನ್ನ ಮನೆಯಿಂದ ಹೊರಗೆ ಬರುತ್ತಿದ್ದಾಗ ಬೈಕ್‌ನಲ್ಲಿದ್ದ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಆರು ಸುತ್ತು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾರೆ.
ಯಾದಗಿರಿ ರಿಯಲ್ ಎಸ್ಟೇಟ್ ಮತ್ತು ಮದ್ಯ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.
ಹೈದರಾಬಾದ ಪೊಲೀಸ್ ಆಯುಕ್ತ ಮಹೇಂದರ್ ರೆಡ್ಡಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
Next Story





