ಇರಾನ್ ಖಾತೆಗೆ ಚಿನ್ನ ಜಮೆ ಮಾಡಿದ ರೋಸ್ತಾಮಿ
.jpg)
ರಿಯೋ ಡಿ ಜನೈರೊ, ಆ.13: ಇರಾನ್‌ನ ಕಿಯಾನೌಶ್ ರೋಸ್ತಾಮಿ ಪುರುಷರ 85.ಕೆ.ಜೆ. ವಿಭಾಗದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನ ಜಯಿಸುವ ಮೂಲಕ ಇರಾನ್‌ನ ಖಾತೆಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ ಜಮೆ ಮಾಡಿದ್ದಾರೆ.
ಒಟ್ಟು 396 ಕೆ.ಜಿ ಭಾರ ಎತ್ತಿದ ರೋಸ್ತಾಮಿ ವಿಶ್ವ ದಾಖಲೆಯೊಂದಿಗೆ ಸ್ವರ್ಣ ಪಡೆದರು. ರೋಸ್ತಾಮಿ ಅವರು ಚೀನಾದ ತಿಯಾನ್ ತಾವೊ ಅವರಿಗಿಂತ 1.ಕೆ.ಜೆ. ಅಧಿಕ ಭಾರ ಎತ್ತಿದರು. ರೋಸ್ತಾಮಿ ಸ್ನಾಚ್‌ನಲ್ಲಿ 179 ಕೆ.ಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 217 ಕೆ.ಜಿ. ಭಾರ ಎತ್ತಿದರು.
ತಾವೊ 395 ಕೆ.ಜಿ ಭಾರ ಎತ್ತಿದ ಸಾಧನೆಯೊಂದಿಗೆ ರಜತ ಪದಕ ಧರಿಸಿದರು.
ರೊಮಾನಿಯಾದ ಗ್ಯಾಬ್ರಿಯೆಲ್ ಸಿನ್ಸಿಕ್ರಿಯನ್ (390 ಕೆ.ಜಿ) ಕಂಚು ಪಡೆದರು.
ರೋಸ್ತಾಮಿ ಚಿನ್ನ ಪಡೆಯುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಇರಾನ್ ಈ ತನಕ ಗಳಿಸಿದ ಚಿನ್ನದ ಪದಕಗಳ ಸಂಖ್ಯೆಯನ್ನು 6ಕ್ಕೆ ಏರಿಸಿದ್ದರು.
ರೋಸ್ತಾಮಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಎರಡನೆ ಸ್ಥಾನ ಪಡೆದು ರಜತ ಸಾಧನೆ ಮಾಡಿದ್ದರು. ಅಮೆರಿಕದ ಹೋಸ್ಟನ್‌ನಲ್ಲಿ ನಡೆದ ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಬೆಳ್ಳಿ ಪಡೆದಿದ್ದರು.





