ರಾಜೇಶ್ವರಿ ಭಾವ ಸಹಿತ ಇಬ್ಬರ ಮೇಲೆ ಅನುಮಾನ: ತಾಯಿ ದೂರು
ಭಾಸ್ಕರ್ ಶೆಟ್ಟಿ ಕೊಲೆ: ಹಲವು ಮಂದಿ ಭಾಗಿ ಶಂಕೆ

ಉಡುಪಿ, ಆ.13: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವು ಮಹತ್ವದ ಸಾಕ್ಷ ಗಳನ್ನು ಸಂಗ್ರಹಿಸಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ ಹಲವು ವಸ್ತುಗಳನ್ನು ವಶ ಪಡಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಕೊಲೆಗೆ ಮುನ್ನಾದಿನ ಅಂದರೆ 27ರಂದು ರಾಜೇಶ್ವರಿ ಉಡುಪಿ ಸಿಟಿಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್‌ಗೆ ಕಾರಿನಲ್ಲಿ ಬಂದು ಕೃತ್ಯಕ್ಕೆ ಬಳಸ ಲಾದ ಪೆಪ್ಪರ್ ಸ್ಪ್ರೇಯನ್ನು ಖರೀದಿಸಿರುವುದು ಅಲ್ಲಿನ ಸಿಸಿಟಿವಿಯ ಫುಟೇಜ್‌ನಿಂದ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಈಕೆಯೊಂದಿಗೆ ಮತ್ತಿಬ್ಬರು ಇದ್ದರೆಂಬ ಮಹತ್ವದ ಮಾಹಿತಿ ಈ ದೃಶ್ಯದಲ್ಲಿ ಕಂಡುಬಂದಿದೆ. ಕಾರಿನಲ್ಲಿದ್ದ ಉಳಿದ ಇಬ್ಬರು ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಇದೀಗ ಆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಈ ಮಧ್ಯೆ ಇಂದು ಕಟಪಾಡಿ ಸರಕಾರಿ ಗುಡ್ಡೆಯಲ್ಲಿರುವ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಮನೆಗೆ ಭೇಟಿ ನೀಡಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಸಿದ್ದ ಗುಲಾಬಿ ಶೆಡ್ತಿ, ಈ ಕೊಲೆಯಲ್ಲಿ ರಾಜೇಶ್ವರಿಯ ಅಕ್ಕನ ಗಂಡ ಭಾಸ್ಕರ್ ಶೆಟ್ಟಿ ಮತ್ತು ಅವರ ಅಕ್ಕನ ಮಗ ಬಾಲಕೃಷ್ಣ ಶೆಟ್ಟಿ ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಂಧಿತ ಆರೋಪಿಗಳ ಮೊಬೈಲ್‌ಗಳನ್ನು ವಸಪಡಿಸಿಕೊಡು ತನಿಖೆ ನಡೆಸಿ ದರೆ ಈ ಇಬ್ಬರ ಪಾತ್ರ ಇರುವುದು ತಿಳಿಯುತ್ತದೆ. ಜು.28ರಂದು ತಾಯಿ -ಮಗ ಬ್ಯಾಂಕ್ ಖಾತೆಯಿಂದ ಭಾರೀ ಮೊತ್ತದ ಹಣ ತೆಗೆದಿರುವುದು ಪತ್ತೆಯಾಗಿದ್ದು, ಆ ಬಗ್ಗೆ ತನಿಖೆ ನಡೆಸಬೇಕು. ಈ ಹಣ ಯಾರಿಗೆ, ಯಾಕೆ ಸಂದಾಯವಾಗಿದೆ ಎಂಬುದನ್ನು ಕಂಡುಹಿಡಿಯಬೇಕು. ಆದುದರಿಂದ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು ಎಂದು ಗುಲಾಬಿ ಶೆಡ್ತಿ ಮನವಿಯಲ್ಲಿ ಆಗ್ರಹಿಸಿದ್ದಾರೆ.
‘ಗುಲಾಬಿ ಶೆಡ್ತಿ ಅನುಮಾನ ವ್ಯಕ್ತಪಡಿಸಿರುವ ಇಬ್ಬರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಈವರೆಗೆ ಅವರನ್ನು ವಿಚಾರಣೆ ನಡೆಸಿಲ್ಲ. ಅವರ ಪೂರ್ವಾಪರ, ಈ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತ ಸಾಕ್ಷ ಹಾಗೂ ಅವರ ಹಿನ್ನೆಲೆಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಈ ಕೃತ್ಯದಲ್ಲಿ ಇನ್ನು ಹಲವು ಮಂದಿ ಭಾಗಿಯಾಗಿರುವ ಕುರಿತು ಈಗಲೇ ಹೇಳಕ್ಕೆ ಆಗಲ್ಲ. ಅದರ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ಹಲವು ಸ್ಥಳಗಳಿಗೆ ಎಸ್ಪಿ ಭೇಟಿ:
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಇಂದು ಕೃತ್ಯ ನಡೆದಿರುವ ಇಂದ್ರಾಳಿಯಲ್ಲಿರುವ ಭಾಸ್ಕರ್ ಶೆಟ್ಟಿ ಮನೆಗೆ, ಮೃತದೇಹವನ್ನು ಸುಟ್ಟು ಹಾಕಿದರನ್ನೆಲಾದ ನಂದಳಿಕೆಯಲ್ಲಿರುವ ನಿರಂಜನ್ ಭಟ್ ಮನೆಗೆ ಹಾಗೂ ಮೃತದೇಹದ ಅಸ್ಥಿ ಎಸೆದಿರುವ ಪಳ್ಳಿ ಸಮೀಪದ ಕಲ್ಕಾರು ಹೊಳೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಡಿಎನ್‌ಎ ತಜ್ಞರನ್ನೊಳಗೊಂಡು ವೈಜ್ಞಾನಿಕ ಸಾಕ್ಷಗಳನ್ನು ಸಂಗ್ರಹಿಸಿದರೆ, ಇನ್ನೊಂದು ತಂಡ ನಿರಂಜನ್ ಭಟ್‌ನನ್ನು ಬಳಸಿ ಸಾಕ್ಷಗಳನ್ನು ಸಂಗ್ರಹಿಸುವ ಪ್ರಕ್ರಿಯೆ ನಡೆಸುತ್ತಿದೆ. ಮತ್ತೊಂದು ತಂಡ ಆರೋಪಿಗಳ ಮೊಬೈಲ್ ಕರೆ, ಸಿಸಿಟಿವಿ ಫುಟೇಜ್‌ಗಳ ಕುರಿತು ಮಾಹಿತಿ ಕಲೆ ಹಾಕುತ್ತಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಮೂವರನ್ನು ಪೊಲೀಸರು ತೀವ್ರ ವಿಚಾ ರಣೆಗೆ ಒಳಪಡಿಸುತ್ತಿದ್ದಾರೆ. ಇಂದು ನಿರಂಜನ್ ಭಟ್‌ನನ್ನು ಕಡಂದಲೆಯ ಸಚ್ಚರಿಪೇಟೆ ಎಂಬಲ್ಲಿರುವ ಶಾಂಭವಿ ಹೊಳೆಯ ಪ್ರದೇಶಕ್ಕೆ ಕರೆದೊಯ್ದು ಅಸ್ಥಿ ಹುಡುಕಾಟ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತನಿಖಾಧಿಕಾರಿ ಸುಮನಾ ಹಾಜರಿದ್ದರು. ಆರೋಪಿಗಳು ಕೊಲೆ ಮಾಡುವ ಸಂದರ್ಭ ಹಾಕಲಾದ ಬಟ್ಟೆಗಳನ್ನು ನಿಟ್ಟೆಯ ಲಾಂಡ್ರಿಗೆ ನೀಡಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲಿದ್ದ ರಕ್ತದ ಕಲೆಯನ್ನು ಸರಿಯಾಗಿ ತೊಳೆದುಕೊಡುವಂತೆ ರಾಜೇಶ್ವರಿ ಲಾಂಡ್ರಿಯವನಿಗೆ ತಿಳಿಸಿದ್ದರೆಂದು ತನಿಖೆ ಯಿಂದ ತಿಳಿದುಬಂದಿದೆ.
ಈಗಾಗಲೇ ಪ್ರಕರಣದ ತನಿಖೆಗಾಗಿ ಮೂರು ಪೊಲೀಸ್ ತಂಡವನ್ನು ರಚಿಸಲಾಗಿದ್ದು, ತನಿಖೆಯು ಈಗ ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದು, ವ್ಯವಸ್ಥಿತವಾಗಿ ನಡೆಯುತ್ತಿದೆ. ನಾನು ಕೂಡ ಇಂದು ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ನಿರಂಜನ್ ಭಟ್‌ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಕೆ.ಟಿ.ಬಾಲಕೃಷ್ಣ, ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ.







