800 ಮೀ. ಫ್ರೀಸ್ಟೈಲ್: ವಿಶ್ವ ದಾಖಲೆ ಅಳಿಸಿಹಾಕಿ ಚಿನ್ನ ಗೆದ್ದ ಲೆಡೆಕಿ

ರಿಯೋ ಡಿ ಜನೈರೊ, ಆ.13: ಅಮೆರಿಕದ ಯುವ ಈಜು ತಾರೆ ಕಾಟಿ ಲೆಡೆಕಿ ರಿಯೋ ಒಲಿಂಪಿಕ್ಸ್‌ನಲ್ಲಿ ಶುಕ್ರವಾರ 800 ಮೀ. ಫ್ರೀಸ್ಟೈಲ್‌ನಲ್ಲಿ ತನ್ನದೇ ವಿಶ್ವದಾಖಲೆಯನ್ನು ಅಳಿಸಿಹಾಕುವ ಮೂಲಕ ಚಿನ್ನದ ಪದಕ ಜಯಿಸಿದರು.
1968 ಬಳಿಕ ಮೊದಲ ಬಾರಿ 200 ಮೀ., 400 ಮೀ. ಹಾಗೂ 800 ಮೀ. ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಅಮೆರಿಕದ ಮೊದಲ ಸ್ವಿಮ್ಮರ್ ಎನಿಸಿಕೊಂಡಿದ್ದಾರೆ. 1968ರಲ್ಲಿ ಮೆಕ್ಸಿಕೊ ಸಿಟಿಯಲ್ಲಿ ಅಮೆರಿಕದ ಡೆಬ್ಬಿ ಮೆಯೆರ್ ಈ ಸಾಧನೆ ಮಾಡಿದ್ದರು. 4-200 ಮೀ. ರಿಲೇಯಲ್ಲಿ ಮೊದಲ ಸ್ಥಾನ ಪಡೆದಿದ್ದ 19ರ ಹರೆಯದ ಲೆಡೆಕಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 4 ಚಿನ್ನ ಬಾಚಿಕೊಂಡಿದ್ದರು.
ವನಿತೆಯರ 800 ಮೀ. ಫ್ರೀಸ್ಟೈಲ್‌ನಲ್ಲಿ 8 ನಿಮಿಷ, 04.79 ಸೆಕೆಂಡ್‌ನಲ್ಲಿ ಗುರಿ ತಲುಪಿದ ಲೆಡೆಕಿ ಈ ವರ್ಷದ ಜನವರಿ 7ರಂದು ನಿರ್ಮಿಸಿದ್ದ ತನ್ನದೇ ದಾಖಲೆ(8:06.08)ಯನ್ನು ಅಳಿಸಿ ಹಾಕಿದರು
Next Story





