ರಿಯೋ ಗೇಮ್ಸ್: ಭಾರತದ ಹಾಕಿಗೆ ರವಿವಾರ ಬೆಲ್ಜಿಯಂ ಸವಾಲು
ರಿಯೋ ಡಿ ಜನೈರೊ, ಆ.13: ಭಾರತದ ಪುರುಷರ ಹಾಕಿ ತಂಡ ರವಿವಾರ ನಡೆಯಲಿರುವ ರಿಯೋ ಗೇಮ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಎದುರಿಸಲಿದ್ದು, 36 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ತಲುಪುವ ಗುರಿ ಹಾಕಿಕೊಂಡಿದೆ.
ಬಿ ಗುಂಪಿನಲ್ಲಿ 2 ಜಯ,2 ಸೋಲು, ಡ್ರಾ ಸಾಧಿಸಿ 7 ಅಂಕ ಗಳಿಸಿದ್ದ ಭಾರತ ನಾಲ್ಕನೆ ಸ್ಥಾನ ಪಡೆದು ಅಂತಿಮ 8ರ ಸುತ್ತಿಗೆ ತೇರ್ಗಡೆಯಾಗಿತ್ತು. ಪಿ.ಆರ್.ಶ್ರೀಜೇಶ್ ಪಡೆ ಸೆಮಿಫೈನಲ್‌ಗೆ ತಲುಪಿದರೆ ಪದಕ ಖಚಿತಪಡಿಸಬಹುದು.
ಭಾರತ ತಂಡ ಐರ್ಲೆಂಡ್(3-2) ಹಾಗೂ ಅರ್ಜೆಂಟೀನ(2-1) ವಿರುದ್ಧ ಜಯ, ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿ(1-2) ಹಾಗೂ ಹಾಲೆಂಡ್(1-2)ವಿರುದ್ಧ ಸೋತಿದ್ದು, ಕೆನಡಾ ವಿರುದ್ಧ 2-2 ರಿಂದ ಡ್ರಾ ಸಾಧಿಸಿತ್ತು
Next Story





