Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮೊಹೆಂಜೋದಾರೋ ನಗರ ಲಾಲಸೆಗೆ ಬಲಿಯಾದವರ...

ಮೊಹೆಂಜೋದಾರೋ ನಗರ ಲಾಲಸೆಗೆ ಬಲಿಯಾದವರ ಕತೆ

ವಾರ್ತಾಭಾರತಿವಾರ್ತಾಭಾರತಿ13 Aug 2016 11:49 PM IST
share
ಮೊಹೆಂಜೋದಾರೋ ನಗರ ಲಾಲಸೆಗೆ ಬಲಿಯಾದವರ ಕತೆ

ಅ  ಶುತೋಶ್ ಗೋವಾರಿಕರ್ ಸದಾ ವಿಭಿನ್ನವಾಗಿ ಯೋಚಿಸುವ ನಿರ್ದೇಶಕ. ಜನಪ್ರಿಯ ಆದರ್ಶಗಳನ್ನು ತನ್ನದೇ ರೀತಿಯಲ್ಲಿ ನಿರೂಪಿಸುವ ಕಲೆ ಇವರಿಗೆ ಸಿದ್ಧಿಸಿದೆ. ಈ ಹಿನ್ನೆಲೆಯಲ್ಲಿ, ಇವರು ಯಾವುದೇ ಚಿತ್ರದಲ್ಲಿ ತೊಡಗಿದರೂ ಅದರ ಕುರಿತಂತೆ ಜನರು ಬಹು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಆಮಿರ್ ಖಾನ್ ಅವರು ನಟಿಸಿದ ಲಗಾನ್ ಚಿತ್ರ ಇವರ ದೆಸೆಯನ್ನೇ ಬದಲಿಸಿತು. ಅದು ಬಾಲಿವುಡ್‌ನಲ್ಲಿ ಮಾಡಿದ ದಾಖಲೆಗಳೇ, ಗೋವಾರಿಕರ್ ಪಾಲಿಗೆ ಮುಳುವಾಯಿತೇನೋ? ಆ ಬಳಿಕ ಅವರ ಪ್ರತಿ ಚಿತ್ರಗಳ ಕುರಿತಂತೆಯೂ ಜನರು ಅಪಾರ ನಿರೀಕ್ಷೆಯನ್ನು ಇಡತೊಡಗಿದರು. ಈ ನಿರೀಕ್ಷೆಗಳೇ ಗೋವಾರಿಕರ್ ಚಿತ್ರಗಳು ಮುಗ್ಗರಿಸುವುದಕ್ಕೆ ಕಾರಣವಾದವು. ಲಗಾನ್‌ನ ಕನವರಿಕೆಯಲ್ಲಿದ್ದ ಪ್ರೇಕ್ಷಕರಿಗೆ ಶಾರುಕ್‌ಖಾನ್ ನಟಿಸಿದ ‘ಸ್ವದೇಶ್’ ಚಿತ್ರ ಇಷ್ಟವಾಗಲಿಲ್ಲ. ಸರಳ ಕತೆಯನ್ನು ಹೊಂದಿರುವ ದೇಶಪ್ರೇಮದ ಕುರಿತ ಅಪ್ಪಟ  ಸದಭಿರುಚಿಯ ಚಿತ್ರವಾಗಿತ್ತು. ಆದರೆ ಕ್ರಿಕೆಟ್ ಮೂಲಕವೇ ದೇಶಪ್ರೇಮವನ್ನು ಅರ್ಥಮಾಡಿಕೊಳ್ಳುವ ಮಂದಿಗೆ ‘ಸ್ವದೇಶ್’ ಪ್ರತಿಪಾದಿಸುವ ಹಳ್ಳಿ, ನೀರು, ವಿದ್ಯುತ್‌ನ ದೇಶಪ್ರೇಮ ನೀರಸ ಎನಿಸಿತು.. ‘ಜೋಧಾ ಅಕ್ಬರ್’ ಕೂಡ ಒಳ್ಳೆಯ ಸಂದೇಶವನ್ನು ವಸ್ತುವಾಗಿಟ್ಟುಕೊಂಡು ಮಾಡಿದ ಐತಿಹಾಸಿಕ ಚಿತ್ರ. ಆದರೆ ಲಗಾನ್ ಚಿತ್ರವನ್ನು ತಲುಪಲು ಸಾಧ್ಯವಾಗಲಿಲ್ಲ. ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಅವರ ಅಭಿನಯ ಈ ಚಿತ್ರವನ್ನು ಎತ್ತರಕ್ಕೇರಿಸಿತ್ತು. ಸಂಗೀತವೂ ಎಲ್ಲರ ಎದೆಯೊಳಗೆ ಹೊಸ ಅಲೆಯನ್ನು ಎಬ್ಬಿಸಿತ್ತು. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಅಕ್ಬರ್ ಸೋಲಬೇಕಾಯಿತು. ಇದೇ ಸಂದರ್ಭದಲ್ಲಿ ದೇಶಪ್ರೇಮವನ್ನು ಬದಿಗಿಟ್ಟು, ಹೊಸ ದಾರಿಯೊಂದರ ಮೂಲಕ ಯಶಸ್ಸನ್ನು ಹುಡುಕಲು ಗೋವಾರಿಕರ್ ಪ್ರಯತ್ನಿಸಿದರು. ಪರಿಣಾಮವಾಗಿ ‘ವಾಟ್ ಇಸ್ ಯುವರ್ ರಾಶಿ’ ಚಿತ್ರವನ್ನು ನಿರ್ದೇಶಿಸಿದರು. ಇದು ಹಾಸ್ಯ ಚಿತ್ರವಾಗಿತ್ತು. ಆದರೆ ಈ ಅಪ್ಪಟ ಚಿತ್ರದಲ್ಲೂ ಅವರು ಎಡವಿದರು. ‘ಖೇಲೇ ಹಮ್ ಜೀ ಜಾನೇ ಸೇ’ ಮತ್ತೆ ದೇಶಭಕ್ತಿಯನ್ನೊಳಗೊಂಡ ಚಿತ್ರವಾಗಿತ್ತು. ಆದರೆ ಅದು ವಿಫಲವಾಯಿತು. ಆದರೆ ಅವರ ಪ್ರತಿ ಚಿತ್ರಗಳು ಈ ನೆಲಕ್ಕೆ ಬದ್ಧವಾದವುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರಗಳು ಸದಭಿರುಚಿಯಿಂದ ಕೂಡಿರುತ್ತವೆ. ಹಾಗೆಯೇ ಜೀವಪರವಾದ ಆಶಯವನ್ನು ಹೊಂದಿರುತ್ತದೆ.

 ‘ಮೊಹೆಂಜೋದಾರೋ’ ಚಿತ್ರದ ಹೆಸರೇ ವಿಭಿನ್ನ ಮತ್ತು ವಿಶಿಷ್ಟವಾದುದು. ಸಿಂಧೂ ದಡದ ನಾಗರಿಕತೆಯನ್ನು ಹಿನ್ನೆಲೆಯಾಗಿಟ್ಟು ಗೋವಾರಿಕರ್‌ರಂತಹ ಅತ್ಯುತ್ತಮ ನಿರ್ದೇಶಕ ಚಿತ್ರ ಮಾಡುತ್ತಾರೆಂದರೆ ನಿರೀಕ್ಷೆಗಳು ಹುಟ್ಟುವುದು ಸಹಜ ಕೂಡ. ಗೋವಾರಿಕರ್ ಜೊತೆಗೆ ಎರಡನೆ ಬಾರಿಗೆ ಹೃತಿಕ್ ರೋಷನ್ ಕೈ ಜೋಡಿಸುತ್ತಾರೆ ಎಂದರೆ ಅದು ನೋಡುಗರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಬಿತ್ತುತ್ತದೆ. ‘ಮೊಹೆಂಜೋದಾರೋ’ ಇತಿಹಾಸಕ್ಕೆ ಬದ್ಧವಾಗಿರಬೇಕು ಎಂದು ನಾವು ಗೋವಾರಿಕರ್ ಮೂಲಕ ನಿರೀಕ್ಷಿಸುವುದು ದುಬಾರಿಯಾಗುತ್ತದೆ. ಸಿಂಧೂ ನಾಗರಿಕತೆಯ ಕುರಿತಂತೆ ಚರ್ಚೆಗಳು ಬಹಳಷ್ಟು ನಡೆದಿವೆ. ಈ ದೇಶಕ್ಕೆ ಮಧ್ಯ ಪ್ರಾಚ್ಯದಿಂದ ಆರ್ಯನ್ನರು ಕಾಲಿಡುವ ಮೊದಲೇ ಹೇಗೆ ನಾಗರಿಕತೆಯೊಂದು ಸಿಂಧೂ ನದೀ ತಟದಲ್ಲಿ ಹರಡಿತ್ತು ಎನ್ನುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. ಆದರೆ ಇತಿಹಾಸದ ಚರ್ಚೆ, ಶೋಧನೆಗಳನ್ನು ಒಂದು ಜನಪ್ರಿಯ ಚಿತ್ರದಲ್ಲಿ ನಿರೀಕ್ಷಿಸುವುದೇ ತಪ್ಪು. ತನ್ನ ಮಿತಿಯಲ್ಲಿ ಗೋವಾರಿಕರ್ ‘ಮೊಹೆಂಜೋದಾರೋ’ ಚಿತ್ರವನ್ನು ಎಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ ಎನ್ನುವುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಈ ನೆಲೆಯಲ್ಲಿ ನಾವು ನೋಡಿದರೂ, ಗೋವಾರಿಕರ್ ಅದರಲ್ಲಿ ಭಾಗಶಃ ವಿಫಲರಾಗಿದ್ದಾರೆ. ಒಂದು ಒಳ್ಳೆಯ ಆಶಯವನ್ನು ಚಿತ್ರ ಪ್ರತಿಪಾದಿಸುತ್ತದೆಯಾದರೂ, ದುರ್ಬಲ ಕತೆಯಿಂದಾಗಿ ಚಿತ್ರ ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದೆಯನ್ನು ತಲುಪುವುದಿಲ್ಲ. ಚಿತ್ರದ ಕತೆ 2016 ಬಿಸಿ(ಬಿಫೋರ್ ಕ್ರೈಸ್ಟ್) ಕಾಲದ್ದಾಗಿದ್ದರೂ, ಅದರ ನಾಯಕನ ಕತೆ ಮಾತ್ರ 70 ದಶಕದ ಬಾಲಿವುಡ್‌ನ ಹಳಸಲು ಕತೆ. ತಂದೆಯ ಕೊಲೆ. ಬೇರೆಯಾಗುವ ಮಗ. ಮತ್ತೆ ಅರಿಯದೇ ತನ್ನ ತಂದೆ ಆಳುತ್ತಿದ್ದ ನಾಡಿಗೆ ವಾಪಸಾಗುವುದು, ಅಲ್ಲಿ ತನ್ನ ತಂದೆಯ ಕೊಲೆಯಾಗಿರುವುದು ಅವನ ಅರಿವಿಗೆ ಬರುವುದು. ಶತ್ರುವಿನ ವಿರುದ್ಧ ಸೇಡು ತೀರಿಸುವುದು. ಈ ಕತೆ ಬಾಲಿವುಡ್‌ನಲ್ಲಿ ಅದೆಷ್ಟೋ ಬಾರಿ ಬಂದು ಹೋಗಿದೆ. ಇಂತಹದೊಂದು ಬಬಲ್‌ಗಮ್‌ನ್ನು ಜಗಿಯಲು ಮೊಹೆಂಜೋದಾರೋ ಎನ್ನುವ 2016 ಕಾಲಘಟ್ಟವನ್ನು ಬಳಸುವ ಅಗತ್ಯವಿತ್ತೇ? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಏಳುವುದು ಸಹಜ. ಅಂತೆಯೇ ರಾಜವೌಳಿಯ ‘ಬಾಹುಬಲಿ’ ಮತ್ತು ಹಾಲಿವುಡ್‌ನ ಖ್ಯಾತ ಚಿತ್ರ ‘ಗ್ಲಾಡಿಯೇಟರ್’ ಎರಡರ ಕಲಬೆರಕೆಯ ವಾಸನೆ ನಿಮ್ಮ ಮೂಗಿಗೆ ಬಡಿದರೆ ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಚಿತ್ರದ ಮೊದಲರ್ಧ ಬಾಹುಬಲಿ ಚಿತ್ರಕ್ಕೆ ಹೋಲಿಕೆಯಾದರೆ ಇನ್ನರ್ಧ ‘ಗ್ಲಾಡಿಯೇಟರ್’ನ್ನು ಹೋಲುತ್ತದೆ. ಇದೇ ಸಂದರ್ಭದಲ್ಲಿ ಬಾಹುಬಲಿ ಒಂದು ಚಂದಮಾಮ ಕತೆ. ಅದಕ್ಕೆ ಯಾವುದೇ ಗುರಿ, ಆಶಯ ಇದ್ದಿರಲಿಲ್ಲ. ಆದರೆ ಗೋವಾರಿಕರ್ ಅವರ ‘ಮೊಹೆಂಜೋದಾರೋ’ ನಾಯಕನ ಕತೆಯನ್ನು ಹೇಳುತ್ತಲೇ ಇನ್ನೊಂದು ದುರಂತವನ್ನೂ ಹೇಳುವ ಸಣ್ಣ ಪ್ರಯತ್ನ ಮಾಡುತ್ತದೆ. ಆ ಆಶಯವೇ ಈ ಚಿತ್ರದ ಹೆಗ್ಗಳಿಕೆ.

 ಹರಪ್ಪ ನಾಗರಿಕತೆಯ ಮೇಲೆ ದಾಳಿ ಮಾಡಿ, ಅದರ ತಳಹದಿಯ ಮೇಲೆ ಮೊಹೆಂಜೋದಾರೋ ನಗರ ನಾಗರಿಕತೆ ತಲೆಯೆತ್ತಿತ್ತು ಎಂದು ನಿರ್ದೇಶಕರು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಾರೆ. ಲಾಲಸೆ, ಲೋಭ, ಸ್ವಾರ್ಥ ತುಂಬಿದ ನಗರ ಲಾಲಸೆಯ ತಳಹದಿಯ ಮೇಲೆ ಮೊಹೆಂಜೋದಾರೋ ನಿಂತಿದೆ. ಸಿಂಧೂ ನದಿಯನ್ನು ಅವಲಂಬಿಸಿದ ಈ ನೆಲದ ಕೃಷಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಮೊಹೆಂಜೋದಾರೋ ಎನ್ನುವ ನಗರವನ್ನು ಕಟ್ಟುವ ಭಾರೀ ಕನಸನ್ನು ಮಾಹಂ(ಕಬೀರ್ ಬೇಡಿ) ಕಾಣುತ್ತಾನೆ. ಸಿಂಧೂನದಿಗೆ ಬೃಹತ್ ಅಣೆಕಟ್ಟು ಕಟ್ಟಿ, ಅದರಲ್ಲಿ ಹರಿದು ಬರುವ ಚಿನ್ನದ ಗಟ್ಟಿಗಳನ್ನು ತಡೆದು, ಅಪಾರ ಸಂಪತ್ತನ್ನು ಸಂಗ್ರಹಿಸುವ ದುರಾಸೆ ಅವನದು. ಇದನ್ನು ವಿರೋಧಿಸಿದವರನ್ನೆಲ್ಲ ಸದೆಬಡಿಯುತ್ತಾನೆೆ. ಅವರಲ್ಲಿ ನಾಯಕ ಶರ್ಮನ್(ಹೃತಿಕ್ ರೋಷನ್)ನ ತಂದೆ ಸುರ್ಜನ್ ಕೂಡ ಒಬ್ಬ. ಈತ ಮೊಹೆಂಜೋದಾರೋದ ಪ್ರಧಾನನಾಗಿದ್ದ. ಆದರೆ ಮಾಹಂನ ಲೋಭದ ಮಾತುಗಳಿಂದ ವಿರಾಟ್ ಸದಸ್ಯರೆಲ್ಲ ಮಾಹಂ ಪರವಾಗುತ್ತಾರೆ. ಅಣೆಕಟ್ಟನ್ನು ತಡೆಯಲು ಕಟ್ಟಕಡೆಯವರೆಗೆ ಪ್ರಯತ್ನಿಸುವ ಸುರ್ಜನ್ ಅಂತಿಮವಾಗಿ ಮಾಹಂನ ಮೋಸಕ್ಕೆ ಬಲಿಯಾಗಿ ಮರಣದಂಡನೆ ಶಿಕ್ಷೆ ಎದುರಿಸುತ್ತಾನೆ.

 ಅಣೆಕಟ್ಟಿನ ಪರಿಣಾಮವಾಗಿ ಸಿಂಧೂ ನದಿ ತನ್ನ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಪರಿಣಾಮವಾಗಿ ಕೃಷಿಕರು ಭಾರೀ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೃಷಿಗಿಂತ ಚಿನ್ನ ಮುಖ್ಯ ಎಂದು ಮಾಹಂ ಪ್ರತಿಪಾದಿಸುತ್ತಾನೆ. ಅದರಿಂದ ಇಡೀ ಮೊಹೆಂಜೋದಾರೋ ಅತ್ಯಾಧುನಿಕವಾಗುತ್ತದೆ, ಜನರೆಲ್ಲ ಈ ನಗರದ ಕಡೆಗೆ ಆಗಮಿಸುತ್ತಾರೆ, ಸಂಪತ್ತು ಅಧಿಕವಾಗುತ್ತದೆ ಎನ್ನುತ್ತಾನೆ. ರೈತರ ಕಷ್ಟಗಳು ಅಧಿಕವಾಗುತ್ತದೆ. ಸಿಂಧೂನದಿಯ ಅಣೆಕಟ್ಟಿನಿಂದ ರಾಜನಿಗೆ ಚಿನ್ನ ದೊರಕುತ್ತದೆ. ಆದರೆ ಜನರ ಸಮಸ್ಯೆ ಅದರಲ್ಲೂ ರೈತರ ಸಮಸ್ಯೆ ಭೀಕರವಾಗುತ್ತದೆ. ಇಂತಹ ಸಂದರ್ಭದಲ್ಲೇ ಮಳೆಗಾಲದಲ್ಲಿ ಸಿಂಧೂನದಿ ತುಂಬಿಹರಿದು, ಇಡೀ ಅಣೆಕಟ್ಟು ಒಡೆದು ಮೊಹೆಂಜೋದಾರೋ ನಗರವನ್ನು ಸರ್ವನಾಶ ಮಾಡುತ್ತದೆ. ನಾಯಕನ ಪ್ರವೇಶ, ಇಲ್ಲಿನ ರೈತರನ್ನು ಬದುಕಿಸುತ್ತದೆ. ನಾಶವಾದ ಮೊಹೆಂಜೋದಾರೋವನ್ನು ಬಿಟ್ಟು ಇವರು ಗಂಗಾ ನದಿಯ ಕಡೆಗೆ ವಲಸೆ ಬರುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ. ಮೊಹೆಂಜೋದಾರೋ ನಾಶದ ಕತೆಯನ್ನು ಹೇಳುವ ಮೂಲಕ ಗೋವಾರಿಕರ್ ವರ್ತಮಾನದ ಭಾರತಕ್ಕೆ ಕನ್ನಡಿ ಹಿಡಿದಿದ್ದಾರೆ. ಅಭಿವೃದ್ಧಿಯ ಕುರಿತಂತೆ ಕನಸು ಕಾಣುವ, ಲಾಲಸೆ, ಲೋಭಕ್ಕೆ ಸಿಲುಕಿ ಮೊಹೆಂಜೋದಾರೋವನ್ನು ಬಲಿಕೊಟ್ಟ ಮಾಹಂ ಮತ್ತು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿ ಇಡೀ ದೇಶವನ್ನು ತನ್ನ ಸ್ವಾರ್ಥ, ಲಾಲಸೆ, ಲೋಭಗಳ ಸಂತೃಪ್ತಿಗಾಗಿ ದುರಂತಕ್ಕೆ ತಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಸಮೀಕರಣವೊಂದು ಚಿತ್ರದಲ್ಲಿ ನಡೆಯುತ್ತದೆ. ಮೊಹೆಂಜೋದಾರೋ ದುರಂತ ಮತ್ತು ಇಂದಿನ ದುರಂತಗಳ ಸಾಮ್ಯತೆಯನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು.

ಉಳಿದಂತೆ ಮೊಹೆಂಜೋದಾರೋ ಕಾಲಘಟ್ಟವನ್ನು ನಿರ್ದೇಶಕರು ಹೇಗೆ ತೋರಿಸಿದ್ದಾರೆ ಎನ್ನುವುದನ್ನು ಭೂತಗನ್ನಡಿಯಲ್ಲಿಟ್ಟು ನೋಡುವುದು ತಪ್ಪಾಗುತ್ತದೆ. ಆದರೆ ಮೊಹೆಂಜೋದಾರೋ ನಗರವನ್ನು, ಸಿಂಧೂನದಿಯನ್ನು ನಿರ್ದೇಶಕರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ವಿಶಿಷ್ಟ ವೇಷಭೂಷಣಗಳಲ್ಲೂ ನಿರಾಸೆ ಉಂಟು ಮಾಡುವುದಿಲ್ಲ. ಯಾವ ಭಾಷೆಯನ್ನು ಬಳಸಬೇಕು ಎನ್ನುವ ಗೊಂದಲ ಚಿತ್ರದಲ್ಲಿ ಕಾಣುತ್ತದೆ. ಸಂಸ್ಕೃತ-ಹಿಂದಿ ಮಿಶ್ರಿತ ಗಿಬ್ರಿಶ್ ಭಾಷೆಯನ್ನು ಅಲ್ಲಲ್ಲಿ ಪ್ರಯೋಗಿಸುತ್ತಾರೆ. ಹೃತಿಕ್ ರೋಷನ್ ಎಂದಿನಂತೆಯೇ ತನ್ನದೇ ಶೈಯಲ್ಲಿ ಆರ್ಭಟಿಸಿ ನಟಿಸಿದ್ದಾರೆ. ಆ್ಯಕ್ಷನ್‌ಗಳಲ್ಲಿ ಮಿಂಚಿದ್ದಾರೆ. ಚಿತ್ರದ ನಾಯಕಿ (ಪೂಜಾ ಹೆಗ್ಡೆ) ಒಂದು ಗೊಂಬೆ ಅಷ್ಟೇ. ಭಾವುಕ ಸನ್ನಿವೇದಲ್ಲಿ ಅವರು ಸಂಪೂರ್ಣ ವಿಫಲರಾಗುತ್ತಾರೆ. ಚಿತ್ರದ ಆಶಯ, ಅದ್ಭುತವಾದ ಸೆಟ್ಟಿಂಗ್, ಸಂಗೀತ ಇವಷ್ಟೇ ಸಿನೆಮಾ ಅಲ್ಲ. ಇವೆಲ್ಲವನ್ನೂ ಪರಿಣಾಕಾರಿಯಾಗಿ ಹಿಡಿದಿಡುವ ಕಥೆಯೊಂದು ಚಿತ್ರಕ್ಕೆ ಬೇಕಾಗುತ್ತದೆ. ಅಂತಹದೊಂದು ಕಥಾನಕವನ್ನು ಸೃಷ್ಟಿಸಲು ಗೋವಾರಿಕರ್ ವಿಫಲವಾಗಿದ್ದಾರೆ. ಆದುದರಿಂದಲೇ ಚಿತ್ರ ನಮ್ಮ ನಿರೀಕ್ಷೆಯನ್ನು ಹುಸಿ ಮಾಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X