Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎಲ್ಲಿಗೆ ನಿಮ್ಮ ಪಯಣ ಎಂದು ಕೇಳುತ್ತೇವೆ...

ಎಲ್ಲಿಗೆ ನಿಮ್ಮ ಪಯಣ ಎಂದು ಕೇಳುತ್ತೇವೆ ನಾವು

ಭಾಗ 1

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್13 Aug 2016 11:51 PM IST
share
ಎಲ್ಲಿಗೆ ನಿಮ್ಮ ಪಯಣ ಎಂದು ಕೇಳುತ್ತೇವೆ ನಾವು

ಅಂಬೇಡ್ಕರ್ ಅವರು ಕ್ರಾಂತಿ ಮತ್ತು ಪ್ರತಿಕ್ರಾಂತಿ ಚಿಂತನೆಗಳ ಮೂಲಕ, ಅಧ್ಯಯನಗಳ ಮೂಲಕ ಒಂದು ಪರ್ಯಾಯ ಇತಿಹಾಸವನ್ನೇ ಬರೆದರು ಎಂದು ವಿದ್ವಾಂಸರು ವಿವರಿಸುತ್ತಾರೆ. ಇದು ಸಬಲ್ಟ್ರಾನ್ ಇತಿಹಾಸವೂ ಹೌದು. ಅಂಚಿನಲ್ಲಿರುವ ಸಮುದಾಯಗಳ ಬದುಕಿನ ಮೂಲಕ, ಕಣ್ಣಿನ ಮೂಲಕ ಇತಿಹಾಸವನ್ನು ಬರೆದ ಅಂಬೇಡ್ಕರ್ ಅವರು ಬ್ರಾಹ್ಮಣ್ಯದ ಮೂಲಕ ರಚಿತವಾದ ಪುರೋಹಿತ ಶಾಹಿ ಇತಿಹಾಸವನ್ನು ಒಡೆದು ಹಾಕಿದರು. ಓದುವ, ಗ್ರಹಿಸುವ, ಅರಿಯುವ ದೃಷ್ಟಿಕೋನವನ್ನೇ ಬದಲಿಸಿದರು. ಸಾಮಾಜಿಕ ಕ್ರಾಂತಿ ಮತ್ತು ಧಾರ್ಮಿಕ ಕ್ರಾಂತಿಯು ಸಂಘಟನೆಯ, ಚಿಂತನೆಗಳ ನೇತೃತ್ವವನ್ನು ವಹಿಸಿಕೊಂಡು ಅದು ರಾಜಕೀಯ ಕ್ರಾಂತಿಯನ್ನು ಮುನ್ನಡೆಸಬೇಕೆಂದು ಹೇಳಿದರು. ಆದರೆ ಅರ್ಧ ಶತಮಾನದ ಕಾಲ ಇದು ನಮಗೆ ಅರಿವಾಗಲೇ ಇಲ್ಲ. ತಾವು ನಾಸ್ತಿಕರೆಂದು ಬೀಗಿದ ಎಡಪಂಥೀಯರಿಗೆ ಅಂಬೇಡ್ಕರ್ ಪ್ರತಿಪಾದಿಸಿದ ಧಾರ್ಮಿಕ ಕ್ರಾಂತಿಯ ಮಹತ್ವ ಗ್ರಹಿಕೆಗೆ ದಕ್ಕಲೇ ಇಲ್ಲ. ಉದಾಹರಣೆಗೆ ಕಳೆದ ಶತಮಾನದ ಆರಂಭದ ದಶಕಗಳಲ್ಲಿ ಜರಗಿದ ಸೋವಿಯತ್ ಕ್ರಾಂತಿಯಲ್ಲಿ ಆರ್ಥಿಕ ಕ್ರಾಂತಿ ಮುನ್ನಲೆಯಲ್ಲಿದ್ದರೆ ಮಧ್ಯದ ದಶಕಗಳ ಚೀನಾ ಕ್ರಾಂತಿಯಲ್ಲಿ ಸಾಂಸ್ಕೃತಿಕ ಕ್ರಾಂತಿ ಮುನ್ನಲೆಯಲ್ಲಿತ್ತು. ಆದರೆ ಮುಂದೆ ಗ್ಲಾಸ್‌ನಾಸ್ಟಾ ಮತ್ತು ಪೆರಿಸ್ಟ್ರೋಯಿಕ ಮೂಲಕ ಗಾರ್ಬಚೇವ್ ಈ ಸೋವಿಯತ್‌ಕ್ರಾಂತಿಯ ಮಿತಿಗಳನ್ನು, ಲೆನಿನ್‌ನ ಕನಸು ಸಂಪೂರ್ಣವಾಗಿ ಹಾದಿ ತಪ್ಪಿದ್ದನ್ನು ಬಹಿರಂಗಗೊಳಿಸಿದರು. ಇಂದು ಚೀನಾದ ಕಮ್ಯುನಿಸಂ ಸಂಪೂರ್ಣವಾಗಿ ತನ್ನದೇ ವೈರುಧ್ಯಗಳಲ್ಲಿ ಮುಳುಗಿ ಜಾಗತೀಕರಣದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಏಳದೆ, ಮುಳುಗದೆ ತೇಲುತ್ತಿರುವುದು ನಮಗೆ ಏನನ್ನು ಸಂಕೇತಿಸುತ್ತದೆ? ಏನನ್ನು ಸಂಕೇತಿಸಬೇಕಾಗಿತ್ತು?

 ಮೊದಲನೆಯದಾಗಿ ಎಡಪಂಥೀಯರು ತಮ್ಮ ಪ್ರಗತಿಪರ ಚಳವಳಿ ಗಳು ಜಡತ್ವದಿಂದ ನರಳತೊಡಗಿದ್ದನ್ನು ಅರಿಯಲು ವಿಫಲರಾಗಿದ್ದು ಮತ್ತು ಫ್ಯಾಶಿಸಂ ಹಾಗೂ ಮತೀಯವಾದ ವಿರುದ್ಧದ ಹೋರಾಟದಲ್ಲಿ ಸಂಘಟನೆಗಳು ಯಾವುದೇ ನಿರ್ದಿಷ್ಟ ಅಜೆಂಡಾಗಳಿಲ್ಲದೆ, ಖಚಿತ ಕಾರ್ಯಸೂಚಿಗಳಿಲ್ಲದೆ ಕೇವಲ ಪ್ರತಿಕ್ರಿಯಾತ್ಮಕ ಹೋರಾಟಕ್ಕೆ ಹೊರಳತೊಡಗಿದ್ದು ನಾವು ಎಡವಿದ್ದಕ್ಕೆ ಸಾಕ್ಷಿ. ವರ್ಗ ಸವಾಲುಗಳನ್ನು ವಿರೋಧಿಸಲು ನಡೆಸಿದ ಪ್ರಗತಿಪರ ಹೋರಾಟಗಳಲ್ಲಿ ತೊಡಗಿಕೊಂಡ ನಮ್ಮ ಬಹುತೇಕ ಎಡಪಂಥೀಯ ಸಂಘಟನೆಗಳು ಒಂದೇ ತಾಯಿ ಬೇರಿನಿಂದ ಹುಟ್ಟುವ ತಳ ಸಮುದಾಯದ ಬದುಕು ನಂತರ ಎಲೆ, ಕೊಂಬೆ, ರೆಂಬೆಗಳಾಗಿ ಟಿಸಿಲೊಡೆಯುವ ತಾತ್ವಿಕ ನೆಲೆಯನ್ನು ಅರಿಯಲು ವಿಫಲವಾದವು. ಜಾತಿ ತಾರತಮ್ಯವನ್ನು, ಜಾತಿ ಸಮಾಜವನ್ನು ಅದರ ಸಂಕೀರ್ಣತೆಯನ್ನು ತಳ ಮಟ್ಟದಲ್ಲಿ ಮುಟ್ಟಿ ಕ್ರಮೇಣ ಒಡೆಯುತ್ತಾ, ಕಟ್ಟುತ್ತಾ ಸಾಗಬೇಕಾದ ಹಾದಿಗಳನ್ನು ಈ ಚಳವಳಿಗಳು ನಿರ್ಲಕ್ಷಿಸಿದವು. ಎಪ್ಪತ್ತು, ಎಂಬತ್ತರ ದಶಕಗಳ ಡಿಎಸ್‌ಎಸ್‌ನ ಸ್ವಾಭಿಮಾನದ, ಮಾನವ ಹಕ್ಕುಗಳಿಗಾಗಿ ನಡೆದ ಜಾತಿವಿನಾಶ ಚಳವಳಿಯನ್ನು ಇಲ್ಲಿನ ಎಡಪಂಥೀಯ ಸಂಘಟನೆಗಳು ನಿರ್ಲಕ್ಷಿಸಿದವು ಮತ್ತು ಒಂದೆಡೆ ಪಟ್ಟಭದ್ರ ಹಿತಾಸಕ್ತಿಗಳ ದೌರ್ಜನ್ಯಗಳ ವಿರುದ್ಧ, ವ್ಯವಸ್ಥೆಯ ಕ್ರೌರ್ಯದ ವಿರುದ್ಧ ಡಿಎಸ್‌ಎಸ್ ಏಕಾಂಗಿಯಾಗಿ ಹೋರಾಡುತ್ತಿದ್ದರೆ ನಮ್ಮ ಬಹುಪಾಲು ಎಡಪಂಥೀಯ ಸಂಘಟನೆಗಳು ಪ್ರಭುತ್ವದ ವಿರುದ್ಧ ಚಳವಳಿಗಳನ್ನು ಹಮ್ಮಿಕೊಂಡಿದ್ದವು. ಉದಾಹರಣೆಗೆ ಬೆಂಡಿಗೇರಿ, ಬದನವಾಳು, ಕಂಬಾಲಪಲ್ಲಿ, ಚಾಮರಾಜ ನಗರ, ಹುಣಿಸೇಕೋಟೆಗಳಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ, ಹತ್ಯೆ, ಕೊಲೆಗಳಿಗೆ ಜಾತಿ ವ್ಯವಸ್ಥೆಯ ಕ್ರೌರ್ಯವೇ ಮೂಲಭೂತ ಕಾರಣ ಎನ್ನುವುದು ಅರಿವಿದ್ದರೂ ಡಿಎಸ್‌ಎಸ್ ಹೊರತುಪಡಿಸಿ ಮಿಕ್ಕ ಬಹುಪಾಲು ಸಂಘಟನೆಗಳ ಹೋರಾಟ ಪ್ರಭುತ್ವದ ವಿರುದ್ಧ, ಸರಕಾರದ ವಿರುದ್ಧ ಕೇಂದ್ರೀಕೃತವಾಗಿತ್ತು.

ಸರಕಾರದಿಂದ ನ್ಯಾಯ ಬೇಕು ಎಂದು ಘೋಷಣೆ ಕೂಗಲಾಯಿತು. ಆದರೆ ಈ ಜಾತಿ-ಫ್ಯೂಡಲಿಸಂ ವ್ಯವಸ್ಥೆ ಈ ಪ್ರಭುತ್ವವನ್ನು ಪಳಗಿಸಿ ತನ್ನ ಬೋನಿನೊಳಗೆ ಬಂಧಿಸಿಟ್ಟುಕೊಂಡು ತನ್ನ ಅನುಕೂಲಕ್ಕೆ ತಕ್ಕಹಾಗೆ ನಿಯಂತ್ರಿಸುತ್ತಿರುತ್ತದೆ ಎನ್ನುವ ವಾಸ್ತವದ ದರ್ಶನ ನಮ್ಮ ಕೆಂಬಾವುಟದ ಸಂಘಟನೆಗಳಿಗೆ ದಕ್ಕಲೇ ಇಲ್ಲ ಅಥವಾ ಕೆಂಪು ಬಣ್ಣದ ಓಕಳಿಯಲ್ಲಿ ಇವರೂ ತೇಲಿ ಹೋದರೇ? ಬ್ರಾಹ್ಮಣ್ಯ-ಫ್ಯೂಡಲಿಸಂನ ಹೆಜಮನಿಯೇ ಆಧುನಿಕೋತ್ತರ ಭಾರತ ಎದುರಿಸುತ್ತಿರುವ ಬಲು ದೊಡ್ಡ ಸವಾಲು. ಈ ಹೆಜಮನಿ ತಳಸಮುದಾಯಗಳ ನಡುವೆ ಒಡಕನ್ನುಂಟು ಮಾಡುತ್ತ ಅವರ ಬದುಕನ್ನು ಛಿದ್ರಗೊಳಿಸುತ್ತಿದೆ, ಭಗ್ನಗೊಳಿಸುತ್ತಿದೆ ಹೊರತಾಗಿ ಪ್ರಭುತ್ವವಲ್ಲ ಎಂಬುದನ್ನು ನಮ್ಮ ಈ ನಿರೀಶ್ವರವಾದಿಗಳು ಕಂಡುಕೊಳ್ಳಲು, ಅರಗಿಸಿಕೊಳ್ಳಲು ವಿಫಲರಾದರು ಅಥವಾ ಇವರಿಗೆ ಇದು ಬೇಕಾಗಿಯೇ ಇರಲಿಲ್ಲವೇನೋ.

ಆದರೆ ಈ ಜಾತಿ ವ್ಯವಸ್ಥೆಯ ಪಾಶವೀಶಕ್ತಿಯ ಕುರಿತಾಗಿ ಅದರ ಆಳದ ಹಿಂಸೆಯ ಕುರಿತಾಗಿ ನಮ್ಮ ಅನೇಕ ಎಡಪಂಥೀಯ ಸಂಘಟನೆಗಳು ತೋರಿಸಿದ ಅವಜ್ಞೆ ಕಾರಣಕ್ಕಾಗಿಯೇ ಅವು ಇಂದು ತಮ್ಮ ಅಸ್ತಿತ್ವಕ್ಕಾಗಿ ನೆಲೆಗಳನ್ನು ಹುಡುಕಾಡುವ ಸ್ಥಿತಿಗೆ ತಲುಪಿವೆ. ಇಲ್ಲಿ ಆ ಸಂಘಟನೆಗಳ ಬದ್ಧತೆ, ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಸಂಪೂರ್ಣವಾಗಿ ಸಮರ್ಥಿಸಿಕೊಳ್ಳುತ್ತಲೇ ಅವರ ಈ ಪೊಲಿಟಿಕಲ್ ಆಕ್ಟಿವಿಸಂನ ದೋಷಗಳನ್ನು ವಿವರಿಸುತ್ತಿದ್ದೇನೆಯೇ ಹೊರತು, ಇದು ಟೀಕೆಯಂತೂ ಅಲ್ಲವೇ ಅಲ್ಲ. ಏಕೆಂದರೆ ನಾನೂ ಅದೇ ಎಡಪಂಥೀಯ ಧಾರೆಯಿಂದ ಬಂದವನು. ವೈಚಾರಿಕ ಚಿಂತನೆಗಳಿಗೆ, ಜನಪರ ಚಳವಳಿಗಳಿಗೆ ಸದಾ ಹೊಸ ಹೊಳಪುಗಳನ್ನು, ಕಮಿಟ್‌ಮೆಂಟ್ ಅನ್ನು, ರಮ್ಯತೆಯನ್ನು ತಂದುಕೊಟ್ಟ ಎಡಪಂಥೀಯ ಚಳವಳಿಗಳು ಜಾತ್ಯತೀತ ಸಮಾಜದ ಕನಸನ್ನು ಕಂಡಿದ್ದರೂ, ಅದರ ಕುರಿತಾದ ಹಂಬಲ ಮತ್ತು ತಹತಹವನ್ನು ವ್ಯಕ್ತಪಡಿಸಲೇ ಇಲ್ಲ. ತನ್ನ ಮೇಲ್ಜಾತಿ ಸ್ವರೂಪದ ವಠಾರದಿಂದ ಮೇಲೇಳಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಪ್ರಭುತ್ವದ ಸರ್ವಾಧಿಕಾರ ಮನೋಧರ್ಮವನ್ನು ಸ್ಪಷ್ಟವಾಗಿ ಗ್ರಹಿಸುತ್ತಿದ್ದ ಈ ಚಳವಳಿಗಳು ಜಾತಿ ಸಮಾಜದ ಕಲೋನಿಯಲ್ ಕ್ರೌರ್ಯವನ್ನು, ಮನುಧರ್ಮ ಶಾಸ್ತ್ರದ ಸನಾತನವಾದದ ವಿಕೃತಿಯನ್ನು ತಳಸಮುದಾಯಗಳ ಬದುಕಿನ ಮೂಲಕ ಅಧ್ಯಯನ ಮಾಡಲೇ ಇಲ್ಲ. ಬಂಡವಾಳಶಾಹಿಗಳ ಆಕ್ರಮಣದ ವಿರುದ್ಧ ತಮ್ಮದೇ ಆದ ತರ್ಕ ಸಿದ್ಧಾಂತಗಳನ್ನು ಬಳಸುತ್ತಿದ್ದ ನಮ್ಮ ಎಡಪಂಥೀಯ ಚಳವಳಿಗಳು ದಲಿತರ ಮೇಲೆ ನಡೆಯುವ ದೌರ್ಜನ್ಯಗಳು, ಕೊಲೆಗಳ ಸಂದರ್ಭದಲ್ಲಿ ಇಡೀ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಗಮನಿಸಲೂ ಇಲ್ಲ ಮತ್ತು ಅದರ ಔಚಿತ್ಯವನ್ನೂ ನಿರ್ಲಕ್ಷಿಸಿದರು. ಶ್ರಮಿಕರೆಂದರೆ ಕೇವಲ ಕಾರ್ಮಿಕರು ಎಂಬಂತೆ ವರ್ತಿಸಿದ್ದು ಇವರ ಒಂದು ಮಿತಿಯೇ ಹೌದು. ವರ್ಗ ಮತ್ತು ವರ್ಗದೊಳಗಿನ ಜಾತಿಗಳ ನಡುವಿನ ಸಂಘರ್ಷ ಈ ಸಂಘಟನೆಗಳಿಗೆ ಮುಖ್ಯವಾಗಲೇ ಇಲ್ಲ.

ಹೀಗಾಗಿಯೇ ದಲಿತ ಕೂಲಿ ಕಾರ್ಮಿಕರು ಎಂದು ಅಂಬೇಡ್ಕರ್ ಅವರು ಸಂಬೋಧಿಸತೊಡಗಿದೊಡನೆ ಎಡಪಂಥೀಯರು ಇದನ್ನು ವಿರೋಧಿಸತೊಡಗಿದರು. ಇಂದು ಹೊಸತಲೆಮಾರಿನ, ಆಧುನಿಕ ಶಿಕ್ಷಣ ಪಡೆದ ದಲಿತ ಯುವಕರು ಈ ಎಡಪಂಥೀಯ ಚಳವಳಿಗಳ ಮಾರ್ಕ್ಸ್‌ವಾದವು ಅಗ್ರಹಾರದಿಂದ ಎದ್ದು ಹೊರಬಂದಿಲ್ಲವೇಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದಾರೆ. ಎಡಪಂಥೀಯ ಸಂಘಟನೆಗಳಿಗೆ ಶೋಷಿತರೆಂದರೆ ಯಾರು ಎಂದು ಹೊಸ ತಲೆಮಾರು ಪ್ರಶ್ನಿಸುತ್ತಿದೆ. ಆರ್ಥಿಕ ಅಸಮಾನತೆಯ ವಿರುದ್ಧ ಶಕ್ತಿಯುತವಾದ, ಪ್ರಬಲವಾದ ಹೋರಾಟವನ್ನು ಕಟ್ಟಿದ ಎಡಪಂಥೀಯ ಚಳವಳಿಗಳು ಜಾತಿ ಅಸಮಾನತೆಯನ್ನು ಕಡೆಗಣಿಸಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಪರಿಗಣಿಸಿದ್ದರೆ ಅದು ಕನಿಷ್ಠ ಕಾಗದದ ಮೇಲಾದರೂ ಗೋಚರಿಸುತ್ತಿಲ್ಲವಲ್ಲ ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಲು ನಮ್ಮ ಎಡಪಂಥೀಯ ಚಳವಳಿಗಳು ತಡಕಾಡುತ್ತಿರುವುದಂತೂ ನಿಜ.

ಅಂಬೇಡ್ಕರ್ ಅವರು ತಮ್ಮ ‘ಬುದ್ಧ ಅಥವಾ ಮಾರ್ಕ್ಸ್’ ಲೇಖನದಲ್ಲಿ ‘‘ಪ್ರಭುತ್ವವು ಕ್ರಮೇಣ ಕಳೆಗುಂದುತ್ತಾ, ನಶಿಸುತ್ತಾ ಹೋಗುತ್ತದೆ ಎಂದು ಕಮ್ಯುನಿಸ್ಟ್ ಸಿದ್ಧಾಂತವು ಹೇಳುತ್ತದೆ. ಇಲ್ಲಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಯಾವಾಗ ನಶಿಸುತ್ತದೆ? ಅದು ನಶಿಸಿದಾಗ ಅದರ ಸ್ಥಾನದಲ್ಲಿ ಯಾವ ಬದಲಿ ವ್ಯವಸ್ಥೆ ಆಕ್ರಮಿಸಿಕೊಳ್ಳುತ್ತದೆ? ಮೊದಲನೆ ಪ್ರಶ್ನೆಗೆ ಅವರು ಉತ್ತರವಾಗಿ ನಿರ್ದಿಷ್ಟವಾದ ಸಮಯವನ್ನು ನಿಗದಿಗೊಳಿಸಿಲ್ಲ. ಸರ್ವಾಧಿಕಾರವು ಪ್ರಜಾಪ್ರಭುತ್ವಕ್ಕಾಗಿಯೇ ಕಾರ್ಯಪ್ರವೃತ್ತವಾಗುತ್ತಾ ಆಚರಣೆಯಲ್ಲಿರುವ ಅಡೆತಡೆಗಳನ್ನು ಒಡೆಯುತ್ತಾ ಪ್ರಜಾಪ್ರಭುತ್ವದ ಒಳಿತಿಗಾಗಿಯೇ ತಾನು ಕ್ರಮೇಣ ನಶಿಸುತ್ತಾ ಹೋಗಬೇಕಲ್ಲವೇ? ಇದಕ್ಕೆ ಅತ್ಯುತ್ತಮ ಉದಾಹರಣೆ ಅಶೋಕ. ಕಳಿಂಗರ ವಿರುದ್ಧ ಹಿಂಸೆಯನ್ನು ಬಳಸಿದ ಅಶೋಕ ನಂತರ ಹಿಂಸೆಯನ್ನೇ ತ್ಯಜಿಸಿದ. ಪ್ರಭುತ್ವವು ನಶಿಸಿದ ನಂತರ ಅದರ ಸ್ಥಾನವನ್ನು ಅರಾಜಕತೆಯು ಆಕ್ರಮಿಸಿಕೊಳ್ಳುತ್ತದೆಯೇ? ಹಾಗಿದ್ದ ಪಕ್ಷದಲ್ಲಿ ಕಮ್ಯುನಿಸ್ಟ್ಟ್ ಪ್ರಭುತ್ವವನ್ನು ಕಟ್ಟುವುದು ಸಹ ಒಂದು ಅರ್ಥಹೀನ ಪ್ರಕ್ರಿಯೆಯಾಗುತ್ತದೆ. ಶಕ್ತಿಕೇಂದ್ರವನ್ನು ಕಟ್ಟಿಕೊಂಡು ಆ ಮೂಲಕ ಬಲದ ನೆರವಿಲ್ಲದೆ ಅದು ತನ್ನ ಪ್ರಭುತ್ವವನ್ನು ಸಂರಕ್ಷಿಸಿಕೊಳ್ಳಲು ಕಷ್ಟವಾಗುತ್ತದೆ. ಒಂದು ವೇಳೆ ಆ ಶಕ್ತಿಕೇಂದ್ರದ ಬಲವನ್ನು ಹಿಂದೆಗೆದುಕೊಂಡ ಕೂಡಲೇ ಅರಾಜಕತೆ ಕಾಣಿಸಿಕೊಳ್ಳತೊಡಗುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ ಧರ್ಮ ಮಾತ್ರ ಉಳಿದುಕೊಳ್ಳುತ್ತದೆ. ಆದರೆ ಧರ್ಮವನ್ನೇ ಬಹಿಷ್ಕರಿಸಿರುವ ಕಮ್ಯುನಿಸ್ಟರಿಗೆ ತಮ್ಮ ಒಳಿತಿಗಾಗಿ ಇರುವ ಧರ್ಮ ಯಾವುದು ಮತ್ತು ಅಪಾಯಕಾರಿಯಾದ ಧರ್ಮ ಯಾವುದು ಎನ್ನುವುದರ ನಡುವಿನ ಭೇದವನ್ನು ಅರಿಯುವುದರಲ್ಲಿಯೂ ಅವರು ಸೋತಿದ್ದಾರೆ. ಕ್ರಿಶ್ಚಿಯಾನಿಟಿ ಧರ್ಮದ ಕುರಿತಾಗಿರುವ ತಮ್ಮ ವಿರೋಧವನ್ನು ಬೌದ್ಧ ಧರ್ಮಕ್ಕೂ ಅನ್ವಯಿಸುವ ಕಮ್ಯುನಿಸ್ಟರು ಈ ಎರಡು ಧರ್ಮಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸಲು ನಿರಾಕರಿಸುತ್ತಾರೆ’’ ಎಂದು ಬರೆಯುತ್ತಾರೆ.


 

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X