ಪಾಕ್ ಹೆಲಿಕಾಪ್ಟರ್ ಸಿಬ್ಬಂದಿ ಬಿಡುಗಡೆ ಮಾಡಿದ ತಾಲಿಬಾನ್
ಇಸ್ಲಾಮಾಬಾದ್, ಆ. 13: ಅಫ್ಘಾನಿಸ್ತಾನದ ಲೋಗರ್ ಪ್ರಾಂತದಲ್ಲಿ ಆಗಸ್ಟ್ 4ರಂದು ತುರ್ತು ಭೂಸ್ಪರ್ಶ ಮಾಡಿದ್ದ ಪಾಕಿಸ್ತಾನಿ ಹೆಲಿಕಾಪ್ಟರ್‌ನ ಸಿಬ್ಬಂದಿಯನ್ನು ಅಫ್ಘಾನ್ ತಾಲಿಬಾನ್ ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.
ತಾಲಿಬಾನ್ ನಿಯಂತ್ರಣದ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ನಡೆಸಿದಾಗ ಆರು ಪಾಕಿಸ್ತಾನಿಯರು ಮತ್ತು ಓರ್ವ ರಶ್ಯನ್ ಪೈಲಟ್‌ನನ್ನು ತಾಲಿಬಾನಿಗಳು ಸೆರೆ ಹಿಡಿದಿದ್ದರು. ಅವರೆಲ್ಲರನ್ನೂ ಪಾಕಿಸ್ತಾನದ ಕುರ್ರಮ್ ಏಜನ್ಸಿಯಲ್ಲಿ ಶುಕ್ರವಾರ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ ‘ರೇಡಿಯೊ ಫ್ರೀ ಯುರೋಪ್’ ವರದಿ ಮಾಡಿದೆ. ಪಂಜಾಬ್ ಸರಕಾರದ ಎಂಐ-17 ಹೆಲಿಕಾಪ್ಟರ್ ನಿರ್ವಹಣೆಗಾಗಿ ಉಝ್ಬೆಕಿಸ್ತಾನದ ಮೂಲಕ ರಶ್ಯಕ್ಕೆ ಹೋಗುತ್ತಿರುವಾಗ ಅಫ್ಘಾನಿಸ್ತಾನದಲ್ಲಿ ತುರ್ತು ಭೂಸ್ಪರ್ಶ ನಡೆಸಿತ್ತು. ಹೆಲಿಕಾಪ್ಟರ್ ಸಿಬ್ಬಂದಿಯ ಬಿಡುಗಡೆಗಾಗಿ ರಶ್ಯ ಮತ್ತು ಪಾಕಿಸ್ತಾನಗಳೆರಡೂ ಪ್ರಯತ್ನಗಳನ್ನು ನಡೆಸಿದ್ದವು.
Next Story





