ಚೀನಾದೊಂದಿಗೆ ಮಾತುಕತೆಗೆ ಫಿಲಿಪ್ಪೀನ್ಸ್ ಒಲವು
ಬೀಜಿಂಗ್, ಆ. 13: ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಚೀನಾದೊಂದಿಗೆ ಔಪಚಾರಿಕ ಮಾತುಕತೆ ನಡೆಸುವಂತೆ ಫಿಲಿಪ್ಪೀನ್ಸ್‌ನ ಮಾಜಿ ಅಧ್ಯಕ್ಷ ಫಿಡೆಲ್ ರಾಮೋಸ್ ಫಿಲಿಪ್ಪೀನ್ಸ್ ಸರಕಾರಕ್ಕೆ ಕರೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಾಂಕಾಂಗ್‌ನಲ್ಲಿ ಚೀನಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಚೀನಾ ಸರಕಾರದ ಉನ್ನತ ಸ್ತರದ ನಾಯಕರೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ರಾಮೋಸ್‌ರನ್ನು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟೆ ವಿಶೇಷ ರಾಯಭಾರಿಯನ್ನಾಗಿ ನೇಮಿಸಿದ್ದಾರೆ. ಅವರು ತನ್ನ ಹಲವು ದಿನಗಳ ಹಾಂಕಾಂಗ್ ಭೇಟಿಯ ವೇಳೆ ಚೀನಾದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯವು ಚೀನಾಕ್ಕೆ ವಿರುದ್ಧವಾಗಿ ಹಾಗೂ ಫಿಲಿಪ್ಪೀನ್ಸ್‌ಗೆ ಪರವಾಗಿ ತೀರ್ಪು ನೀಡಿದೆ.
Next Story





