ಭೂಮಿಯನ್ನು ಹೋಲುವ ನೂತನ ಗ್ರಹ ಪತ್ತೆ
ಬರ್ಲಿನ್, ಆ. 13: ನಮ್ಮ ಆಕಾಶಗಂಗೆಯಲ್ಲೇ ಇರುವ ಭೂಮಿಯನ್ನು ಹೋಲುವ ನೂತನ ಗ್ರಹವೊಂದರ ಅಸ್ತಿತ್ವವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಗ್ರಹವು ಜೀವಕ್ಕೆ ಪೂರಕವಾದ ಅಂತರದಲ್ಲಿ ನಕ್ಷತ್ರ ‘ಪ್ರಾಕ್ಸಿಮ ಸೆಂಟಾರಿ’ಯ ಸುತ್ತ ಸುತ್ತುತ್ತದೆ.
‘‘ಈ ಗ್ರಹವು ಭೂಮಿಯಂತೆ ಇರುವುದು ಎಂದು ನಂಬಲಾಗಿದೆ. ಅದು ತನ್ನ ಸೂರ್ಯನ ಸುತ್ತ ಸುತ್ತುತ್ತಿರುವ ಅಂತರವನ್ನು ಗಮನಿಸಿದರೆ ಗ್ರಹದಲ್ಲಿ ನೀರಿರುವ ಸಾಧ್ಯತೆ ಇದೆ’’ ಎಂದು ಮೂಲವೊಂದನ್ನು ಉಲ್ಲೇಖಿಸಿ ಜರ್ಮನ್ ವಾರಪತ್ರಿಕೆ ‘ಡರ್ ಸ್ಪೈಗಲ್’ ಶುಕ್ರವಾರ ವರದಿ ಮಾಡಿದೆ.
Next Story





