ಪೋರ್ಟರಿಕೊದಲ್ಲಿ ಝಿಕಾ ತುರ್ತು ಪರಿಸ್ಥಿತಿ
ಸಾನ್ ಜುವಾನ್ (ಪೋರ್ಟರಿಕೊ), ಆ. 13: ಝಿಕಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಸರಕಾರ ಪೋರ್ಟರಿಕೊದಲ್ಲಿ ಶುಕ್ರವಾರ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ನಿಧಿಗಳನ್ನು ನೀಡಲು, ತುರ್ತು ನಿಧಿಗಳನ್ನು ಪಡೆಯಲು ಹಾಗೂ ಅಗತ್ಯವಿರುವಲ್ಲಿ ಸಿಬ್ಬಂದಿ ನೇಮಿಸಲು ಈ ಘೋಷಣೆಯು ಅಮೆರಿಕ ಸರಕಾರಕ್ಕೆ ಅಧಿಕಾರ ನೀಡುತ್ತದೆ. ‘‘ಪೋರ್ಟರಿಕೊದಲ್ಲಿ ಹರಡಿರುವ ಝಿಕಾ ವೈರಸನ್ನು ಅಗತ್ಯ ತುರ್ತಿನೊಂದಿಗೆ ನಿಯಂತ್ರಿಸುವುದಕ್ಕೆ ಈ ಆಡಳಿತ ಬದ್ಧವಾಗಿದೆ’’ ಎಂದು ಕಾರ್ಯದರ್ಶಿ ಸಿಲ್ವಿಯಾ ಬರ್‌ವೆಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಕಳೆದ ವಾರದಲ್ಲಿ 1,914 ಹೊಸ ಝಿಕಾ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ತುರ್ತು ಕ್ರಮವನ್ನು ತೆಗೆದುಕೊಂಡಿದೆ. ಅಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮೊದಲ ಪ್ರಕರಣ ವರದಿಯಾದ ಬಳಿಕ ಈವರೆಗೆ ಒಟ್ಟು 10,690 ಪ್ರಕರಣಗಳು ವರದಿಯಾಗಿವೆ.
ಕೆರಿಬಿಯನ್ ದ್ವೀಪದಲ್ಲಿರುವ ಪೋರ್ಟರಿಕೊ ಅಮೆರಿಕದ ಬಾಹ್ಯ ಭೂಭಾಗವಾಗಿದೆ.
Next Story





