ಮುಖ್ಯ ಸಂಪಾದಕನನ್ನು ವಜಾ ಮಾಡಿದ ಔಟ್‌ಲುಕ್
ಆರೆಸ್ಸೆಸ್‌ನ ನಿಜಬಣ್ಣ ಬಯಲುಗೊಳಿಸಿದ್ದಕ್ಕೆ ಶಿಕ್ಷೆ
ಹೊಸದಿಲ್ಲಿ,ಆ.13: ಅತ್ಯಂತ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಔಟ್‌ಲುಕ್ ಮ್ಯಾಗಝಿನ್ ತನ್ನ ಮುಖ್ಯ ಸಂಪಾದಕ ಕೃಷ್ಣ ಪ್ರಸಾದ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.
ಆರೆಸ್ಸೆಸ್‌ನ ನಿಜವಾದ ಬಣ್ಣ ಮತ್ತು ಹಿಂದೂ ಧರ್ಮಕ್ಕೆ ಮತಾಂತರಿಸಲು ಬುಡಕಟ್ಟು ಬಾಲಕಿಯರ ಕಳ್ಳಸಾಗಣೆಯಲ್ಲಿ ಅದರ ಪಾತ್ರವನ್ನು ಬಯಲು ಗೊಳಿಸಿದ ತನಿಖಾ ವರದಿಯು ಔಟ್‌ಲುಕ್‌ನಲ್ಲಿ ಪ್ರಕಟಗೊಂಡ ಬೆನ್ನಿಗೇ ಮ್ಯಾಗಝಿನ್‌ನ ಪ್ರಕಾಶಕ ಇಂದ್ರನೀಲ್ ರಾಯ್ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಇಕನಾಮಿಕ್ ಟೈಮ್ಸ್‌ನ ರಾಜೇಶ ರಾಮಚಂದ್ರನ್‌ಅವರು ಔಟ್‌ಲುಕ್‌ನ ನೂತನ ಮುಖ್ಯ ಸಂಪಾದಕರಾಗಲಿದ್ದಾರೆ. ಅವರು ಆ.16ರಿಂದಲೇ ನೂತನ ಹುದ್ದೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಆಂತರಿಕ ಮೂಲಗಳು ತಿಳಿಸಿವೆ.
ಕೋಮು ದ್ವೇಷವನ್ನು ಪ್ರಚೋದಿಸಿರುವ ಆರೋಪದಲ್ಲಿ ಆರೆಸ್ಸೆಸ್ ಔಟ್‌ಲುಕ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
Next Story





