ಫತೇವುಲ್ಲಾ ಗಡಿಪಾರು ವಿಷಯದಲ್ಲಿ ರಾಜಿಯಿಲ್ಲ: ಟರ್ಕಿ
ಇಸ್ತಾಂಬುಲ್, ಆ. 13: ಧರ್ಮ ಗುರು ಫತೇವುಲ್ಲಾ ಗುಲೇನ್‌ರನ್ನು ಗಡಿಪಾರು ಮಾಡುವಂತೆ ಕೋರುವ ತನ್ನ ಕೋರಿಕೆಯ ವಿಷಯದಲ್ಲಿ ಟರ್ಕಿ ಅಮೆರಿಕದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಟರ್ಕಿಯ ಪ್ರಧಾನಿ ಬಿನಾಲಿ ಯಿಲ್ಡಿರಿಮ್ ಶನಿವಾರ ಹೇಳಿದ್ದಾರೆ.
ಅವರು ಟರ್ಕಿಯ ಪತ್ರಕರ್ತ ರೊಂದಿಗೆ ಮಾತನಾಡುತ್ತಿದ್ದರು. ಕಳೆದ ತಿಂಗಳು ನಡೆದ ವಿಫಲ ಸೇನಾ ಕ್ಷಿಪ್ರಕ್ರಾಂತಿಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಧರ್ಮ ಗುರುವಿನ ಪಾತ್ರವಿದೆ ಎಂಬುದಾಗಿ ಅಂಕಾರ ಆರೋಪಿಸಿದೆ.
ಅಮೆರಿಕದ ಉಪಾಧ್ಯಕ್ಷ ಜೋ ಬೈಡನ್ ಆಗಸ್ಟ್ 24ರಂದು ಟರ್ಕಿಗೆ ಭೇಟಿ ನೀಡುವರು ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.
ಅಮೆರಿಕದ ವಿದೇಶ ಕಾರ್ಯದರ್ಶಿ ಜಾನ್ ಕೆರಿ ಅಕ್ಟೋಬರ್‌ನಲ್ಲಿ ಟರ್ಕಿಗೆ ಭೇಟಿ ನೀಡುವರು ಎಂದೂ ಅವರು ತಿಳಿಸಿದರು.
‘‘ಅಮೆರಿಕದೊಂದಿಗೆ ನಮ್ಮ ಸಂಬಂಧವನ್ನು ಸುಧಾರಿಸುವ ಮಹತ್ವದ ಅಂಶವೆಂದರೆ ಗುಲೇನ್‌ರ ಗಡಿಪಾರು. ಈ ವಿಷಯದಲ್ಲಿ ಚರ್ಚೆಗೆ ಅವಕಾಶವೇ ಇಲ್ಲ’’ ಎಂದರು.
Next Story





