Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಬುಧಿಯಾ ಹಾಗೂ ದೂರ ಓಟಗಾರನ ಒಂಟಿತನ

ಬುಧಿಯಾ ಹಾಗೂ ದೂರ ಓಟಗಾರನ ಒಂಟಿತನ

ತನೂಲ್ ಠಾಕೂರ್ತನೂಲ್ ಠಾಕೂರ್14 Aug 2016 12:47 PM IST
share
ಬುಧಿಯಾ ಹಾಗೂ ದೂರ ಓಟಗಾರನ ಒಂಟಿತನ

ಬುಧಿಯಾ ಸಿಂಗ್ ಚಿತ್ರದಲ್ಲಿ ಹಲವು ಘಟನಾವಳಿಗಳು ನಡೆಯುತ್ತವೆ. ತಂದೆಯಾಗಿ ಮತ್ತು ಗಂಡನಾಗಿ ಬೀರಾಂಚಿ ನಿರ್ಲಕ್ಷ್ಯದ ಪರಿಣಾಮಗಳು, ಅದರ ಒಳ ಕಥೆಯಲ್ಲಿ ಚಿತ್ರ ನಿರ್ಮಾಪಕ ಬುಧಿಯಾ ಮೇಲೆ ಸಾಕ್ಷ್ಯಚಿತ್ರ ನಿರ್ಮಿಸುವುದು, ರಾಜಕೀಯವಾಗಿ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ರಾಜಕಾರಣಿಗಳು, ಬುಧಿಯಾ ತಾಯಿಯ ಪಾತ್ರ ಹೀಗೆ ಸರಣಿ ಘಟನಾವಳಿಗಳು. ಆದರೆ ಪಧಿ ಅವರಿಗೆ ಇದ್ಯಾವುದರಲ್ಲೂ ಆಸಕ್ತಿ ಇಲ್ಲ. ಚಿತ್ರದಲ್ಲಿ ಬಿಡಿ ಬಿಡಿಯಾದ ಮಿಂಚುಗಳು ಪ್ರತಿ ವಿಭಾಗದಲ್ಲೂ ಕಾಣಿಸಿಕೊಳ್ಳುತ್ತವೆ; ಆದರೆ ಯಾವುದು ಕೂಡಾ ನಿರ್ಧಾರಾತ್ಮಕವಾಗಿ ಏನನ್ನು ಹೇಳುವುದೂ ಇಲ್ಲ; ಅಥವಾ ಧ್ವನಿಸುವುದೂ ಇಲ್ಲ. ಕಟ್ಟಕಡೆಯ ಪ್ರಮುಖ ತುಣುಕುಗಳು ಕೂಡಾ ತರಾತುರಿ ಹಾಗೂ ಗೊತ್ತುಗುರಿ ಇಲ್ಲದಂತಾಗಿವೆ.

ಪತ್ರಕರ್ತರು, ಚಿತ್ರ ನಿರ್ಮಾಪಕರು, ಸಾಹಿತಿಗಳು ಹೀಗೆ ಕಥೆ ಹೆಣೆಯುವ ಎಲ್ಲರೂ ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಿದೆ. ಏಕೆಂದರೆ ಪ್ರಾತಿನಿಧ್ಯ ಸಿಗದ ಜನರ ಅಥವಾ ಘಟನೆಗಳ ಬಗ್ಗೆ ಕಥೆ ಹೇಳಿದರಷ್ಟೇ ಸಾಲದು. ಅದನ್ನು ಸರಿಯಾಗಿ ಹೇಳುವುದು ಕೂಡಾ ಮುಖ್ಯ. ಏಕೆಂದರೆ ನೀವು ಆ ಬಗ್ಗೆ ಕಾಳಜಿ ಹೊಂದಿದ್ದೀರಿ ಎಂದು ತೋರಿಸಲು ಇದೊಂದೇ ಮಾರ್ಗ. ಒಂದು ಸಂವಾದವನ್ನು ಹುಟ್ಟುಹಾಕುವ ಶಕ್ತಿ ಇರುವ, ಚಿರಪರಿಚಿತವಾದದ್ದನ್ನು ಹೊಸ ಬೆಳಕಿನಲ್ಲಿ ಕಾಣುವ ಸಾಮರ್ಥ್ಯ ಇದ್ದಲ್ಲಿ, ಅಂಥ ಕಥೆಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಹಲವು ಬಾರಿ ಒಂದು ನೈತಿಕ ಸತ್ಯವನ್ನು ಪ್ರತಿಪಾದಿಸುವ, ನೈಜ ವ್ಯಕ್ತಿ ಹಾಗೂ ಕಥೆಗಳನ್ನು ಆಧರಿಸಿದ ಚಿತ್ರಗಳಿಗೆ ಅವು ಸಾಮಾನ್ಯ ಗುಣಮಟ್ಟದ ಚಿತ್ರಗಳಾಗಿದ್ದರೂ, ಅವುಗಳನ್ನು ‘‘ಶ್ರದ್ಧೆಯ’’, ‘‘ಸದಭಿರುಚಿಯ’’ ಇನ್ನೂ ಭಯಾನಕ ಎಂದರೆ, ವಿಶಾಲ ಹೃದಯದ ಚಿಕ್ಕ ಚಿತ್ರ ಎಂದು ಮುಕ್ತವಾಗಿ ಹೊಗಳುತ್ತೇವೆ.

ಮನೋಜ್ ಬಾಜಪೇಯಿ, ತಿಲೋತ್ತಮ ಶೋಮ್ ಹಾಗೂ ಮಯೂರ್ ಪಟೋಲ್ ತಾರಾಗಣದ ‘‘ಬುಧಿಯಾ ಸಿಂಗ್ ಬಾರ್ನ್ ಟೂ ರನ್’’ ಕೂಡಾ ಕಡಿಮೆ ಬಜೆಟ್‌ನಲ್ಲಿ ಸಿದ್ಧಪಡಿಸಿದ, ಸೀಮಿತ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ‘‘ವಿಶಾಲ ಹೃದಯದ ಕಿರು ಚಿತ್ರ’’. ಇದು ನಂಬಲಸಾಧ್ಯ ಹಾಗೂ ಮಹತ್ವದ ಕಥೆಯನ್ನು ಹೇಳುತ್ತದೆ. ನಾವು ತಿಳಿದುಕೊಳ್ಳಲೇಬೇಕಾದ ಮತ್ತು ಕಾಳಜಿ ವಹಿಸಬೇಕಾದ ಕಥೆ. ಆದರೆ ಪ್ರಮುಖ ಪ್ರಶ್ನೆ ಇದು: ಬುಧಿಯಾ ಜೀವನದ ನಾಟಕೀಯ ಚಿತ್ರಣವಾದ ‘‘ಬುಧಿಯಾ ಸಿಂಗ್’’ ಉತ್ತಮ ಕಲೆಯೇ? ಭುವನೇಶ್ವರದ ಸರಕಾರಿ ಕ್ರೀಡಾ ಹಾಸ್ಟೆಲ್‌ನಲ್ಲಿರುವ 14 ವರ್ಷದ ಬಾಲಕನಿಗೆ ಇದು ನ್ಯಾಯ ಒದಗಿಸಿದೆಯೇ? ತನ್ನ ಬದುಕು ಇಷ್ಟೊಂದು ಲಯ ತಪ್ಪಿದ್ದು ಹೇಗೆ ಎಂದು ಆತನೇ ಅಚ್ಚರಿಪಡಬೇಕು.

ಬುಧಿಯಾ (ಪಟೋಲ್) ಓಟ ಆರಂಭಿಸುವ ಮುನ್ನ ಆತನನ್ನು ವ್ಯಕ್ತಿ ಎಂದು ಪರಿಗಣಿಸಲೇ ಇಲ್ಲ; ಆತನ ತಾಯಿ ಕೂಡಾ. ಆಕೆ ಆ ಮಗುವನ್ನು ಒಂದು ವಸ್ತುವಿನಂತೆ ಕಂಡಳು. ಭುವನೇಶ್ವರ ಕೊಳಗೇರಿಯ ಕಟುಕನಿಗೆ 850 ರೂಪಾಯಿಗೆ ಮಾರಾಟ ಮಾಡಿದಳು. ಈ ಘಟನೆಗೂ ಮುನ್ನ, ಬುಧಿಯಾ ಜೀವನ ಇದಕ್ಕಿಂತ ಸ್ವಲ್ಪ ಉತ್ತಮವಾಗಿತ್ತು: ರಸ್ತೆಯಲ್ಲಿ ಒಂದು ಕಾರು ಬಂತು ಎಂದರೆ ಭಿಕ್ಷೆಗೆ ಅವಕಾಶ ಸಿಕ್ಕಿತು; ಸೇದಿ ಬಿಟ್ಟ ಸಿಗರೇಟು ಅಂದರೆ ಸ್ನೇಹಿತರಿಗೆ ಉಚಿತ ಧೂಮಪಾನ; ಬುಧಿಯಾ ಬಡವ ಮಾತ್ರವಲ್ಲ; ಒರಿಸ್ಸಾದ ಅಸಂಖ್ಯಾತ ಬಡಮಕ್ಕಳ ಪೈಕಿ ಒಂದು ಸಂಖ್ಯೆಯಾಗಿದ್ದ.

ನಗರದಲ್ಲಿ 22 ಬಡಮಕ್ಕಳಿಗೆ ಆಶ್ರಯ ನೀಡಿದ್ದ ಜೂಡೊ ಶಾಲೆ ನಡೆಸುತ್ತಿದ್ದ ಸ್ಥಳೀಯ ವ್ಯಾಪಾರಿ ಬೀರಾಂಚಿ ದಾಸ್ (ಬಾಜಪೇಯಿ) ದತ್ತು ಸ್ವೀಕರಿಸಿದಾಗ ಬುಧಿಯಾ ಜೀವನದಲ್ಲಿ ಮಹತ್ವದ ಬದಲಾವಣೆಯಾಯಿತು. ಒಂದು ಮುಂಜಾನೆ ಅಶ್ಲೀಲ ಪದ ಬಳಸಿದ ಬುಧಿಯಾನಿಗೆ ಅಂಗಳದಲ್ಲಿ ಸುತ್ತು ಓಡುವ ಶಿಕ್ಷೆಯನ್ನು ಬೀರಾಂಚಿ ಕೊಡುತ್ತಾರೆ. ಬೀರಾಂಚಿ ಸಂಜೆ ಮನೆಯಿಂದ ವಾಪಸಾದಾಗಲೂ ಬಾಲಕ ಓಡುತ್ತಲೇ ಇರುತ್ತಾನೆ. ಈ ಚಿತ್ರಣವಂತೂ ‘‘ಭಾಗ್ ಮಿಲ್ಖಾ ಭಾಗ್’’ ಚಿತ್ರದ ಪ್ರತಿರೂಪ. ಮಿಲ್ಖಾ ಸಿಂಗ್ ಶಿಕ್ಷೆಯನ್ನೇ ಹೇಗೆ ಅನುರಾಗವಾಗಿ ಕಂಡುಕೊಂಡ ಎನ್ನುವುದನ್ನು ಆ ಚಿತ್ರದಲ್ಲಿ ತೋರಿಸಲಾಗಿತ್ತು. ಬೀರಾಂಚಿ ಸೈಕಲ್‌ನಲ್ಲಿ ಹಿಂಬಾಲಿಸುತ್ತಿದ್ದರೆ, ಮನುಷ್ಯ ಸಹನೆಗೆ ಸವಾಲಾಗುವ ಮಟ್ಟಕ್ಕೆ ಪುಟ್ಟ ಬಾಲಕ ಭುವನೇಶ್ವರದ ಹೆದ್ದಾರಿಯಲ್ಲಿ ಓಡುತ್ತಾನೆ.

ಆದರೆ ವಾಸ್ತವವಾಗಿ ಬುಧಿಯಾ ಓಟಕ್ಕೆ ಏನು ಅರ್ಥ? ಅದು ಆತನಿಗೆ ಏನು ಮಾಡಿದೆ? ಎಲ್ಲಕ್ಕಿಂತ ಹೆಚ್ಚಾಗಿ ಬುಧಿಯಾ ಸೌಲಭ್ಯ ವಂಚಿತ ಹಿನ್ನೆಲೆಯಿಂದ ಬಂದವನು. ಅದು ಕೂಡಾ ಪಾತ್ರ ವಹಿಸಿದೆಯೇ? ಚಿತ್ರದ ನಿರ್ದೇಶಕ ಸೌಮೇಂದ್ರ ಪಧಿ ಅವರಿಗೆ ಇಂಥ ಪ್ರಶ್ನೆಯಲ್ಲಿ ಆಸಕ್ತಿ ಇಲ್ಲ. ಬುಧಿಯಾ ಓಟ ಆರಂಭಿಸಿದಾಗ ಆತನಿಗಿನ್ನೂ ಐದು ವರ್ಷ. ಮಕ್ಕಳು ತಮ್ಮ ಆಕಾಂಕ್ಷೆಗಳನ್ನು ಅಭಿವ್ಯಕ್ತಗೊಳಿಸುವ ವಯಸ್ಸು ಅದಲ್ಲ. ಸಾಮಾನ್ಯವಾಗಿ ಹೇಳಿದಂತೆ ಅನುಸರಿಸುತ್ತಾರೆ. ಆದರೆ ಈ ಬಾಲಕ ವೃತ್ತಿಪರ ಅಥ್ಲೀಟ್‌ನ ತುಡಿತ ಹಾಗೂ ತೀವ್ರತೆಯೊಂದಿಗೆ ಓಡುತ್ತಾನೆ. ಇದು ಸಹಜವಾಗಿಯೇ ಬುಧಿಯಾ ಸಿಂಗ್ ಮತ್ತು ಬುಧಿಯಾ ನಡುವೆ ಸಂಬಂಧ ಕಲ್ಪಿಸುತ್ತದೆ. ಆದರೆ ಚಿತ್ರದ ಪ್ರಮುಖ ಪ್ರಶ್ನೆ ಉತ್ತರ ಸಿಗದೇ ಹಾಗೆಯೇ ಉಳಿಯುತ್ತದೆ. ಬುಧಿಯಾ ಸಿಂಗ್, ನಾಯಕನಿಂದ ಕಿತ್ತುಹಾಕಿದ ಚಿತ್ರದಂತೆ ಕಾಣುತ್ತದೆ.

ಚಿತ್ರದ ಇನ್ನೊಂದು ಕ್ರೂರ ಘಟನೆಯೂ ಒಪ್ಪಲಾಗದ ಚಿತ್ರಣದಂತಿದೆ. ಚಿತ್ರದ ಆರಂಭದಲ್ಲಿ, ಬೀರಾಂಚಿ ಸಿಆರ್‌ಪಿಎಫ್ ಪೊಲೀಸ್ ಅಧಿಕಾರಿಗೆ ಮನವಿ ಮಾಡಿ, ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಬುಧಿಯಾ ಓಡಲು ಅವಕಾಶ ಕೋರುತ್ತಾರೆ. ಈ ಕೂಟದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಾರೆ. ಈ ಮನವಿಯನ್ನು ಪುರಸ್ಕರಿಸಲಾಗುತ್ತದೆ. ಆದರೆ ಓಟ ಏಕೆ ನೃತ್ಯದಂತೆ ಪ್ರದರ್ಶನ ಕಲೆಯಲ್ಲ ಎಂದು ಅಚ್ಚರಿ ಪಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬುಧಿಯಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ, ತನ್ನ ಪಾಡಿಗೆ ಓಡುತ್ತಾನೆ. ಜನ ಆತನಿಗಾಗಿ ಕೇಕೆ ಹಾಕುವುದು ವಿಚಿತ್ರ ಹಾಗೂ ಅಸಂಬದ್ಧ.

ಬುಧಿಯಾ ಸಿಂಗ್ ಚಿತ್ರದ ಮೊದಲ 30 ನಿಮಿಷ ತೀರಾ ದುರ್ಬಲ ಹಾಗೂ ಪರಿಣಾಮಕಾರಿಯಾಗಿಲ್ಲ. ಪಾತ್ರಗಳಿಗೆ ಒಳ್ಳೆಯ ಹಾಗೂ ಕೆಟ್ಟ ಸ್ಥಾನಗಳನ್ನು ನೀಡಿ, ನಾವು ನಿರ್ದಿಷ್ಟ ಪಕ್ಷವನ್ನು ವಹಿಸುವಂತೆ ನಿರೀಕ್ಷಿಸುತ್ತದೆ. ಆದರೆ ಬುಧಿಯಾ ಭುವನೇಶ್ವರದಿಂದ ಪುರಿಗೆ ಓಡುವ ಅದ್ಭುತ ಹಾಗೂ ಸುದೀರ್ಘ ದೃಶ್ಯಾವಳಿಯ ಮೂಲಕ ಚಿತ್ರ ಟೇಕಾಪ್ ಆಗುತ್ತದೆ. 65 ಕಿಲೋ ಮೀಟರ್ ದೂರವನ್ನು ದಾಖಲೆ ಅವಧಿಯಲ್ಲಿ ಓಡುತ್ತಾನೆ. ಅಂದರೆ ಏಳು ಗಂಟೆಗಿಂತ ಸ್ವಲ್ಪ ಹೆಚ್ಚು ಅವಧಿ ತೆಗೆದುಕೊಳ್ಳುತ್ತಾನೆ. ತೀರಾ ಶಕ್ತಿಶಾಲಿ ದೃಶ್ಯವೆಂದರೆ, ಭುವನೇಶ್ವರದ ಜನ ಬುಧಿಯಾ ಜತೆಗೆ, ‘‘ಬುಧಿಯಾ ಭಾಗ್, ಬುಧಿಯಾ ಜಿಂದಾಬಾದ್’’ ಘೋಷಣೆ ಕೂಗುತ್ತಾ ಓಡುತ್ತಾರೆ. ಭಾರತದ ಈ ಪುಟ್ಟ ಪಟ್ಟಣ ಬಾಲಕನಿಗೆ ನಿರ್ದಿಷ್ಟ ಉದ್ದೇಶದ ನಿರೀಕ್ಷೆ ಹುಟ್ಟಿಸುತ್ತದೆ.

ಈ ಓಟದಲ್ಲಿ ಒಂದು ಕ್ಷಣ, ಬುಧಿಯಾ ತೀರಾ ಬಳಲಿದಂತೆ ಕಂಡುಬರುತ್ತಾನೆ ಹಾಗೂ ಓಟವನ್ನು ಬಿಟ್ಟುಬಿಡುವ ನಿರ್ಧಾರಕ್ಕೆ ಬರುತ್ತಾನೆ. ಕಳೆದ ಐದು ಗಂಟೆಗಳಲ್ಲಿ 50 ಕಿಲೋಮೀಟರ್ ಓಡಿದ್ದಾನೆ. ಬೀರಾಂಚಿಯಲ್ಲಿ ನೀರು ಕೇಳುತ್ತಾನೆ. ಬೀರಾಂಚಿ ತನ್ನ ಸೈಕಲ್‌ಗೆ ಕಟ್ಟಿದ್ದ ಬಾಟಲಿ ಕೈಗೆತ್ತಿಕೊಳ್ಳುತ್ತಾರೆ. ಬುಧಿಯಾ ಎದುರು ತೂಗಾಡಿಸುತ್ತಾರೆ. ಬುಧಿಯಾ ಸನಿಹಕ್ಕೆ ಬಂದಾಗ ಬೀರಾಂಚಿ ಮತ್ತಷ್ಟು ಎತ್ತುತ್ತಾರೆ. ಆತನನ್ನು ಅಣಕಿಸುತ್ತಾ ಹಿಂಸೆ ಕೊಡುತ್ತಾರೆ. ಬೀರಾಂಚಿ ಆ ಬಾಲಕನ ಪಾಲಿಗೆ ಅಷ್ಟೊಂದು ಕಠಿಣವಾಗಿದ್ದಾರೆಯೇ ಎಂದು ಅಚ್ಚರಿಪಡದಿರಲು ಸಾಧ್ಯವೇ ಇಲ್ಲ. ಕೆಲ ವ್ಯಕ್ತಿಗಳು, ಮಕ್ಕಳ ಕಲ್ಯಾಣ ಸಚಿವಾಲಯ ಸೇರಿದಂತೆ ಸಂಘಟನೆಗಳು ಬೀರಾಂಚಿ ವಿರುದ್ಧ ಆರೋಪ ಮಾಡುತ್ತವೆ. ಇವರ ಟೀಕೆಗಳು ರಾಜಕೀಯ ದುರುದ್ದೇಶದಿಂದ ಕೂಡಿದ್ದರೂ, ಬೀರಾಂಚಿ ವಿಧಾನಗಳು ಪ್ರಶ್ನಾರ್ಹವಾಗಿ ಕಂಡುಬರುತ್ತವೆ. ಈ ಚರ್ಚೆಯಲ್ಲಿ ಚಿತ್ರ ಎಲ್ಲಿ ಸ್ಥಾನ ಪಡೆಯುತ್ತದೆ ಎಂಬ ಬಗ್ಗೆ ನಿಮಗೇ ಅಚ್ಚರಿಯಾಗುತ್ತದೆ.

ಓಟದ ಬಳಿಕ ಬುಧಿಯಾ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಪ್ರಜ್ಞೆ ಮರಳಿದ ಬಳಿಕ ಆತ ಏನನ್ನೂ ಕುಡಿಯುವ ಸ್ಥಿತಿಯಲ್ಲಿರುವುದಿಲ್ಲ. ಆತನಿಗೆ ನೀಡಿದ ದ್ರವ ಕಕ್ಕುತ್ತಾನೆ. ಆದರೆ ಬುಧಿಯಾನ ಆರೈಕೆ ಮಾಡುವ ಬದಲು ಬೀರಾಂಚಿ ಆತನನ್ನು ಟಿವಿ ವರದಿಗಾರರ ಎದುರು ಕರೆದೊಯ್ಯುತ್ತಾರೆ ಹಾಗೂ ತನ್ನ ವಿರುದ್ಧ ಮಾಡಿದ ಟೀಕೆಗಳನ್ನು ಹೇಗೆ ಖಂಡಿಸುತ್ತಾನೆ ಎಂದು ಪದೇ ಪದೇ ಹೇಳಿಸುತ್ತಾರೆ. ಬುಧಿಯಾಗೆ ತಾನೂ ಒಂದು ಭಾಗವಾಗಿರುವ ಸರ್ಕಸ್‌ನ ಬಗ್ಗೆ ಅರ್ಥವಾಗಿದೆಯೇ ಎನ್ನುವುದು ಖಚಿತವಾಗುವುದಿಲ್ಲ. ಬುಧಿಯಾನ ವಿಶಿಷ್ಟ ಪ್ರತಿಭೆಯನ್ನು ಬೀರಾಂಚಿ ಗುರುತಿಸಿರಬಹುದು. ಆದರೆ ಆತನ ಒಪ್ಪಿಗೆ ಪಡೆಯುವ ಆಸಕ್ತಿ ಅವರಿಗೆ ಇರಲಿಲ್ಲ. ಈ ಬಾಲಪ್ರತಿಭೆಯನ್ನು ಸಾಧನೆಗೆ ಸಜ್ಜುಗೊಳಿಸಲಾಗಿದೆಯೇ ಅಥವಾ ಇದರ ಪರಿಣಾಮವಾಗಿ ಆತನ ಬಾಲ್ಯಕ್ಕೆ ಹಾನಿಯಾಗಿದೆಯೇ ಎಂಬ ಗೊಂದಲ ಬುಧಿಯಾ ಕತೆಯಲ್ಲಿ ಅಂತರ್ಗತವಾಗಿದೆ. ಆದರೆ ಚಿತ್ರ ಅದನ್ನು ವಿಸ್ತರಿಸಲು ಹೋಗುವ ಬದಲು, ಸರಳ, ನೇರ ಕಥೆಯತ್ತ ಗಮನ ಹರಿಸುತ್ತದೆ.

ಬುಧಿಯಾ ಸಿಂಗ್ ಚಿತ್ರದಲ್ಲಿ ಹಲವು ಘಟನಾವಳಿಗಳು ನಡೆಯುತ್ತವೆ. ತಂದೆಯಾಗಿ ಮತ್ತು ಗಂಡನಾಗಿ ಬೀರಾಂಚಿ ನಿರ್ಲಕ್ಷ್ಯದ ಪರಿಣಾಮಗಳು, ಅದರ ಒಳ ಕಥೆಯಲ್ಲಿ ಚಿತ್ರ ನಿರ್ಮಾಪಕ ಬುಧಿಯಾ ಮೇಲೆ ಸಾಕ್ಷ್ಯಚಿತ್ರ ನಿರ್ಮಿಸುವುದು, ರಾಜಕೀಯವಾಗಿ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ರಾಜಕಾರಣಿಗಳು, ಬುಧಿಯಾ ತಾಯಿಯ ಪಾತ್ರ ಹೀಗೆ ಸರಣಿ ಘಟನಾವಳಿಗಳು. ಆದರೆ ಪಧಿ ಅವರಿಗೆ ಇದ್ಯಾವುದರಲ್ಲೂ ಆಸಕ್ತಿ ಇಲ್ಲ. ಚಿತ್ರದಲ್ಲಿ ಬಿಡಿ ಬಿಡಿಯಾದ ಮಿಂಚುಗಳು ಪ್ರತಿ ವಿಭಾಗದಲ್ಲೂ ಕಾಣಿಸಿಕೊಳ್ಳುತ್ತವೆ; ಆದರೆ ಯಾವುದು ಕೂಡಾ ನಿರ್ಧಾರಾತ್ಮಕವಾಗಿ ಏನನ್ನು ಹೇಳುವುದೂ ಇಲ್ಲ; ಅಥವಾ ಧ್ವನಿಸುವುದೂ ಇಲ್ಲ. ಕಟ್ಟಕಡೆಯ ಪ್ರಮುಖ ತುಣುಕುಗಳು ಕೂಡಾ ತರಾತುರಿ ಹಾಗೂ ಗೊತ್ತುಗುರಿ ಇಲ್ಲದಂತಾಗಿವೆ.

ಬುಧಿಯಾ ಸಿಂಗ್ ಚಿತ್ರದ ಹರಿವಿನಲ್ಲಿ ಅಲ್ಲಲ್ಲಿ ತಡೆ ಇದೆ. ಬಹುಶಃ ಇದಕ್ಕೆ ಕಥೆಯೇ ಪ್ರಬಲವಾಗಿರುವುದೂ ಕಾರಣವಾಗಿರಬಹುದು. ಭಾರತೀಯ ಅಸಡ್ಡೆ ಹಾಗೂ ಆಡಳಿತಶಾಹಿ ಬುಧಿಯಾನನ್ನು ಬಲಿ ತೆಗೆದುಕೊಳ್ಳುತ್ತದೆ. ಇನ್ನೂ ಕೆಲ ಕತೆಗಳು ಇದಕ್ಕಿಂತಲೂ ಹೃದಯವಿದ್ರಾವಕ ಎನಿಸಬಹುದು. ಆದರೆ ಇದು ಆತನ ಜೀವನವನ್ನು ಆಧರಿಸಿ ಮಾಡಿದ ಚಿತ್ರ ಎನ್ನುವುದು ಅಧಿಕಾರಯುತವಾದದ್ದು. ಈ ಕಥೆ ಬಹಳಷ್ಟು ಮಂದಿಯನ್ನು ತಲುಪಬೇಕಿದೆ. ಆದರೆ ಏನೂ ಮಾಡಲಾಗದು; ಉತ್ತಮ ದೇಶದಂತೆ, ಬುಧಿಯಾ ಉತ್ತಮ ಚಿತ್ರಕ್ಕೂ ಅರ್ಹನಾಗಿದ್ದ.

share
ತನೂಲ್ ಠಾಕೂರ್
ತನೂಲ್ ಠಾಕೂರ್
Next Story
X