ರಿಯೋ ಒಲಿಂಪಿಕ್ಸ್ ಫುಟ್ಬಾಲ್: ಬ್ರೆಝಿಲ್ ಸೆಮಿಫೈನಲ್ಗೆ
ರಿಯೋ ಡಿಜನೈರೊ, ಆ.14: ಕೊಲಂಬಿಯಾ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಆತಿಥೇಯ ಬ್ರೆಝಿಲ್ ಫುಟ್ಬಾಲ್ ತಂಡ ರಿಯೋ ಒಲಿಂಪಿಕ್ ಗೇಮ್ಸ್ನಲ್ಲಿ ಸೆಮಿ ಫೈನಲ್ಗೆ ತಲುಪಿದೆ.
ಶನಿವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ನಾಯಕ ನೇಮರ್ 11ನೆ ನಿಮಿಷದಲ್ಲಿ ಗೋಲು ಖಾತೆ ತೆರೆದರು. 83ನೆ ನಿಮಿಷದಲ್ಲಿ ಗೋಲು ಬಾರಿಸಿದ ಲೂಯಾನ್ ಬ್ರೆಝಿಲ್ಗೆ 2-0 ಅಂತರದ ಗೆಲುವು ತಂದುಕೊಟ್ಟರು.
ನೇಮರ್ ನೇತೃತ್ವದ ಬ್ರೆಝಿಲ್ ತಂಡ ಬುಧವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಹಾಂಡುರಾಸ್ ತಂಡವನ್ನು ಎದುರಿಸಲಿದೆ. ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ದಕ್ಷಿಣ ಅಮೆರಿಕದ ಹಾಂಡುರಾಸ್ ತಂಡ ದಕ್ಷಿಣ ಕೊರಿಯಾವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಶಾಕ್ ನೀಡಿತ್ತು.
ಒಲಿಂಪಿಕ್ಸ್ನಲ್ಲಿ ಚೊಚ್ಚಲ ಪದಕ ಗೆಲ್ಲುವ ವಿಶ್ವಾಸದಲ್ಲಿರುವ ಬ್ರೆಝಿಲ್ ಒಂದು ವೇಳೆ ಫೈನಲ್ಗೆ ತಲುಪಿದರೆ ಶನಿವಾರ ವಿಶ್ವ ಚಾಂಪಿಯನ್ ಜರ್ಮನಿಯನ್ನು ಎದುರಿಸುವ ಸಾಧ್ಯತೆಯಿದೆ.
Next Story