ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾಗಿ ಮುಸ್ತಫಾ ಕೆಂಪಿ ಪುನರಾಯ್ಕೆ

ಪುತ್ತೂರು, ಆ.14: ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಮುಸ್ತಫಾ ಕೆಂಪಿ 5ನೆ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಯು.ಅಬ್ದುಲ್ ಶುಕೂರ್ ಶುಕ್ರಿಯಾ, ಖಜಾಂಚಿಯಾಗಿ ಮುಹಮ್ಮದ್ ಮುಸ್ತಫಾ ಆಯ್ಕೆಯಾಗಿದ್ದಾರೆ.
ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ಹಾರೂನ್ ರಶೀದ್ ಹಾಜಿ ಅಗ್ನಾಡಿ ಮತ್ತು ಅಶ್ರಫ್ ಹಾಜಿ ಪೆದಮಲೆ, ಜೊತೆ ಕಾರ್ಯದರ್ಶಿಯಾಗಿ ಎಚ್.ಯೂಸುಫ್ ಹಾಜಿ ಮತ್ತು ಯೂಸುಫ್ ಹಾಜಿ ಎಣ್ಮಾಡಿ, ಸದಸ್ಯರಾಗಿ ಸಿದ್ದೀಕ್ ಕೆಂಪಿ, ಯು.ಟಿ.ರವೂಫ್, ಯು.ಟಿ.ಫಯಾಝ್, ಅಬ್ಬಾಸ್ ನಿನ್ನಿಕಲ್, ಅಝೀಝ್ ನಿನ್ನಿಕಲ್, ಲತೀಫ್ ನ್ಯಾಶನಲ್, ಹಸನಬ್ಬ ಕುದ್ಲೂರು, ಹಾಜಿ ಮುಹಮ್ಮದ್ ಕಡವಿನಬಾಗಿಲು, ಹನೀಫ್ ಕಡವಿನಬಾಗಿಲು, ಹಮೀದ್ ಬಿ.ಕೆ. ಕಡವಿನಬಾಗಿಲು, ಇಬ್ರಾಹೀಂ ಪುಳಿತ್ತಡಿ, ಮುನೀರ್ ಎನ್ಮಾಡಿ, ಹಮೀದ್ ಕರಾವಳಿ, ಮುಹಮ್ಮದ್ ಕೂಟೇಲು ಆಯ್ಕೆಯಾದರು. ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ಹಾಜಿ ಮುಸ್ತಫಾ ಕೆಂಪಿ ಕಳೆದ 11 ವರ್ಷಗಳಿಂದ ಈ ಮಸೀದಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಉದ್ಘಾಟನೆಗೊಂಡ 4 ಕೋಟಿ ರೂ. ವೆಚ್ಚದಲ್ಲಿ ಮಸೀದಿಯ ಪುನರ್ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಉಪಾಧ್ಯಕ್ಷರಾಗಿ, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಉಪಾಧ್ಯಕ್ಷರಾಗಿ, ಕಮ್ಮಾಡಿ ಇಸ್ಲಾಮಿಕ್ ಸೆಂಟರ್‌ನ ಉಪಾಧ್ಯಕ್ಷರಾಗಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯ ಸದಸ್ಯರಾಗಿ, ಇಂಡಿಯನ್ ಸ್ಕೂಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.





