ಶ್ರೀವಲಿ ಪ್ರೌಢಶಾಲೆ ಚಿತ್ರಾಪುರದಲ್ಲಿ ಯುವಧಾರಾ ಸಮ್ಮೇಳನ ವೃಕ್ಷಾರೋಪಣ ಕಾರ್ಯಕ್ರಮ

ಭಟ್ಕಳ,ಆ.14: ತಾಲೂಕಿನ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯಲ್ಲಿ ಶ್ರೀ ಚಿತ್ರಾಪುರ ಮಠದ ಸ್ವಾಮಿಜೀಯವರ ಅಮೃತ ಹಸ್ತದಿಂದ ವನಮಹೋತ್ಸವ ಕಾರ್ಯಕ್ರಮ ಡೆಯಿತು.ಈ ಕಾರ್ಯಕ್ರಮದಲ್ಲಿ ವಸಂತ ರೆಡ್ಡಿ, ಡಿ.ಎಪ್.ಓ ಹೊನ್ನಾವರ.ರವೀಂದ್ರ ಆರ್.ಎಪ್.ಓ. ಪ್ರವೀಣ ಬಸ್ರೂರ ಆರ್.ಎಪ್.ಓ. ಸಾಗರ, ಡಾ. ಪ್ರಕಾಶ ಪಂಡಿತಉಪನ್ಯಾಸಕರು, ಎ.ವಿ.ಬಾಳಿಗ ಕಾಲೇಜು ಕುಮಟಾ, ಉದ್ಯಮಿ ಕೃಷ್ಣಭಟ್ ಮಲ್ಲಾಪುರ, ಚಿತ್ರಾಪುರ ಮಠ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ,ಅರುಣ ನಾಡಕರ್ಣಿ ಚಾತುರ್ಮಾಸ ಕಮಿಟಿಯ ಸಂಚಾಲಕ ಕೃಷ್ಣಾನಂದ ಹೆಬ್ಳೇಕರ್ ಯುವಧಾರಾ ಸಂಚಾಲಕರು, ಮಮತಾ ಭಟ್ಕಳ ಮುಖ್ಯಾಧ್ಯಾಪಕರು ಮತ್ತು ಮಠದ ಶಿಬಿರಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅರುಣ ನಾಡಕರ್ಣಿಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಸವಿಸ್ತಾರವಾಗಿ ಪ್ರಾಸ್ತಾವಿಕ ಮಾತನಾಡಿದರು.ಕೃಷ್ಣಾನಂದಾ ಹೆಬ್ಳೆಕರ್‌ವಂದನಾರ್ಪಣೆ ಸಲ್ಲಿಸಿದರು.ಸಂಜಯಗುಡಿಗಾರ ನಿರ್ವಹಿಸಿದರು.
Next Story





