ಸ್ವಾತಂತ್ರ್ಯ ದಿನದ ಅಂಗವಾಗಿ ಜಾಗೃತಿಗಾಗಿ 'ಭಾರತಕ್ಕಾಗಿ ಓಟ' ಕಾರ್ಯಕ್ರಮ
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸುಭೇದಾರ್ ನಾಗೇಶ್ ಪತ್ನಿಗೆ ಸನ್ಮಾನ
.jpg)
ಹಾಸನ,ಆ.14: ಸ್ವಾತಂತ್ರ್ಯ ದಿನದ ಅಂಗವಾಗಿ ಜಾಗೃತಿಗಾಗಿ ಭಾರತಕ್ಕಾಗಿ ಓಟ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸುಭೇದಾರ್ ನಾಗೇಶ್ ಪತ್ನಿಗೆ ಸನ್ಮಾನ ಮಾಡುವ ಮೂಲಕ ಚಾಲನೆ ನೀಡಿದರು.
ನಗರದ ಎವಿಕೆ ಕಾಲೇಜ್ ಆವರಣದಲ್ಲಿ ಬಿಜೆಪಿ ಹಾಗೂ ಸಂಘ ಸಂಸ್ಥೆಗಳು ದೇಶ ಭಕ್ತ ಯುವಕರಿಗಾಗಿ ಹಮ್ಮಿಕೊಂಡಿದ್ದ ಭಾರತಕ್ಕಾಗಿ ಓಟವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ, ವಕೀಲರಾದ ಮಂಜುನಾಥ್ ಮೂರ್ತಿ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಪ್ರೀತಮ್ ಜೆ. ಗೌಡ ಇವರು ದೇಶದ ದ್ವಜಾವನ್ನು ಪ್ರದರ್ಶಿಸುವುದರ ಮೂಲಕ ಚಾಲನೆಯನ್ನು ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ ಉದ್ದೇಶಿಸಿ ಮಾತನಾಡಿ, ಭಾರತ ದೇಶದಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದೇಶದ ಆಂತರಿಕ ಬದ್ಧತೆ ಹಾಗೂ ಪರಕೀಯರ ದಾಳಿ ಇನ್ನು ನಿಂತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ನಾವು ಸುಖಿ ಜೀವನ ನಡೆಸುತ್ತಿದ್ದೇವೆ ಎಂದರೇ ನಮ್ಮ ದೇಶದ ಗಡಿ ಕಾಯುತ್ತಿರುವ ಯೋಧರ ಪರಿಶ್ರಮ ಕಾರಣ. ಅಂತವರ ಕಷ್ಟ ಹಾಗೂ ಕುಟುಂಬದ ನೆಮ್ಮದಿಗೆ ನಾವೆಲ್ಲಾರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. ಹಾಸನದ ಸುಭೇದಾರ್ ನಾಗೇಶ್ ಹಾಗೂ ಇನ್ನಿತರರು ದೇಶದ ರಕ್ಷಣೆ ಮಾಡಲು ಹೋಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ನಡೆಸಿ ಅಮರರಾಗಿದ್ದಾರೆ. ಅಂತವರ ಕುಟುಂಬದ ಬಗ್ಗೆ ಕಾಳಜಿವಹಿಸಿ ಅವರ ನೆರವಿಗೆ ಬಂದು ಗೌರವಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು. ಗಡಿ ಕಾಯುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಇದೆ ವೇಳೆ ಕರೆ ನೀಡಿದರು.
ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮತ್ತು ದೇಶ ವಿರೊಧಿ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಯುವಕರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯುವಕರು ಮತ್ತು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ. ದೇಶ ಭಕ್ತಿ ಬೆಳೆಸುವ ನಿಟ್ಟಿನಲ್ಲಿ ಭಾರತಕ್ಕಾಗಿ ಓಟ ಎಂಬ ಹೆಸರಿನಲ್ಲಿ ನೂರಾರು ದೇಶ ಭಕ್ತರು ರಾಷ್ಟ್ರ ಧ್ವಜವನ್ನು ಹಿಡಿದು ಓಟ ಮಾಡುತ್ತಿರುವುದಾಗಿ ಹೇಳಿದರು.
ವಕೀಲರಾದ ಮಂಜುನಾಥ್ ಮೂರ್ತಿ ಮಾತನಾಡುತ್ತಾ, ರನ್ ಫಾರ್ ಭಾರತದ ಮೂಲಕ ಎಲ್ಲಾರಲ್ಲೂ ಜಾಗೃತಿ ಮೂಡಿಸಬೇಕಾಗಿದೆ. ಸಂಭೃದ್ದ ಭಾರತ ದೇಶಕ್ಕೆ ವಿರುದ್ಧವಾಗಿ ಅನೇಕರು ವ್ಯಕ್ತಿತ್ವ ಬೆಳೆಸಿಕೊಂಡಿರುವುದನ್ನು ನೋಡಿದ್ದೇವೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳುವ ಮನೋಭಾವದ ಗುಣ ಹೊಂದಲು ಸಲಹೆ ನೀಡಿದರು. 2020ನೇ ಸಾಲಿಗೆ ದೇಶ ಪ್ರಪಂಚದಲ್ಲೆ ಉತ್ತಮವನ್ನಾಗಿಸಲು ಮುಖ್ಯವಾಗಿ ಯುವಕರ ಪಾತ್ರ ಬಹಾಳ ಪ್ರಮುಖವಾಗಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಳಲ್ಲಿ ದೇಶ ಭಕ್ತಿ ಮೂಡಿಸಿದರೇ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶ ಆಗುವುದರಲ್ಲಿ ಯಾವ ಸಂಶಯವಿಲ್ಲ ಎಂದರು.
ಭಾರತಕ್ಕಾಗಿ ಓಟದಲ್ಲಿ ಹಾಕಿ ಆಟೋಟ ತರಬೇತಿದಾರ ಮಕ್ಕಳು, ಬಿಜೆಪಿ ಮುಖಂಡರು ಹಾಗೂ ಸಂಘ ಪರಿವಾರದವರು ಭಾಗವಹಿಸಿ ಯಶಸ್ವಿಗೊಳಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ 2 ಕಿಮಿ ದೂರದಷ್ಟು ಓಟ ನಡೆಸಿ ಯಶಸ್ವಿಗೊಳಿಸಿದರು.
ಇದೆ ವೇಳೆ ಸಮಿತಿಯ ಕಾರ್ಯಕರ್ತರು ವೇಣುಗೋಪಾಲ್, ಡಿ. ಶಂಕರಗೌಡ, ಹರ್ಷಿತ್, ರಾಹುಲ್ ಕಿಣಿ, ಪ್ರಶಾಂತ್ ನಾಯ್ಡು, ಲಿಖಿತ್‌ಗೌಡ, ರಘುನಂದನ್, ಸತ್ಯಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್, ಪ್ರಸನ್ನ ಕುಮಾರ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹೆಚ್.ಎನ್. ನಾಗೇಶ್, ಮಾಜಿ ಅಧ್ಯಕ್ಷ ಚನ್ನಕೇಶವ, ಪಾರ್ಥ ಸಾರಥಿ, ಮಂಜುನಾಥ್ ಶರ್ಮ, ಎಸ್.ಡಿ. ಚಂದ್ರು ಇತರರು ಪಾಲ್ಗೊಂಡಿದ್ದರು.







