ಗ್ರಂಥಾಲಯ ಕಟ್ಟಡಕ್ಕಾಗಿ ಚಳವಳಿ ಹಾದಿ ಖೇದಕರ: ಜೈ ಮಾರುತಿ ದೇವರಾಜ್

ಸಕಲೇಶಪುರ,ಆ.14: ಊರಿಗೊಂದು ವ್ಯವಸ್ಥಿತವಾದ ಗ್ರಂಥಾಲಯ ಕಟ್ಟಡ ಪಡೆಯಲು ಚಳ ವಳಿಯ ಹಾದಿ ಹಿಡಿಯುವಂತ ಪರಿಸ್ಥಿಥಿಯನ್ನು ತಾಲೂಕಿನ ವ್ಯವಸ್ಥೆ ಸೃಷ್ಟಿಸಿರುವುದು ದುರಾದೃಷ್ಟಕರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜೈ ಮಾರುತಿ ದೇವರಾಜ್ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ಗ್ರಂಥಾಲಯ ದಿನಾಚಾರಣೆಯಲ್ಲಿ ಮಾತನಾಡಿದ ಅವರು, ವ್ಯವಸ್ಥಿತವಾದ ಗ್ರಂಥಾಲಯ ನಿರ್ಮಿಸಿಕೋಡುವುದು ಇಲ್ಲಿಯ ಜನ ಪ್ರತಿನಿಥಿಗಳ ಕರ್ತವ್ಯವಾಗಿದೆ . ಇದನ್ನು ಪದೆ ಪದೆ ಊರಿನ ಜನ ಭಿಕ್ಷೆಯಂತೆ ಬೇಡುವುದು ನಮ್ಮ ದುಸ್ಥಿತಿ ಎಂದರು.
ಜ್ಷಾನ ನೀಡುವ ಗ್ರಂಥಾಲಯಗಳು ಊರಿನ ಗೌರವಕ್ಕೆ ಸಾಕ್ಷಿಯಾಗುತ್ತವೆ. ಇದನ್ನು ಅರ್ಥಮಾಡಿಕೊಳ್ಳೋದ ಜನರು ಊರಿನ ಜನ ಪ್ರತಿನಿಥಿಗಲಾಗಿದ್ದಾರೆ. ಇವರುಗೆ ಗ್ರಂಥಾಲಯಗಳ ಮಹಾತ್ವತಿಳಿದಿಲ್ಲ ಎಂದರು.
ಸರಕಾರಿ ಗ್ರಂಥಾಲಯ ನಿರ್ಮಿಸಲು ಲಕ್ಷಾಂತರ ರೂ ಹಣ ಸಿದ್ದವಿದೆ. 30*30ನಿವೇಶನ ನೀಡಲು ತಾಲ್ಲೂಕು ಆಡಳಿತಕ್ಕೆ ಮನಸಿಲ್ಲದಿರುವುದು. ಇವರುಗಳ ಬೌತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.
ಪಟ್ಟಣದ ಹೃದೆಯ ಬಾಗದಲ್ಲಿ ಗ್ರಂಥಾಲಯ ನಿಮಾಣಕ್ಕೆ ಸೂಕ್ತ ನಿವೇಶನ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತದೆ ಎಂದರು.
ಗ್ರಂಥಪಾಲಕ ಚಂದ್ರಕುಮಾರ್, ಬ್ಯಾಂಕ್ ವ್ಯವಸ್ಥಾಪಕ ವಿನಯ್, ಶಶಿದರ್, ಪತ್ರಕರ್ತ ಯೋಗೆಶ್ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಗೊದ್ದು ಲಕ್ಕಪ್ಪ ಶಿಕ್ಷಕ ರುದ್ರಪ್ಪ ಆಧಿವಾಸಿ ಜನಗಳ ಒಕ್ಕೂಟದ ಅಧ್ಯಕ್ಷ ನವೀನ್ ಅಂಬೇ
ಡ್ಕರ್ ಯುವ ಸೇನೆ ಕಾರ್ಯಕರ್ತ ಶಾಂತ್‌ರಾಜ್ ಮುಂತಾದವರಿದ್ದರು.







