ಮಂಗಳೂರು : ಆ. 15 ರಂದು 20 ನೇ ಇಂಡಿಪೆಂಡೆನ್ಸ್ ಪುಟ್‌ಬಾಲ್ ಟೂರ್ನಮೆಂಟ್‌ನ ಫೈನಲ್ ಕ್ರೀಡಾಕೂಟ
ಮಂಗಳೂರು, ಆ.14: ದ.ಕ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ನಿಂದ ನಡೆಯುತ್ತಿರುವ 20 ನೇ ಇಂಡಿಪೆಂಡೆನ್ಸ್ ಪುಟ್‌ಬಾಲ್ ಟೂರ್ನಮೆಂಟ್‌ನ ಫೈನಲ್ ಕ್ರೀಡಾಕೂಟ ಆ. 15 ರಂದು ನಡೆಯಲಿದೆ.
ಹೈಸ್ಕೂಲ್ ವಿಭಾಗದ ಫೈನಲ್ ಪಂದ್ಯಾಟ ವು ಭಾರತ ಇಂಗ್ಲೀಷ್ ಮೀಡಿಯಂ ಉಳ್ಳಾಲ ಮತ್ತು ಬಜ್ಪೆ ಸೈಂಟ್ ಜೋಸೆಫ್ ನಡುವೆ ನಡೆಯಲಿದೆ. ಪಿಯುಸಿ ವಿಭಾಗದ ಅಂತಿಮ ಪಂದ್ಯಾಟ ರೊಸಾರಿಯೋ ಪಿ.ಯು.ಕಾಲೇಜು ಮತ್ತು ಮಿಲಾಗ್ರಿಸ್ ಪಿ.ಯು ಕಾಲೇಜು ನಡುವೆ ನಡೆಯಲಿದೆ. ಪದವಿ ವಿಭಾಗದ ಅಂತಿಮ ಪಂದ್ಯಾಟ ಬ್ಯಾರಿಸ್ ಇಂಜಿನಿಯರಿಂಗ್ ಕಾಲೇಜು ಮತ್ತು ಮಿಲಾಗ್ರಿಸ್ ಡಿಗ್ರಿ ಕಾಲೇಜು ನಡುವೆ ನಡೆಯಲಿದೆ. ಪಂದ್ಯಾಟ ಮುಗಿದ ನಂತರ 11.30 ಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ದ.ಕ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ .ಎಂ.ಅಸ್ಲಾಂ ತಿಳಿಸಿದ್ದಾರೆ.
Next Story





