ಹುತಾತ್ಮ ಯೋಧ ಕನ್ನಡಿಗ ಲೆ:ಕ: ನಿರಂಜನ್‌ಗೆ ಶೌರ್ಯಚಕ್ರ

ಹೊಸದಿಲ್ಲಿ, ಅ.14: ಜನವರಿಯಲ್ಲಿ ನಡೆದ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ವೇಳೆ ಹತನಾದ ಭಯೋತ್ಪಾದಕನೊಬ್ಬನ ಶವ ಪರಿಶೀಲನೆಯ ವೇಳೆ ಹುತಾತ್ಮರಾಗಿದ್ದ ಕನ್ನಡಿಗ, ಎನ್‌ಎಸ್‌ಜಿಯ ಬಾಂಬ್ ನಿಷ್ಕ್ರಿಯ ದಳದ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಇ.ಕೆ. ನಿರಂಜನ್‌ರಿಗೆ ಶೌರ್ಯ ಚಕ್ರದ ಗೌರವ ಪ್ರಾಪ್ತವಾಗಿದೆ.
ಇದು ದೇಶದ ಮೂರನೆ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದ್ದು 70ನೆ ಸ್ವಾತಂತ್ರೋತ್ಸವದ ಮುನ್ನಾ ದಿನ ಪ್ರದಾನಿಸಲಾಗಿದೆ.ಭೂಸೇನೆಯ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಯಾಗಿದ್ದ ನಿರಂಜನ್, ಜ.1-2ರ ನಡುವಿನ ರಾತ್ರಿ ಪಂಜಾಬ್‌ನ ಪಠಾಣ್‌ಕೋಟ್ ವಾಯು ನೆಲೆಗೆ ಭಯೋತ್ಪಾದಕರು ದಾಳಿ ನಡೆಸಿದೊಡನೆ ಅಲ್ಲಿಗೆ ಧಾವಿಸಿದ್ದ ವಿಶೇಷ ಎನ್‌ಎಸ್‌ಜಿ ಕಮಾಂಡೊ ಘಟಕದಲ್ಲಿದ್ದರು.
ಅನುಭವ ಮೇಧಾವಿ ಬಾಂಬ್ ನಿಷ್ಕ್ರಿಯ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಭಯೋತ್ಪಾದಕರು ಹೊಸ ತಂತ್ರಜ್ಞಾನ ಬಳಸಿದ್ದರು. ಅದರ ವಿವರ ಬ್ಲಾಕ್ ಕ್ಯಾಟ್ ಕಮಾಂಡೊ ಪಡೆಯ ಕಾರ್ಯಾಚರಣೆ ಪ್ರಕ್ರಿಯೆ ಮಾನದಂಡದ ಪಟ್ಟಿಯಲ್ಲಿರಲಿಲ್ಲವೆಂದು ಎನ್‌ಎಸ್‌ಜಿ ಹೇಳಿತ್ತು.ಹತ ಯೋಧನ ಕಿಸೆಯಲ್ಲಿದ್ದ ಗ್ರೆನೇಡೊಂದು ಸ್ಫೋಟಗೊಂಡು ನಿರಂಜನ್‌ರ ಶ್ವಾಸಕೋಶಕ್ಕೆ ಗಾಯವಾಗಿತ್ತು. ಅವರು ಆಸ್ಪತ್ರೆಗೆ ಒಯ್ಯುವ ಮೊದಲೇ ಕೊನೆಯುಸಿರೆಳೆದಿದ್ದರು.





