ಮಂಗಳೂರು: ವಸತಿಗೃಹಕ್ಕೆ ದಾಳಿ - ಮೂವರು ವಶಕ್ಕೆ
ಮಂಗಳೂರು, ಆ. 14: ನಗರದ ರಾವ್ ಆ್ಯಂಡ್ ರಾವ್ ವೃತ್ತ ಬಳಿಯ ಲಾಡ್ಜ್‌ವೊಂದಕ್ಕೆ ದಾಳಿ ನಡೆಸಿರುವ ಬಂದರು ಠಾಣಾ ಪೊಲೀಸರು ಲಾಡ್ಜ್‌ನ ಮ್ಯಾನೇಜರ್ ಸಹಿತ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ವಸತಿಗೃಹಕ್ಕೆ ದಾಳಿ ನಡೆಸಿರುವ ಬಂದರು ಠಾಣಾ ಪೊಲೀಸರು ಬೆಳ್ತಂಗಡಿಯ ನಿವಾಸಿ ಜಯಂತ್ (39), ತೊಕ್ಕೊಟ್ಟಿನ ಪ್ರದೀಪ್ (25) ಹಾಗೂ ಕಾಸರಗೋಡಿನ ರಫೀಕ್ (32) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





