ಬಯಲು ಮಲಮುಕ್ತ ಮಲೆನಾಡು’ ಕಾರ್ಯಕ್ರಮ

ಮೂಡಿಗೆರೆ, ಆ.14: ಅನೇಕ ಬಡಕುಟುಂಬಗಳ ಮನೆಗಳಲ್ಲಿ ಶೌಚಾಲಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದು, ಅಂತಹ ಕುಟುಂಬಸ್ಥರು ಸರಕಾರದಿಂದ ಬರುವ ಸವಲತ್ತನ್ನು ಪಡೆಯಲು ಮುಂದಾಗಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ತಿಳಿಸಿದರು. ತಾಲೂಕನ್ನು ಬಯಲು ಮಲಮುಕ್ತ ಮಲೆನಾಡಾಗಿ ಪರಿವರ್ತಿಸಲು ಬೆಟ್ಟಗೆರೆ ಗ್ರಾಮದಿಂದ ಆರಂಭಿಸಲಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮನೆ ಮನೆಗೆ ಭೆೇಟಿ ನೀಡಿ ವಿಶೇಷ ಸಭೆೆಗಳ ಮೂಲಕ ಸಾರ್ವಜನಿಕರೊಂದಿಗೆ ಬಯಲು ಮಲಮುಕ್ತ ಮಾಡುವ ನಿಟ್ಟಿನಲ್ಲಿ ಕಾರ್ಯಗಾರ ನಡೆಸಲಾಯಿತು. ಬಳಿಕ ಗೋಣಿಬೀಡು ಹೋಬಳಿಯ ಹಂತೂರು, ಕಿರುಗುಂದ, ಚಿನ್ನಿಗ ಗ್ರಾಪಂ ವ್ಯಾಪ್ತಿಗಳಿಗೆ ಅಧಿಕಾರಿಗಳು ಭೆೇಟಿ ನೀಡಿದರು. ಗ್ರಾಪಂ ಅಧ್ಯಕ್ಷ ಬಿ.ಕೆ.ದಿನೇಶ್, ಸದಸ್ಯರಾದ ಜಯಪಾಲ್, ಶ್ರೀಕಾಂತ್, ರುಧ್ರಮ್ಮ, ಮಮತ ಹಾಗೂ ಪಿಡಿಒ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Next Story





