ಮುಲ್ಕಿ ಕೇಂದ್ರ ಶಾಫಿ ಮಸೀದಿಯಲ್ಲಿ ಸ್ವಾತಂತ್ರೋತ್ಸವ

ಮಂಗಳೂರು, ಆ.15: ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯಲ್ಲಿ ಸ್ವಾತಂತ್ರ ದಿನಾಚರಣೆ ಜಮಾಅತ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಲ್ಕಿ ಶಾಫಿ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ ಧ್ವಜಾರೋಹಣಗೈದರು. ಸಮಾರಂಭವನ್ನು ಸುರತ್ಕಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಬೇತಡ್ಕ ಅಬ್ದುಲ್ಲ ದಾರಿಮಿ ಉದ್ಘಾಟಿಸಿದರು. ಜಮಾಅತ್ ಉಪಾಧ್ಯಕ್ಷ ಅಮಾನುಲ್ಲಾ, ಕಾರ್ಯದರ್ಶಿ ಮುಹಮ್ಮದ್ ಹುಸೈನ್, ಇನಾಯತ್ ಅಲ ಚರಂತಿಪೇಟೆ ಮಾತನಾಡಿದರು. ಸಮಾರಂಭದಲ್ಲಿ ರಶೀದ್ ಮುಲ್ಕಿ, ನಾಸಿರ್, ಅಮೀರ್, ಅಬ್ದುಲ್ ಖಾದರ್ ಮುಲ್ಕಿ ಉಪಸ್ಥಿತರಿದ್ದರು. ಶರೀಫ್ ಇಂದಾದಿ ಮುಲ್ಕಿ ಸ್ವಾಗತಿಸಿ, ವಂದಿಸಿದರು.
Next Story





