ವಿವಾಹ ನಿರಾಕರಿಸಿದ ಯುವತಿಗೆ ಆ್ಯಸಿಡ್ ಎರಚಿದ ಭಗ್ನ ಪ್ರೇಮಿ
![ವಿವಾಹ ನಿರಾಕರಿಸಿದ ಯುವತಿಗೆ ಆ್ಯಸಿಡ್ ಎರಚಿದ ಭಗ್ನ ಪ್ರೇಮಿ ವಿವಾಹ ನಿರಾಕರಿಸಿದ ಯುವತಿಗೆ ಆ್ಯಸಿಡ್ ಎರಚಿದ ಭಗ್ನ ಪ್ರೇಮಿ](https://www.varthabharati.in/sites/default/files/images/articles/2016/08/15/acidattack-1447772607.jpg)
ಮಾನಂದವಾಡಿ, ಆ.15: ಭಗ್ನಪ್ರೇಮಿಯೊಬ್ಬ ವಿವಾಹವಾಗಲು ನಿರಾಕರಿಸಿದ ಯುವತಿಯ ಮುಖಕ್ಕೆ ಆ್ಯಸಿಡ್ ಹಾಕಿ ಕೊಲ್ಲಲು ಶ್ರಮಿಸಿದ ಘಟನೆ ಮಾನಂದವಾಡಿಯಿಂದ ವರದಿಯಾಗಿದೆ. ಶನಿವಾರ ರಾತ್ರಿ ಎಂಟು ಗಂಟೆಗೆ ಪೂದಂಪಾರದ ಮೆಲ್ವಿನ್ ಜೋಸೆಫ್(24) ಎಂಬ ಯುವಕ ತೊಂಬಿಕ್ಕಾಟ್ ಶಾಜಿಯವರ ಪುತ್ರಿ ನಿಮ್ಮಿ(30)ಎಂಬವರಿಗೆ ಆ್ಯಸಿಡ್ ಎರಚಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ನಿಮ್ಮಿಯ ಮೇಲೆ ಆ್ಯಸಿಡ್ ಎರಚುತ್ತಿದ್ದಾಗ ತಡೆಯಲು ಅಡ್ಡ ಬಂದ ನಿಮ್ಮಿಯ ತಂದೆ ಶಾಜಿ, ತಾಯಿ ಮೇರಿ ಹಾಗೂ ನಿಮ್ಮಿಯನ್ನು ಮೊದಲು ಮಾನಂದವಾಡಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಕೋಝಿಕ್ಕೋಡ್ನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರಿಗೂ ಗಂಭೀರ ಸುಟ್ಟಗಾಯಗಳಾಗಿವೆ ಎಂದು ವರದಿ ತಿಳಿಸಿದೆ. ಆ್ಯಸಿಡ್ ಎರಚಿದ ಭಗ್ನ ಪ್ರೇಮಿ ಮೆಲ್ವಿನ್ ಮೆಕ್ಯಾನಿಕ್ ಆಗಿದ್ದು, ನಿಮ್ಮಿಯ ಮನೆಗೆ ಬಂದು ಅಡಿಗೆ ಕೋಣೆಯಲ್ಲಿ ನಿಂತಿದ್ದ ಅವಳ ಮುಖಕ್ಕೆ ಸುರಿದಿದ್ದಾನೆ. ಇದನ್ನು ತಡೆಯಲು ಬಂದ ನಿಮ್ಮಿಯ ತಂದೆ,ತಾಯಿ ಹಾಗೂ ನಿಮ್ಮಿಗೂ ಗಂಭೀರ ಸುಟ್ಟಗಾಯಗಳಾಗಿವೆ. ಇದೇವೇಳೆ ಆ್ಯಸಿಡ್ ಮೆಲ್ವಿನ್ ಮೇಲೆಯೂ ಹಾರಿದ್ದು ಆತನಿಗೂ ಸ್ವಲ್ಪಪ್ರಮಾಣದ ಸುಟ್ಟಗಾಯಗಳಾಗಿವೆ ಎಂದು ತಿಳಿದು ಬಂದಿದೆ. ನಿಮ್ಮಿ ಗಂಡ ತೊರೆದ ಮಹಿಳೆಯಾಗಿದ್ದು ಮೆಲ್ವಿನ್ ಆಕೆಯನ್ನು ಪ್ರೇಮಿಸುತ್ತಿದ್ದ ಎನ್ನಲಾಗಿದೆ.