ವಿಕಾಸ್ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

ಮಂಗಳೂರು, ಆ.15: ನಗರದ ವಿಕಾಸ್ ಕಾಲೇಜಿನಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಧ್ವಜಾರೋಹಣಗೈದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ, ಪ್ರಸ್ತುತ ವಿಕಾಸ್ ಕಾಲೇಜಿನಲ್ಲಿ ವಿದ್ಯಾರ್ಥಿ ನಿಲಯದ ಮುಖ್ಯಾಧಿಕಾರಿಯಾಗಿರುವ ಶಶಿಧರ್ ಆಳ್ವಾರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಕಾಲೇಜಿನ ಮುಖ್ಯಸ್ಥರೂ ಆಗಿರುವ ಜೆ.ಕೃಷ್ಣ ಪಾಲೆಮಾರ್ ಮಾತನಾಡಿ, ವಿದ್ಯಾರ್ಥಿಗಳು ಈ ದೇಶದ ಸಂಪತ್ತು. ಭಾರತ ಜಾತ್ಯಾತೀತ ರಾಷ್ಟ್ರ. ದೇಶಕ್ಕಾಗಿ ಮಡಿದ ಸೈನಿಕರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಶಿಸ್ತಿನ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ವಿಕಾಸ್ ಎಜ್ಯುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ಜೆ.ಕೊರಗಪ್ಪ, ಸೂರಜ್ ಕಲ್ಯ ಉಪಸ್ಥಿತರಿದ್ದರು. ವಿಕಾಸ್ ಎಜ್ಯೂ ಸೊಲ್ಯುಷನ್ ನಿರ್ದೇಶಕರಾದ ಡಾ.ಅನಂತ್‌ಪ್ರಭು ಜಿ., ಸಂಚಾಲಕರಾದ ರಾಜಾರಾಮ್, ಉಪಪ್ರಾಂಶುಪಾಲೆ ಮೋಹನಾ, ಎಸಿಇ ಸಂಯೋಜಕರಾದ ವಿಪಿನ್ ನಾರಾಯಣನ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪೂಜಾ ಸ್ವಾಗತಿಸಿದರು. ಕರವೇಂದರ್ ಸಿಂಗ್ ವಂದಿಸಿದರು. ಶ್ರಾವ್ಯ ಮತ್ತು ಮುಗ್ಧಾ ಕಾರ್ಯಕ್ರಮ ನಿರೂಪಿಸಿದರು.





