ಜೋಕಟ್ಟೆ ಅಂಜುಮನ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರೋತ್ಸವ
.gif)
ಮಂಗಳೂರು, ಆ.15: ಜೋಕಟ್ಟೆ ಅಂಜುಮನ್ ವಿದ್ಯಾಸಂಸ್ಥೆಯ ವತಿಯಿಂದ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕೋಸ್ಟಲ್ ಫಿಶರೀಸ್‌ನ ಹಾಜಿ ಎಂ. ಅಬ್ದುರ್ರಶೀದ್ ಧ್ವಜಾರೋಹಣಗೈದರು.
ಕಾರ್ಯಕ್ರಮದಲ್ಲಿ ಜೆಬಿಎಫ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಜಿ. ಪೈ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು.
ಜಮಾವಾ ದಮ್ಮಾಮ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್, ಮುಹಮ್ಮದ್ ಅಲಿ ರಿಯಾದ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎ.ರಶೀದ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸಂಚಾಲಕ ಹಾಜಿ ಮೂಸಬ್ಬ ಬ್ಯಾರಿ, ಉಪ ಸಂಚಾಲಕ ಹಾಜಿ ಜೆ.ಮುಹಮ್ಮದ್, ಅಥಾವುಲ್ಲಾ, ಅಮೀರ್, ಶಾಲಾ ಶಿಕ್ಷಕ ರಕ್ಷಕ ಮಂಡಳಿಯ ಅಧ್ಯಕ್ಷ ರಶೀದ್, ಉಪಾಧ್ಯಕ್ಷರಾದ ಅಮಿತಾ, ಮಸೀದಿ ಅಧ್ಯಕ್ಷರು, ಕಾರ್ಯದರ್ಶಿ ಶರೀಫ್, ಸಲಹೆಗಾರರಾದ ಎಂ.ಪಿ. ಇಸ್ಮಾಯಿಲ್, ಬ್ಯಾರಿ ಸಾಹಿತ್ಯ ಸಂಘದ ಸದಸ್ಯ ಸಂಚಾಲಕ ಹಾಜಿ ಆಲಿಯಬ್ಬ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶಾಂತಿ ವಿಜಯ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಶುಭ ರವೀಂದ್ರ ವಂದಿಸಿದರು.
Next Story





