ಎಲ್ಲ ಜನರ ಸಹಭಾಗಿತ್ವ ಪಡೆದು ದೇಶ ಕಟ್ಟುತ್ತೇನೆ
ನಾನು ಭಾರತದ ಪ್ರಧಾನಿಯಾದರೆ...

125 ಕೋಟಿ ಭಾರತೀಯರೇ, ನಮಸ್ಕಾರ. ಜಗತ್ತಿನಲ್ಲಿ ಅದ್ಭುತವಾದ ದೇಶ ಭಾರತ. ಈ ದೇಶದ ಪ್ರಧಾನಿಗೆ ಅದ್ಭುತವಾದ ವಿವೇಚನೆ ಆವಶ್ಯಕ ವಾಗಿದೆ. ಇಲ್ಲಿ ದೇಶ ಒಂದಾದರೂ, ಧರ್ಮ ಅಪಾರ. ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಅದ್ಭುತವಾದ ಶಕ್ತಿ ಸಾಮರ್ಥ್ಯದ ಆವಶ್ಯಕತೆ ಇದೆ. ದೇಶದ ಸರ್ವ ಜನರ ಆಶೀರ್ವಾದ ಪಡೆಯಲು ಸಾಧ್ಯವಾದರೆ ಮಾತ್ರ ನಾನು ಈ ದೇಶದ ಸಮರ್ಥ ಪ್ರಧಾನಿ ಯಾಗಬಲ್ಲೆ. ನೀವು ಯಾವುದನ್ನು ಅದು ನ್ಯಾಯ ಸಮ್ಮತ ಬೇಡಿಕೆ ಯಾಗಿದ್ದರೆ ಅದನ್ನು ನನ್ನಿಂದ ನೀಡಲು ಸಾಧ್ಯವಾಗಿರಬೇಕು. ಈ ದೇಶದ ಯಾವುದೇ ಜೀವಿಯು ಅನ್ಯಾಯವಾಗಿ ನಾಶವಾಗಬಾರದು. ನಾನು ಭಾರತೀಯರ ಜಾತಿ, ಮತ, ಧರ್ಮವನ್ನು ಅಪೇಕ್ಷೆ ಪಡುವುದಿಲ್ಲ. ನಿಮ್ಮ ದೇಶ ಸೇವೆಯನ್ನು ಮಾತ್ರ ಬಯಸುತ್ತೇನೆ .ಪ್ರತಿಯೊಬ್ಬ ಪ್ರಜೆಯೂ ಒಂದೊಂದು ರೀತಿಯಲ್ಲಿ ದೇಶವನ್ನು ಕಾಯುವ ಸೇನಾನಿಯಾಗಿದ್ದಾರೆ. ನನ್ನ ಪಾಲಿಗೆ ಜನರ ಸಹಭಾಗಿತ್ವದಲ್ಲಿ ನನಗೆ ವಿಶ್ವಾಸವಿದೆ. ದೇಶದಲ್ಲಿ ಹುಟ್ಟಿದ ಒಂದು ಮಗುವನ್ನು ಅವಿಶ್ವಾಸದ ಕಣ್ಣು ಗಳಿಂದ ನೋಡುವ ದುರದೃಷ್ಟ ಯಾವ ಪ್ರಧಾನಮಂತ್ರಿ ಗಳಿಗೂ ಈ ದೇಶದಲ್ಲಿ ಬಾರದಿರಲಿ. ಅದು ದೇಶದ ಶಕ್ತಿಯನ್ನು ಕುಂದಿಸಬಹುದು. ಯಾವುದೇ ದೇಶ ಭಯೋತ್ಪಾದಕ ಶಕ್ತಿಯನ್ನು ಪ್ರದರ್ಶನ ಮಾಡಿ, ನಮ್ಮನ್ನು ಪರೀಕ್ಷೆಗೆ ಒಳಪಡಿಸಲಿ ಭಾರತೀಯರಾದ ನಮ್ಮ ಒಗ್ಗಟ್ಟಿನ ಶಾಂತಿ ಮಂತ್ರ ಅವರನ್ನು ಧೂಳೀಪಟ ಮಾಡಲಿದೆ. ಜಗತ್ತಿನ ಹೀರೋಗಳು ನಾವಾಗಲಿದ್ದೇವೆ. ಕ್ರಾಂತಿಗಿಂತ ಶಾಂತಿಯೇ ಮೇಲಾಗಲಿದೆ. ಜೈ ಹಿಂದ್ ಜೈ ಭಾರತ್.





