ಸೈನಿಕರಿಗೆ ಅತ್ಯುತ್ತಮ ವೇತನ, ರೈತರಿಗೆ ಅತ್ಯುತ್ತಮ ಸೌಲಭ್ಯ ಕೋಡುತ್ತೇನೆ
ನಾನು ಭಾರತದ ಪ್ರಧಾನಿಯಾದರೆ...

ನಾನು ಪ್ರಧಾನಿಯಾದರೆ ಕೆಂಪು ಕೋಟೆಯಿಂದ ದೇಶಕ್ಕೆ ಏನು ಹೇಳಬಯಸುತ್ತೇನೆಂದರೆ
*ಇನ್ನು ಮುಂದೆ ನಮ್ಮ ಭಾರತ ದೇಶದಲ್ಲಿ ಜಾತಿಗಳ ಹೆಸರಲ್ಲಿ ಕೋಮು ಸಂಘರ್ಷ ಹಾಗೂ ನಾ ಮೇಲು ಅವ ಕೀಲು ಹಾಗೂ ವರ್ಣ ಭೇದ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮ ಹಾಗೂ ಸರ್ಕಾರದ ಯಾವುದೇ ಅನುಕೂಲತೆ ಇವನಿಗೆ ಲಭಿಸದು
* ನಮ್ಮ ದೇಶದಲ್ಲಿ ಹಗಲು ದರೋಡೆ ರೂಪದಲ್ಲಿ ಸರಕಾರಕ್ಕೆ ವಂಚನೆ ಮಾಡುತ್ತಾ ಇರುವ air India owner ನಂತಹ ಜನರಿಗೆ ತಕ್ಕ ಶಿಕ್ಷೆ
* ನಮ್ಮ ದೇಶದ ಪ್ರಜೆಗಳಿಗೆ ನಮ್ಮ ದೇಶದಲ್ಲಿ, ಉದ್ಯೋಗಕ್ಕೆ ಮೊದಲ ಆದ್ಯತೆ
* ಭಾರತವನ್ನೇ ಅಮಲು ಪದಾರ್ಥ ಮುಕ್ತ ದೇಶವಾಗಿ ಮಾಡುವುದು
* ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲಾ ಅನುಕೂಲತೆಗಳು ಸರಕಾರದ ವತಿಯಿಂದ ಸೌಲಭ್ಯ
* ಇನ್ನು ಮುಂದೆ ಯಾರಾದರೂ ಹತ್ಯೆ ,ರೇಪ್ ಮಾಡಿದ್ದಲ್ಲಿ ಅವನಿಗೆ ಮರಣ ದಂಡನೆ ಅಥವಾ ನೇಣುಗಂಬ; ಯಾರಿಗೆ ಯಾರನ್ನೂ ಕೊಲ್ಲುವ ಹಕ್ಕು ಇಲ್ಲ
* ದೇಶದ ಸೈನಿಕರಿಗೆ ಅತ್ಯುತ್ತಮ ವೇತನ
* ಕಾನೂನು ಎಲ್ಲರಿಗೂ ಒಂದೇ ಆದ್ದರಿಂದ ಲಂಚ ಕೊಡುವುದು ಹಾಗೂ ಪಡೆಯುವುದು ಕಂಡುಬಂದಲ್ಲಿ ೨೦ ವರ್ಷ ಕಠಿಣ ಶಿಕ್ಷೆ ಹಾಗೂ ಸರಕಾರದ ಎಲ್ಲಾ ಅನುಕೂಲತೆಗಳು ರದ್ದು
* ರಾಜಕೀಯದ ಹೆಸರಲ್ಲಿ ಜಗಳ ಕೋಮು ಸಂಘರ್ಷ ಉಂಟುಮಾಡುವ ಜನರ ವಿರುದ್ದ ಕಠಿಣ ಕ್ರಮ ಸರಕಾರದ ಎಲ್ಲಾ ಅನುಕೂಲತೆಗಳು ರದ್ದು
* ರೈತರಿಗೆ ಕೃಷಿಗೆ ಬೇಕಾಗುವ ಯಂತ್ರಗಳು ಹಾಗೂ ಬೀಜಗಳು ಮತ್ತು ಎಲ್ಲಾ ಸವಲತ್ತುಗಳು ಸರಕಾರದಿಂದ ಸೌಲಭ್ಯ
* ದೇಶದಲ್ಲಿರುವ ಪೌರಾಣಿಕ ಸ್ಥಳಗಳನ್ನು ನವೀಕರಿಸಿ, ಭಾರತೀಯ ಸಂಸ್ಕೃತಿಗಳ ಬಗ್ಗೆ ಅಧ್ಯಯನಕ್ಕೆ ಬರುವ ಜನಾಂಗಕ್ಕೆ ಸುಸಂಸ್ಕೃತ ಜೀವನಕ್ಕೆ ಅನುವು ಮಾಡಿಕೊಡುವುದು.
ಆತಂಕವಾದಿಗಳು, ರೌಡಿಗಳು ಹಾಗೂ ದೇಶ ದ್ರೋಹಿಗಳಿಗೆ ಎನ್ ಕೌಂಟರ್
*ತೈಲದ ಬೆಲೆ ಇಳಿಕೆ
* ದೇಶದ ಮೂಲೆಮೂಲೆಗೂ ಡಾಮರೀಕರಣ ಹಾಗೂ ಬೀದಿದೀಪ
* ಸರಕಾರದ ಹಣದಿಂದ ತಮ್ಮ ಜೇಬು ತುಂಬಿಸುವ ಭ್ರಷ್ಟ ರಾಜಕೀಯ ಮೇಧಾವಿಗಳಿಗೆ ಕಠಿಣ ಕ್ರಮ ಹಾಗೂ ಸರಕಾರದ ಎಲ್ಲಾ ಅನುಕೂಲತೆಗಳು ರದ್ದು







