ಕಾಸರಗೋಡು: ಕೈಯಾರ್‌ನಲ್ಲಿ 70 ನಿಮಿಷಗಳ ವಿಶಿಷ್ಟ ಸ್ವಾತಂತ್ರೋತ್ಸವ

ಕಾಸರಗೋಡು, ಆ.15: 70ನೆ ಸ್ವಾತಂತ್ರೋತ್ಸವದ ಅಂಗವಾಗಿ ಕೈಯಾರ್ ಕ್ರಿಸ್ತರಾಜ ದೇವಾಲಯದ ಐಸಿವೈಎಂ ಯುವ ಸಂಘಟನೆಯ ಮುಂದಾಳತ್ವದಲ್ಲಿ ಸಂಪೂರ್ಣವಾಗಿ ಹದೆಗೆಟ್ಟಿರುವ ಕೈಯಾರ್ ಚರ್ಚ್ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು.
70ನೆ ವರ್ಷಾಚರಣೆ ಹಿನ್ನೆಲೆಯಲ್ಲಿ 70 ನಿಮಿಷಗಳ ಕಾಲ ಶ್ರಮದಾನ ನಡೆಸಿ ಕಾರ್ಯಕರ್ತರು ವಿಶಿಷ್ಟವಾಗಿ ಸ್ವಾತಂತ್ರೋತ್ಸವವನ್ನು ಆಚರಿಸಿದರು.
ಕೆಥೋಲಿಕ್ ಸಭಾ, ವೈಸಿಎಸ್ ಹಾಗೂ ಚರ್ಚ್‌ನ ಪ್ರತಿನಿಧಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಕೈಯಾರ್ ಕ್ರಿಸ್ತ ರಾಜ ದೇವಾಲಯದ ಧರ್ಮಗುರು ವಂ.ವಿಕ್ಟರ್ ಡಿಸೋಜ, ಪಾಲನಾ ಸಮಿತಿ ಉಪಾಧ್ಯಕ್ಷ ಜಾರ್ಜ್ ಡಿ ಅಲ್ಮೇಡಾ, ಕಾರ್ಯದರ್ಶಿ ರಾಜ್‌ಕುಮಾರ್, ಕೆಥೋಲಿಕ್ ಸಭಾದ ಅಧ್ಯಕ್ಷ ಫೆಲಿಕ್ಸ್ ಕ್ರಾಸ್ತ ಅಟ್ಟೆಗೋಳಿ, ವೈಸಿಎಸ್ ಅಧ್ಯಕ್ಷ ಅನುಷ್ ಪವೆಲ್, ಐಸಿವೈಎಂ ಘಟಕದ ಅಧ್ಯಕ್ಷ ಜೋಸ್ಟಲ್ ಡಿಸೋಜ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story





