ಒಲಿಂಪಿಕ್ಸ್ ಹ್ಯಾಮರ್ ಥ್ರೋ: ಅನಿಟಾ ವಿಶ್ವ ದಾಖಲೆ

ರಿಯೋ ಡಿಜನೈರೊ, ಆ.15: ರಿಯೋ ಒಲಿಂಪಿಕ್ಸ್‌ನ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ ಪೊಲೆಂಡ್‌ನ ವಿಶ್ವ ಚಾಂಪಿಯನ್ ಅನಿಟಾ ವರ್ಡರ್‌ಝಿಕ್ ಚಿನ್ನದ ಪದಕ ಜಯಿಸಿದ್ದಾರೆ.
ಸೋಮವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಹ್ಯಾಮರ್‌ನ್ನು 82.29 ಮೀ.ದೂರ ಎಸೆದ ವಿನಿಟಾ ತನ್ನದೇ ವಿಶ್ವ ದಾಖಲೆ ಮುರಿದು ಹೊಸ ದಾಖಲೆ ಬರೆದರು. 31ರ ಹರೆಯದ ಅನಿಟಾ ಈ ತಿಂಗಳಾರಂಭದಲ್ಲಿ ತಮ್ಮ ದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ 81.08 ಮೀ. ಹ್ಯಾಮರ್‌ನ್ನು ಎಸೆದು ದಾಖಲೆ ನಿರ್ಮಿಸಿದ್ದರು.
Next Story





