Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹಬ್ಬದ ದಿನಗಳಲ್ಲಿ ಹಿಮಾಲಯಕ್ಕೇರುವ ಬಸ್...

ಹಬ್ಬದ ದಿನಗಳಲ್ಲಿ ಹಿಮಾಲಯಕ್ಕೇರುವ ಬಸ್ ಪ್ರಯಾಣ ದರ?

ರಮಾನಂದ ಶರ್ಮಾರಮಾನಂದ ಶರ್ಮಾ15 Aug 2016 11:50 PM IST
share

ಹಬ್ಬಗಳ ಮಹತ್ವ ಎಂದರೆ, ಹಿಂದು, ಮುಸ್ಲಿಮ್ ಮತ್ತು ಕ್ರೈಸ್ತರು ಯಾರೇ ಆಗಲಿ, ಅವರು ತಮ್ಮ ಮನೆಯವರೊಂದಿಗೆ ಆಚರಿಸಲು ಇಚ್ಛೆಪಡುತ್ತಾರೆ. ಎಷ್ಟೇ ಖರ್ಚಾಗಲಿ, ತೊಂದರೆಯಾಗಲಿ, ಅವರಿಗೆ ತಮ್ಮ ಊರಿನಲ್ಲೇ ತಮ್ಮವರೊಂದಿಗೆ ಆಚರಿಸುವುದರಲ್ಲಿ ಹೆಚ್ಚಿನ ಸಂತೃಪ್ತಿ ಇರುತ್ತದೆ. ಇದೊಂದು ಭಾವನಾತ್ಮಕ ವಿಷಯವಾಗಿದ್ದು, ಜನರು ಗುಳೇ ಹೋದಂತೆ ಹಬ್ಬಗಳ ಸಂದರ್ಭಗಳಲ್ಲಿ ಊರಿನತ್ತ ಪ್ರಯಾಣ ಬೆಳೆಸುತ್ತಾರೆ.

   ಆದರೆ, ಪ್ರಯಾಣಿಕರ ಅಸಹಾಯಕತೆ, ಅನಿವಾರ್ಯತೆಯನ್ನು, ಊರು ಸೇರಿಯೇ ಹಬ್ಬ ಮಾಡಬೇಕೆನ್ನುವ ಅವರ ಒತ್ತಾಸೆಯನ್ನು ಖಾಸಗಿ ಸಾರಿಗೆ ಸಂಸ್ಥೆಗಳು ಮನಸ್ವೀ ದುರುಪಯೋಗ ಮಾಡಿಕೊಳ್ಳುತ್ತವೆ. ಹಬ್ಬ ಹರಿದಿನಗಳಲ್ಲಿ ಅವರ ಹಿಂದಿನ ದರಪಟ್ಟಿ ನೇಪಥ್ಯಕ್ಕೆ ಸರಿಯುತ್ತಿದ್ದು, ಪ್ರಯಾಣದ ದಿನ ಸಮೀಪಿಸುತ್ತಿದ್ದಂತೆ ಅದು ಏರುತ್ತಲೇ ಹೋಗುತ್ತದೆ. ಪ್ರಯಾಣದ ದಿನ ಮತ್ತು ಬಸ್ಸು ಹೊರಡುವಾಗ ಅವರು ಹೇಳಿದ್ದೇ ದರ ಮತ್ತು ಯಾವುದೇ ತರ್ಕ- ವಾದಗಳಿಗೆ ಆಸ್ಪದವಿಲ್ಲ. ಮುಲಾಜಿಲ್ಲದೆ ‘‘ಬಸ್ ಹತ್ತಿ ಇಲ್ಲವೇ ಬಿಡಿ’’ ಎಂದು ನಿಮ್ಮನ್ನು ಪಕ್ಕಕ್ಕೆ ಸರಿಸಿ ಇನ್ನೊಬ್ಬ ಪ್ರಯಾಣಿಕನನ್ನು ಕರೆದು ಹತ್ತಿಸಿಕೊಳ್ಳುತ್ತಾರೆ. ಅವರು ಹೆಚ್ಚಿಗೆ ಬಸ್ಸನ್ನು ಬಿಟ್ಟಾಗ ಹೆಚ್ಚಿಗೆ ವಸೂಲಿ ಮಾಡುವುದರಲ್ಲಿ ಅರ್ಥವಿದೆ. ಆ ಬಸ್ಸುಗಳು ಹಿಂದಿರುಗಿ ಬರುವಾಗ ಬಹುತೇಕ ಖಾಲಿ ಬರುತ್ತಿದ್ದು, ಆ ನಷ್ಟ ತಂಬಿಕೊಳ್ಳಲು ಹೆಚ್ಚಿಗೆ ವಸೂಲಿ ಮಾಡುವುದರಲ್ಲಿ ತಥ್ಯವಿದೆ. ಇದು ಸರಳ ವ್ಯವಹಾರ ಸಮೀಕರಣ. ಆಗಬಹುದಾದ ನಷ್ಟವನ್ನು ಟಿಕೆಟ್ ದರವನ್ನು ಒಂದು ಪಟ್ಟು ಹೆಚ್ಚು ಮಾಡಿದರೆ ಸಾಕಾಗುತ್ತದೆ. ಅದರೆ, ಇದಕ್ಕೆ ಮಿತಿ ಇರುವುದಿಲ್ಲ ಮತ್ತು ವಿಶೇಷ ಅಥವಾ ಹೆಚ್ಚುವರಿ ಬಸ್ಸುಗಳಲ್ಲದೆ, ಸಾಮಾನ್ಯ ಬಸ್ಸುಗಳಿಗೂ ಈ ರೀತಿ ದರ ಹೆಚ್ಚಿಸುವುದು ಅರ್ಥವಾಗದ ತರ್ಕ.

 ಈ ಸಂದರ್ಭಗಳಲ್ಲಿ, ಈ ಊರಿನಿಂದ ಆ ಊರಿಗೆ ಇಂತಿಷ್ಟು ಟಿಕೆಟ್ ದರ ಎನ್ನುವ ಕಾಲ ಹೋಗಿದ್ದು, ಬುಕಿಂಗ್ ಮಾಡುತ್ತಿರುವ ಸಮಯದ ಟಿಕೆಟ್ ದರವೇ ಅಂತಿಮ ಎನ್ನುವಂತಾಗಿದೆ. ಬಸ್ಸು ಮುಷ್ಕರದ ಸಮಯದಲ್ಲಿ ರಿಕ್ಷಾಗಳು ಸುಲಿಯುವಂತೆ, ಹಬ್ಬ- ಹರಿದಿನಗಳಲ್ಲಿ ಬಸ್ಸುಗಳು ಈ ಘನಕಾರ್ಯವನ್ನು ಮಾಡುತ್ತವೆ. ವಿಚಿತ್ರವೆಂದರೆ ಟಿಕೆಟ್ ಕೈಗೆ ಬಂದಾಗಲೇ ಟಿಕೆಟ್ ದರ ಬುಕಿಂಗ್ ಸಿಬ್ಬಂದಿಗೆ ಗೊತ್ತಾಗುವುದು. ವಿಷಾದವೆಂದರೆ ಯಾವ ಕಾಲಕ್ಕೂ ಅವರು ನಿಗದಿತ ದರಕ್ಕೆ ಕಡಿಮೆ ದರದಲ್ಲಿ ಟಿಕೆಟ್ ಬುಕ್ ಮಾಡುವದಿಲ್ಲ. ಬಸ್ಸುಗಳು ಖಾಲಿ ಹೋದರೂ ಎಂದಿಗೂ ಅವರು ರಿಯಾಯಿತಿ ಕೊಡುವುದಿಲ್ಲ. ಈ ಮಾತು ಬೇರೆ.

 ಒಂದು ಕಾಲಕ್ಕೆ ಕೇವಲ ಖಾಸಗಿ ಬಸ್ಸುಗಳಿಗೆ ಸೀಮಿತವಾಗಿದ್ದ ಈ ಸುಲಿಗೆ, ಇತ್ತೀಚಿನ ದಿನಗಳಲ್ಲಿ ಸರಕಾರಿ ಬಸ್ಸುಗಳಿಗೂ ವ್ಯಾಪಿಸಿದ್ದು ಒಂದು ಮಹಾ ದುರಂತ. ಗಾಳಿ ಬಂದಾಗ ತೂರಿಕೋ ಎನ್ನುವಂತೆ, ಇದೇ ಸಮಯವೆಂದು ತಮ್ಮ ಸಂಸ್ಥೆಯ ಹಣಕಾಸು ಪರಿಸ್ಥಿತಿಯನ್ನು ಆದಷ್ಟು ಹೆಚ್ಚಿಗೆ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಅದರಲ್ಲಿ ಸಫಲತೆಯನ್ನು ಕಾಣುತ್ತಾರೆ ಕೂಡಾ.

    ಹಬ್ಬ- ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ಖಾಸಗಿ ಬಸ್ಸು ಸಾರಿಗೆಯವರು ಪ್ರಯಾಣಿಕರ ಸುಲಿಗೆ ಮಾಡುವುದನ್ನು ಮತ್ತು ಈ ನಿಟ್ಟಿನಲ್ಲಿ ಜನರ ಮತ್ತು ಮಾಧ್ಯಮದ ಆಕ್ರೋಶವನ್ನು ನೋಡಿದ ಸರಕಾರ, ಈ ಕುರಿತು ಕಾನೂನು ಕ್ರಮ ಅಥವಾ ನೀತಿ ನಿಯಮಾವಳಿಗಳನ್ನು ಮಾಡುವುದಾಗಿ ಹೇಳುತ್ತಲೇ ಇದ್ದು, ವರ್ಷಗಳು ಮುಗಿದರೂ, ಹಬ್ಬಗಳ ನಂತರ ಹಬ್ಬಗಳು ಬಂದು ಹೋದರೂ ಯಾವುದೂ ಕಾರ್ಯಗತವಾಗಿಲ್ಲ. ಇನ್ನೂ ಚಿಂತನೆಯ ಹಂತದಲ್ಲಿಯೇ ಇದೆ. ಸರಕಾರ ಹೇಳುವ ‘‘ಸದ್ಯದಲ್ಲಿಯೇ’’ ದಿನವನ್ನು ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರದ ಗಂಭೀರತೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಜನರು ಸಂದೇಹಿಸುತ್ತಿದ್ದಾರೆ, ಖಾಸಗಿ ಬಸ್ಸುಗಳಂತೆ ಸರಕಾರಿ ಬಸ್ಸುಗಳೂ ಪ್ರಯಾಣಿಕರ ಅಸಹಾಯಕತೆ, ಅನಿವಾರ್ಯತೆಯನ್ನು ಸದುಪಯೋಗ ಮಾಡಿಕೊಳ್ಳುವಾಗ, ಈ ನಿಟ್ಟಿನಲ್ಲಿ ಪ್ರಯಾಣಿಕ ಸ್ನೇಹಿ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ನೈತಿಕ ಸ್ಥೈರ್ಯ ಇರಬಹುದೇ? ಸರಕಾರ ದಿಟ್ಟ ಹೆಜ್ಜೆ ಇಟ್ಟರೆ, ಖಾಸಗಿಯವರು ಅದನ್ನು ನೈತಿಕವಾಗಿಯಾದರೂ ಅನುಸರಿಸುವ ಅನಿವಾರ್ಯಯತೆ ಬರುತ್ತದೆ. ನೂರಕ್ಕೆ ನೂರರಷ್ಟು ಅಲ್ಲದಿದ್ದರೂ, ಕನಿಷ್ಠ ಸ್ವಲ್ಪಮಟ್ಟಿಗಾದರೂ ಅವರು ಸ್ಪಂದಿಸಲೇ ಬೇಕಾಗುತ್ತದೆ. ಈಗ ಚೆಂಡು ಸರಕಾರದ ಅಂಗಳದಲ್ಲಿ ಇದ್ದು, ಸರಕಾರವೇ ಮೊದಲು ಮುನ್ನಡೆಯಬೇಕಾಗಿದೆ.

     ಇದಕ್ಕೆ ಮುಖ್ಯ ಕಾರಣ ನಮ್ಮ ರಾಜ್ಯದಲ್ಲಿ ಇನ್ನಿತರ ರಾಜ್ಯಗಳಂತೆ, ಮುಖ್ಯವಾಗಿ ಉತ್ತರದ ರಾಜ್ಯಗಳಂತೆ ರೈಲು ಮಾರ್ಗಗಳಿಲ್ಲ. ಜನರ ಪ್ರಯಾಣ ಬಹುತೇಕ ಬಸ್ಸಿನಲ್ಲಿಯೇ. ಉತ್ತರ ಭಾರತದಲ್ಲಿ ಜನರು ರೈಲಿನಲ್ಲಿ ಸುಖವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಪ್ರಯಾಣಿಸುತ್ತಾರೆ. ನಮ್ಮ ರಾಜ್ಯದಲ್ಲಿದ್ದಷ್ಟು ದೂರಪ್ರಯಾಣದ ಬಸ್ಸುಗಳು ಅಲ್ಲಿರುವುದಿಲ್ಲ. ಕರ್ನಾಟಕದ 86 ತಾಲೂಕುಗಳಲ್ಲಿ ರೈಲು ಮಾರ್ಗಗಳೇ ಇಲ್ಲ. ಕೊಡಗಿನಲ್ಲಿ ಜನರು ರೈಲನ್ನು ಚಲನಚಿತ್ರ ಮತ್ತು ಟಿವಿಯಲ್ಲಿ ಮಾತ್ರ ನೋಡಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತೀ ಸಾವಿರ ಕಿ.ಮೀ. ಗೆ 16 ಕಿ.ಮೀ. ರೈಲು ಮಾರ್ಗ ಇದ್ದರೆ, ಬೇರೆ ರಾಜ್ಯಗಳಲ್ಲಿ 32 ಕಿ.ಮೀ.ಗಳ ವರೆಗೂ ಇದೆ. ಇದ್ದ ರೈಲು ಮಾರ್ಗಗಳಲ್ಲಿ ನಿರೀಕ್ಷೆಯಷ್ಟು ಮತ್ತು ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ರೈಲುಗಳು ಓಡುವುದಿಲ್ಲ. ಹಬ್ಬ ಹರಿ ದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ಹೊರರಾಜ್ಯಗಳಿಗೆ, ಈಶಾನ್ಯ ಭಾರತ, ಉತ್ತರದ ರಾಜ್ಯಗಳಿಗೆ ಚೆನ್ನೈ ಮತ್ತು ಕೇರಳಗಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಾರೆ. ಆದರೆ, ಕರ್ನಾಟಕ ರಾಜ್ಯದ ಒಳಗೆ ವಿಶೇಷ ರೈಲುಗಳನ್ನು ಬಿಡುವುದಿಲ್ಲ. ಸಿಇಟಿ, ಕಾಮೆಡ್-ಕೆ ಮತ್ತು ರೈಲು ನೇಮಕಾತಿ ಪರೀಕ್ಷೆಗಳ ಸಮಯದಲ್ಲೂ ಬೆಂಗಳೂರಿನಿಂದ ಹೊರರಾಜ್ಯಗಳಿಗೆ ವಿಶೇಷ ರೈಲುಗಳು ಹೋಗುತ್ತವೆ. ವಿಶೇಷ ದಿನಗಳಲ್ಲಿ ಕರ್ನಾಟಕದ ಒಳಗೆ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಬೆಳಗಾವಿ, ಕಲಬುರಗಿ ಮತ್ತು ಕಾರವಾರಕ್ಕೆ ರೈಲುಗಳನ್ನು ಬಿಟ್ಟು ಬಸ್ಸಿನಲ್ಲಿ ದಟ್ಟನೆಯನ್ನು ಕಡಿಮೆಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಬಹುದಿತ್ತು. ಮಗು ಅತ್ತರೂ ಹಾಲು ಕೊಡದಿರುವ ಕಾಲದಲ್ಲಿ, ಅಳದೇ ಹಾಲು ಸಿಗಬಹುದೇ. ರಾಜ್ಯ ಸರಕಾರವಾಗಲಿ... ಯಾವುದಾದರೂ ಸಂಘ ಸಂಸ್ಥೆಗಳಾಗಲಿ ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯ ಮೇಲೆ ಒತ್ತಡ ಹೇರಿವೆಯೇ? ಬಜೆಟ್‌ನಲ್ಲಿ ಮಂಜೂರಾದ ಅಳ್ಣಾವರ- ಧಾರವಾಡ, ಬೆಂಗಳೂರು- ಮಂಗಳೂರು ರೈಲನ್ನೇ ಓಡಿಸಲು ಎರಡುವರ್ಷಗಳಿಂದ ಮೀನಮೇಷ ಎಣಿಸುತ್ತಿರುವ ರೈಲ್ವೆ ಇಲಾಖೆ, ಅಕಸ್ಮಾತ್ ವಿಶೇಷ ರೈಲುಗಳಿಗೆ ಬೇಡಿಕೆ ಸಲ್ಲಿಸಿದರೆ ಈಡೇರಿಸಬಹುದೇ? ಬೇಡಿಕೆ ಯಾವುದೇ ಇರಲಿ, ರೈಲ್ವೆ ಇಲಾಖೆ ಕನ್ನಡಿಗರ ಬೇಡಿಕೆಗಳಿಗೆ ಮತ್ತು ಭಾವನೆಗಳಿಗೆ ಅಷ್ಟು ಸುಲಭವಾಗಿ ಸ್ಪಂದಿಸುವುದಿಲ್ಲ.. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರ ಲಾಬಿ ಕೂಡಾ ಇಲ್ಲ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಗಮನಕೊಡಬೇಕು. ಹೆಚ್ಚು ರೈಲು ಸಂಪರ್ಕ ಪಡೆಯುವಲ್ಲಿ, ಜನತೆಯ ಮತ್ತು ಸರಕಾರದ ವಿಫಲತೆ ಮತ್ತು ಕರ್ನಾಟಕದ ಬಗೆಗೆ ರೈಲ್ವೆ ಇಲಾಖೆಯ ನಿರ್ಲಕ್ಷದಿಂದಾಗಿ ಸಾರಿಗೆ ಇಲಾಖೆ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳು ಹೆಚ್ಚಿನ ಲಾಭ ಗಳಿಸುವಂತಾಗಿದೆ.

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X