ಕಸ ಸಂಗ್ರಹ ಹೀಗೇಕೇ?
ಮಾನ್ಯರೆ,
ಉಡುಪಿ ನಗರ ಸಭಾವ್ಯಾಪ್ತಿಯ ಕಸಸಂಗ್ರಹ ವ್ಯವಸ್ಥೆ ಇತ್ತೀಚಿನವರೆಗೂ ಸಮರ್ಪಕವಾಗಿತ್ತು. ಕಸಸಂಗ್ರಹ ವಾಹನಗಳಲ್ಲಿನ ಮಂದಿ ಪ್ರತೀ ಮನೆಗೂ ಭೇಟಿ ನೀಡಿ ಕಸದ ಚೀಲಗಳನ್ನು ಒಯ್ಯುತ್ತಿದ್ದರು. ಆದರೆ ಇದೀಗ ಬಂದ ಹೊಸ ವ್ಯವಸ್ಥೆಯಂತೆ ಕಸ ಸಂಗ್ರಹಿಸುವ ವಾಹನಗಳು ಮುಖ್ಯ ರಸ್ತೆಗಳಲ್ಲೇ ನಿಲ್ಲುತ್ತಿದ್ದು, ಒಳದಾರಿಯಲ್ಲಿರುವ ಮನೆಗಳ ಮಂದಿಯೇ ಕಸವನ್ನು ಆ ವಾಹನಕ್ಕೆ ಕೊಂಡುಹೋಗಿ ಹಾಕಬೇಕಾಗಿದೆ.
ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಎಲ್ಲರೂ ದುಡಿಯಬೇಕಾಗಿರುವುದರಿಂದ ಕಸದ ವಾಹನ ಬರುವ ಸಮಯದಲ್ಲಿ ಹೆಚ್ಚಾಗಿ ಮನೆಯಲ್ಲಿರುವವರು ಅಸಹಾಯಕ ವೃದ್ಧರು ಮಾತ್ರ.
ನಡೆಯಲೇ ಅಶಕ್ತರಾದ ಇಂತಹ ವೃದ್ಧರಿಂದ ಮನೆಯ ಕಸವನ್ನು ಒಂದಷ್ಟು ದೂರದಲ್ಲಿರುವ ವಾಹನಕ್ಕೆ ತಂದು ಹಾಕಲು ಸಾಧ್ಯವೇ?
ಆದ್ದರಿಂದ ನಗರ ಸಭೆಯು ವ್ಯವಸ್ಥೆ ಬದಲಾಯಿಸುವಾಗ ಹಿರಿಯ ನಾಗರಿಕರ ಪರಿಸ್ಥಿತಿಯನ್ನು ಗಮನಿಸಿ ಹಿಂದೆ ಕಸ ಸಂಗ್ರಹಿಸುತ್ತಿದ್ದ ರೀತಿಯಲ್ಲಿ ಮುಂದುವರಿಸೀತೇ?.
Next Story





